ತೆಲಂಗಾಣ 20 ಸ್ಥಳಗಳಲ್ಲಿ ದಾಳಿ: ರೇರಾ ಅಧಿಕಾರಿ ಬಳಿ ಪತ್ತೆಯಾಯ್ತು 100 ಕೋಟಿ ಆಸ್ತಿ
ತೆಲಂಗಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಶಿವ ಬಾಲಕೃಷ್ಣ ಎಂಬುವರ ಮನೆಯಲ್ಲಿ ಬರೋಬ್ಬರಿ 100 ಕೋಟಿ ರು.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಹೈದರಾಬಾದ್: ತೆಲಂಗಾಣದ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಕಾರ್ಯದರ್ಶಿಯಾಗಿರುವ ಶಿವ ಬಾಲಕೃಷ್ಣ ಎಂಬುವರ ಮನೆಯಲ್ಲಿ ಬರೋಬ್ಬರಿ 100 ಕೋಟಿ ರು.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಬುಧವಾರ ಮುಂಜಾನೆ 5 ಗಂಟೆಗೆ ಭ್ರಷ್ಟಾಚಾರ ನಿಗ್ರಹ ದಳವು ಶಿವ ಬಾಲಕೃಷ್ಣಗೆ ಸಂಬಂಧಿಸಿದ 20 ಜಾಗಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿತು. ಈ ವೇಳೆ 2 ಕೆಜಿಗೂ ಅಧಿಕ ಚಿನ್ನ ಮನೆಯ ದಾಖಲೆ ಪತ್ರಗಳು, ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿರುವ ಪತ್ರಗಳು, ಬೇನಾಮಿ ಆಸ್ತಿಗೆ ಸಂಬಂಧಿಸಿದ ದಾಖಲೆಗಳು, 40 ಲಕ್ಷ ರು. ಹಣ, 60ಕ್ಕೂ ಹೆಚ್ಚು ಕೈಗಡಿಯಾರಗಳು, 14 ಮೊಬೈಲ್‌ಗಳು ಮತ್ತು 10 ಲ್ಯಾಪ್‌ಟಾಪ್‌ಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆದಾಯ ಮೀರಿ ಶೇ.216ರಷ್ಟು ಆಸ್ತಿ: ರಾಮನಗರ ಉಪವಿಭಾಗಾಧಿಕಾರಿ ಮಂಜುನಾಥ್ ಅಮಾನತು
ಇನ್ನು ಬಾಲಕೃಷ್ಣ ಅವರಿಗೆ ಸಂಬಂಧಿಸಿದ ಲಾಕರ್‌ಳು ಮತ್ತು ಘೋಷಣೆ ಮಾಡಿ ಕೊಳ್ಳದ ಆಸ್ತಿಗಳ ಕುರಿತು ಗುರುವಾರವೂ ತನಿಖೆ ಮುಂದುವರೆಯಲಿದೆ. ಶಿವ ಬಾಲಕೃಷ್ಣ ಅವರು ಇದಕ್ಕೂ ಮುಂಚೆ ಹೈದರಾಬಾದ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿರ್ದೇಶಕರಾಗಿದ್ದರು.
ರೈಲ್ವೆ ನೌಕರಿಗಾಗಿ ಭೂಮಿ ಲಂಚ ಪಡೆದ ಹಗರಣ: ಲಾಲು ಕುಟುಂಬಕ್ಕೆ ಮತ್ತೆ ಶಾಕ್