ನವದೆಹಲಿ(ಅ.08) ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ.  ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು  ಸಾಮಾನ್ಯ ಹಿತಾಸಕ್ತಿಗಳಿಂದ ನಮ್ಮ ವ್ಯವಹಾರ ನಡೆಯುತ್ತಿದೆ. ವ್ಯಾಪಾರ ಮತ್ತು ಹೂಡಿಕೆ ಭಾರತ ಹಾಗೂ ಕೆನಡಾ ಸಂಬಂಧದ ಅವಿಭಾಜ್ಯವಾಗಿವೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿದ ವಿದೇಶಗಳ ಪೈಕಿ ಕೆನಡಾ 20ನೇ ಸ್ಥಾನದಲ್ಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  

#Unite2FightCorona, ಕೋವಿಡ್‌ ವಿರುದ್ಧ ಜನಾಂದೋಲನ, ಬೃಹತ್ ಕಾರ್ಯಕ್ರಮಕ್ಕೆ ಮೋದಿ ಚಾಲನೆ!

ಕೆನಡಾದಲ್ಲಿ ನಡೆದ ಇನ್ವೆಸ್ಟ್ ಇಂಡಿಯಾ ಸಮ್ಮೇಳನದಲ್ಲಿ ಪ್ರಧಾನಿ  ನರೇಂದ್ರ ಮೋದಿ ವರ್ಚುವಲ್ ಕಾನ್ಫೆರನ್ಸ್ ಮೂಲಕ ಮುಖ್ಯ ಭಾಷಣ ಮಾಡಿದರು. ಭಾರತ ಮತ್ತು ಕೆನಡಾ ನಡುವಿನ ವ್ಯವಹಾರ ಸಂಬಂಧ  ಮತ್ತಷ್ಟು ಬಲಪಡಿಸುವ ಕುರಿತು ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು.  ಕೆನಡಾದ ವ್ಯಾಪಾರ ಸಮುದಾಯಕ್ಕೆ ಭಾರತದಲ್ಲಿ ಹೂಡಿಕೆ ಮಾಡುವ ಅವಕಾಶ ಹಾಗೂ ಭಾರತವನ್ನು ಹೂಡಿಕೆ ತಾಣವಾಗಿಸುವ ನಿಟ್ಟಿನಲ್ಲಿ ಮೋದಿ ಮಹತ್ವದ ಭಾಷಣ ಮಾಡಿದ್ದಾರೆ.

ರಷ್ಯಾ ಅಧ್ಯಕ್ಷರಿಗೆ ಕರೆ ಮಾಡಿದ ಮೋದಿ.. ಕಾರಣ ಸರಳ!...

ಇನ್ವೆಸ್ಟ್ ಇಂಡಿಯಾ ಸಮ್ಮೇಳನದಲ್ಲಿ ಮೋದಿ ಭಾಷಣ ಪ್ರಮುಖ ಅಂಶ:

  • ಕೊರೋನಾ ವಕ್ಕರಿಸಿದ ಬಳಿಕ ಇಡೀ ವಿಶ್ವವೇ ಹಲವು ಸಮಸ್ಯೆ ಎದುರಿಸುತ್ತಿದೆ. ಉತ್ಪಾದನೆ, ಉತ್ಪನ್ನಗಳ ಸರಬರಾಜು ಸೇರಿದಂತೆ ಪ್ರತಿ ಕ್ಷೇತ್ರವೂ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಭಾರತ ಕೂಡ ಹೊರತಲ್ಲ. ಆದರೆ ಈ ಸಮಸ್ಯೆಗಳಿಗೆ ಭಾರತ ಉತ್ತರ ಹುಡುಕಿ ಪ್ರಗತಿಯತ್ತ ಮುನ್ನಗುತ್ತಿದೆ
  • ಕೊರೋನಾ ವೈರಸ್‌ನಿಂದ ಇಡೀ ವಿಶ್ವವೇ ಸ್ಥಬ್ಧವಾಗಿತ್ತು. ಈ ಕಠಿಣ ಸಂದರ್ಭದಲ್ಲಿ ಭಾರತ  150 ದೇಶಗಳಿಗೆ ಔಷಧಿಯನ್ನು ವಿತರಣೆ ಮಾಡಿದೆ. ಈ ಮೂಲಕ ವಿಶ್ವದ ಸಂಕಷ್ಟಕ್ಕೆ ಭಾರತ ನೆರವಾಗಿದೆ. ಇಷ್ಟೇ ಅಲ್ಲ 150 ದೇಶಗಳಿಗೆ ಔಷಧಿ ವಿತರಣೆ ಮಾಡುವಷ್ಟು ಉತ್ಪಾದನೆಯನ್ನು ಭಾರತ ಮಾಡಿದೆ.
  • ಲಾಕ್‌ಡೌನ್ ಸಂಕಷ್ಟದ ಸಮಯದಲ್ಲಿ ಭಾರತದ ಕೃಷಿ ಕ್ಷೇತ್ರದಲ್ಲಿ ಬೆಳವಣಿಯಾಗಿದೆ.  ಮಾರ್ಚ್ ಹಾಗೂ ಜೂನ್ ತಿಂಗಳ ಅವಧಿಯಲ್ಲಿ ಕೃಷ್ಟಿ ರಫ್ತು ಶೇಕಡಾ 23 ರಷ್ಟು ಹೆಚ್ಚಾಗಿದೆ. 
  •  
  • ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ(  FDI) ಹಲವು ಸುಧಾರಣೆ ತರಲಾಗಿದೆ. ಇಷ್ಟೇ ಅಲ್ಲ ಸರಳೀಕರಣಗೊಳಿಸಲಾಗಿದೆ.  ತೆರಿಗೆ ಹಾಗೂ ಸಾರ್ವಭೌಮ ಸಂಪತ್ತು ಮತ್ತು ಪಿಂಚಣಿ ನಿಧಿಗಳ ಮಾರ್ಗಸೂಚಿಗಳಲ್ಲಿ ಸರಳೀಕರಣಗೊಳಿಸಲಾಗಿದೆ.
  • ಭಾರತ-ಕೆನಡಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ.  ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು  ಸಾಮಾನ್ಯ ಹಿತಾಸಕ್ತಿಗಳಿಂದ ನಮ್ಮ ವ್ಯವಹಾರ ನಡೆಯುತ್ತಿದೆ. ನಮ್ಮ ನಡುವಿನ ವ್ಯಾಪಾರ ಮತ್ತು ಹೂಡಿಕೆ ಭಾರತ ಹಾಗೂ ಕೆನಡಾ ಸಂಬಂಧಕ್ಕೆ ಅವಿಭಾಜ್ಯವಾಗಿವೆ. ಭಾರತದಲ್ಲಿ ಅತೀ ಹೆಚ್ಚು ಹೂಡಿಕೆ ಮಾಡಿದ ವಿದೇಶಗಳ ಪೈಕಿ ಕೆನಡಾ 20ನೇ ಸ್ಥಾನದಲ್ಲಿದೆ.