ಕೇರಳ (ಮಾ. 2): ತಲಶ್ಶೇರಿ ಹಾಗೂ ಪಾಲಕ್ಕಾಡ್‌ ಜಿಲ್ಲೆ ಮಲಮಪ್ಪುಳದ ಸರ್ಕಾರಿ ಕಾಲೇಜುಗಳಲ್ಲಿ ಭಾರತ ವಿರೋಧಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ. ಶುಕ್ರವಾರ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇವುಗಳನ್ನು ಅಂಟಿಸಿದವರಿಗೆ ಬಲೆ ಬೀಸಿದ್ದಾರೆ.

ಸ್ಟೂಡೆಂಟ್ಸ್‌ ಫೆಡರೇಷನ್‌ ಆಫ್‌ ಇಂಡಿಯಾ (ಎಸ್‌ಎಫ್‌ಐ) ಸಂಘಟನೆ ಈ ಪೋಸ್ಟರ್‌ಗಳನ್ನು ಅಂಟಿಸಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಆರೋಪಗಳನ್ನು ಎಸ್‌ಎಫ್‌ಐ ತಳ್ಳಿಹಾಕಿದೆ.

ಕೊಬ್ಬೇನೂ ಕರಗಿಲ್ಲ.. ಪೊಲೀಸರಿಗೆ ಪ್ರಶ್ನೆ ಮಾಡ್ತಿದ್ದಾಳೆ ಕ್ರಿಮಿ ಅಮೂಲ್ಯಾ!

ತಲಶ್ಶೇರಿಯ ಬ್ರೆನೆನ್‌ ಕಾಲೇಜು ಹಾಗೂ ಮಲಮಪ್ಪುಳದ ಐಟಿಐ ಕಾಲೇಜುಗಳಲ್ಲಿ ಮಲಯಾಳಂನಲ್ಲಿ ಬರೆಯಲಾಗಿರುವ ಈ ಪೋಸ್ಟರ್‌ಳು ಪ್ರತ್ಯಕ್ಷವಾಗಿವೆ. ‘ಭಾರತ ನನ್ನ ದೇಶವಲ್ಲ. ಈ ಸ್ಕೌಂಡ್ರಲ್‌ಗಳು (ಫಟಿಂಗರು) ನನ್ನ ಸೋದರ-ಸೋದರಿಯರಲ್ಲ. ನಾನು ಇಂಥ ದೇಶವನ್ನು ಪ್ರೀತಿಸುವುದಿಲ್ಲ. ಇಂಥ ಸ್ಥಿತಿಯಲ್ಲಿ ಈ ದೇಶದ ಬಗ್ಗೆ ಹೆಮ್ಮೆ ಪಡಲ್ಲ. ಭಾರತದಲ್ಲಿ ಇಂತಹ ವಾತಾವರಣದಲ್ಲಿ ಈ ಭಯೋತ್ಪಾದಕರ ಜತೆ ವಾಸಿಸುತ್ತಿರುವುದಕ್ಕೆ ನನಗೆ ನಾಚಿಕೆಯಾಗುತ್ತದೆ. ಎಸ್‌ಎಫ್‌ಐ’ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.

ಗೌರಿ ಲಂಕೇಶ್ ಹೆಸರು ಹೇಳಿದಾಗ ದೇಶದ್ರೋಹಿ ಅಮೂಲ್ಯಾ ರಿಯಾಕ್ಷನ್!

ಈ ಬಗ್ಗೆ ಪ್ರತಿಕ್ರಿಯಿಸಿರುವ ಧರ್ಮಾದಂ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಮಹೇಶ್‌, ‘ಗಲಭೆಗೆ ಪ್ರಚೋದನೆ (ಐಪಿಸಿ ಸೆಕ್ಷನ್‌ 153) ಆರೋಪ ಹೊರಿಸಿ ನಾವು ಪ್ರಕರಣ ದಾಖಲಿಸಿಕೊಂಡಿದ್ದೇವೆ. ಪೋಸ್ಟರ್‌ ಅಂಟಿಸಿದ್ಯಾರು ಎಂಬ ತನಿಖೆ ಆರಂಭಿಸಿದ್ದೇವೆ’ ಎಂದರು.

- ಸಾಂದರ್ಭಿಕ ಚಿತ್ರ