ಸೆಪ್ಟೆಂಬರ್ 5ರಿಂದ ಶಾಲೆ ಪುನರಾರಂಭಿಸಲು ಆಂಧ್ರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಹೀಗಿದ್ದರೂ ಕೊರೋನಾ ಸ್ಥಿತಿಗತಿಯನ್ನು ನೋಡಿಕೊಂಡೇ ಈ ದಿನಾಂಕ ಅಂತಿಮಗೊಳಿಸಲಾಗುತ್ತೆ ಎನ್ನಲಾಗಿದೆ.

ಸಿಎಂ ವೈ. ಎಸ್. ಜಗನ್‌ಮೋಹನ್‌ ರೆಡ್ಡಿ ನೇತೃತ್ವದಲ್ಲಿ ಶಾಲೆ ಪುನರಾರಂಭ ಬಗ್ಗೆ ನಡೆದ ಸಭೆಯ ನಂತರ ಮಾಧ್ಯಮದ ಜೊತೆ ಶಿಕ್ಷಣ ಸಚಿವರುಮಾತನಾಡಿದ್ದಾರೆ. ಶಿಕ್ಷಣ ಸಚಿವ ಅಡಿಮುಲಪು ಸುರೇಶ್ ಮಾತನಾಡಿ, ಸೆಪ್ಟೆಂಬರ್ 5ರಂದು ಶಾಲೆ ಪುನರಾರಂಭಕ್ಕೆ ನಿರ್ಧರಿಸಲಾಗಿದ್ದರೂ, ಕೊರೋನಾ ಸಂದರ್ಭವನ್ನು ಆಧರಿಸಿಯೇ ದಿನಾಂಕಾ ಅಂತಿಮಗೊಳಿಸಲಾಗುತ್ತದೆ ಎಂದಿದ್ದಾರೆ.

ಲಾಕ್‌ಡೌನಲ್ಲಿ ಸ್ಯಾಂಡಲ್‌ವುಡ್ ನಟನ ಎಡವಟ್ಟು..! ಚಾಲೆಂಜಿಂಗ್ ಸ್ಟಾರ್‌ಗೆ ಕೋರ್ಟ್‌ ಮೆಮೊ

ಶಾಲೆ ಆರಂಭವಾಗುವ ತನಕ ಮಕ್ಕಳಿಗೆ ರೇಷನ್ ಹಾಗೂ ಮರ್ಧಯಾಹ್ನ ಊಟ ಅವರ ಮನೆಗಳಿಗೇ ನೀಡಲಾಗುತ್ತದೆ ಎಂದೂ ಅವರು ತಿಳಿಸಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್‌ಕೆಜಿ ಹಾಗೂ ಯುಕೆಜಿಯನ್ನು ಸರ್ಕಾರಿ ಶಾಲೆಗಳಲ್ಲಿಯೂ ಆರಂಭಿಸಲಾಗುತ್ತದೆ. ಜೆಇಇ, ಐಐಐಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತರಬೇತಿ ನೀಡಲಾಗುತ್ತದೆ ಎಂದಿದ್ದಾರೆ. ಶಿಕ್ಷಣ ಗುಣಮಟ್ಟ ಹೆಚ್ಚಿಸುವುದಕ್ಕೆ ಸಹ ನಿರ್ದೇಶಕನನ್ನೂ ಜಿಲ್ಲಾ ಮಟ್ಟದಲ್ಲಿ ನಿಯೋಜಿಸಲಾಗುತ್ತದೆ ಎಂದಿದ್ದಾರೆ.

ಶಾಲೆ ಪುನಾರಂಭ ಯಾವಾಗ? ಕೇಂದ್ರಕ್ಕೆ ತನ್ನ ನಿರ್ಧಾರ ತಿಳಿಸಿದ ರಾಜ್ಯ!

ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾರ್ಧಯಮದ ಅನುಷ್ಠಾನ ಮತ್ತು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ರಾಜ್ಯ ಮಟ್ಟದಲ್ಲಿ ಇಬ್ಬರು ನಿರ್ದೇಶಕರನ್ನು ನಿಯೋಜಿಸಲಾಗುತ್ತದೆ ಎಣದಯ ಸಿಎಂ ತಿಳಿಸಿದ್ದಾರೆ ಹೇಳಿದ್ದಾರೆ.