Asianet Suvarna News Asianet Suvarna News

ಹಿರಿಯ ಅಧಿಕಾರಿ ಮಗಳಿಗೆ ಅಪ್ಪನ ಸೆಲ್ಯೂಟ್‌!

ಹಿರಿಯ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಗಳು| ಕಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ತಂದೆ| ಮಗಳಿಗೆ ಅಪ್ಪನ ಸೆಲ್ಯೂಟ್‌!

Andhra Pradesh Police shares wholesome post of cop father saluting DSP daughter garners praise from netizens pod
Author
Bangalore, First Published Jan 5, 2021, 10:03 AM IST
  • Facebook
  • Twitter
  • Whatsapp

ಹೈದ್ರಾಬಾದ್(ಜ.05)‌: ತಂದೆ- ಮಗಳು ಒಂದೇ ಇಲಾಖೆಯಲ್ಲಿ ಕೆಲಸಕ್ಕೆ ಸೇರುವುದು, ತಂದೆಯ ಕಿರಿಯ ಸಿಬ್ಬಂದಿಯಾಗಿ ಮಗಳು ಕೆಲಸ ಮಾಡುವುದು ಹೊಸದಲ್ಲ. ಆದರೆ ಆಂಧ್ರಪ್ರದೇಶದ ತಿರುಪತಿ ನಗರ ಅಪರೂಪದ ಘಟನೆಯೊಂದಕ್ಕೆ ಸಾಕ್ಷಿಯಾಯಿತು.

ಹಿರಿಯ ಪೊಲೀಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಮಗಳು ಎದುರಾದ, ಕಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ತಂದೆಯೇ ಸೆಲ್ಯೂಟ್‌ ಹೊಡೆದ ಪ್ರಕರಣ ಎಲ್ಲರ ಗಮನ ಸೆಳೆಯಿತು. ಗುಂಟೂರಿನಲ್ಲಿ ಡಿಎಸ್‌ಪಿಯಾಗಿ ಸೇವೆ ಸಲ್ಲಿಸುತ್ತಿರುವ ಜೆಸ್ಸಿ ಪ್ರಶಾಂತಿ, ಪೊಲೀಸ್‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ತಿರುಪತಿಗೆ ಆಗಮಿಸಿದ್ದರು. ಈ ವೇಳೆ ಅಲ್ಲಿಯ ಸರ್ಕಲ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿರುವ ಶ್ಯಾಮ್‌ ಸುಂದರ್‌ ಎದುರಾದರು.

ಹಿರಿಯ ಅಧಿಕಾರಿ ತಮ್ಮ ಮಗಳೇ ಆದರೂ, ಶ್ಯಾಮ್‌ಸುಂದರ್‌ ಮಗಳಿಗೆ ಸೆಲ್ಯೂಟ್‌ ಮಾಡಿದರು. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Follow Us:
Download App:
  • android
  • ios