Asianet Suvarna News Asianet Suvarna News

ಸೀರೆ ಭಾಷಣ ಬಿಗಿದು ವಿದೇಶಕ್ಕೆ ಹಾರಿದೊಡನೆ ತುಂಡುಗೆಯಲ್ಲಿ ಕಾಣಿಸಿಕೊಂಡ ಸಚಿವೆ ಟ್ರೋಲ್!

ಮಾಜಿ ಸಚಿವೆ, ಚಿತ್ರ ನಟಿ ರೋಜಾ ಇದೀಗ ವಿದೇಶ ಪ್ರವಾಸದಲ್ಲಿದ್ದಾರೆ. ರೋಜಾ ಅವತಾರ ನೋಡಿದ ಹಲವರು ಬೆಚ್ಚಿ ಬಿದ್ದಿದ್ದಾರೆ. ಕಾರಣ ತುಂಡುಗೆಯಲ್ಲಿ ರೋಜಾ ವಿದೇಶದಲ್ಲಿ ಸುತ್ತಾಡುತ್ತಿರುವ ಫೋಟೋಗಳು ವೈರಲ್ ಆಗಿದೆ.
 

Andhra Pradesh Formers Minister RK Roja spotted with short dress in Italy trip ckm
Author
First Published Aug 6, 2024, 7:41 PM IST | Last Updated Aug 6, 2024, 7:41 PM IST

ವಿಶಾಖಪಟ್ಟಣಂ(ಆ.06) ಮಾಜಿ ಸಚಿವೆ, ಚಿತ್ರನಟಿ ರೋಜಾ ಮತ್ತೆ ಸುದ್ದಿಯಲ್ಲಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಸಚಿವೆ ರೋಜಾ ಕಳೆದ ಚುನಾವಣೆಯ ಸೋಲಿನ ಬಳಿಕ ರಾಜಕೀಯವಾಗಿ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಏಕಾಏಕಿ ವಿದೇಶದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಆದರೆ ರೋಜಾ ಅವತಾರ ನೋಡಿದ ಜನ ಹೌಹಾರಿದ್ದಾರೆ. ಭಾರತದಲ್ಲಿ ಸೀರೆ ನಾರಿಯ ಸೌಂದರ್ಯ ಹೆಚ್ಚಿಸುತ್ತದೆ. ಸೀರೆ ಹೆಣ್ಣಿಗೆ ಸೌಂದರ್ಯದ ಜೊತೆಗೆ ಗೌರವ ನೀಡುತ್ತದೆ ಎಂದು ಭಾಷಣ ಬಿಗಿದಿದ್ದ ರೋಜಾ ಇದೀಗ ವಿದೇಶಕ್ಕೆ ಹಾರಿದೊಡನೆ ತುಂಡುಗೆಯಲ್ಲಿ ಪ್ರತ್ಯಕ್ಷರಾಗಿದ್ದಾರೆ. ರೋಜಾ ಹಾಟ್ ಅವತಾರ ನೋಡಿದ ಜನ ಟ್ರೋಲ್ ಮಾಡಿದ್ದಾರೆ.

ಸಿನಿಮಾದ ಮೂಲಕ ಭಾರಿ ಜನಪ್ರಿಯತೆ ಪಡೆದ ರೋಜಾ ಬಳಿಕ ರಾಜಕೀಯವಾಗಿ ಸಂಚಲನ ಮೂಡಿಸಿದ್ದರು. ತೆಲುಗು ದೇಶಂ ಪಾರ್ಟಿ ಸೇರಿಕೊಂಡು ಸತತ 2 ಬಾರಿ ಗೆಲುವು ಸಾಧಿಸಿದ ರೋಜಾ, ಮೂರನೇ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಇದಾದ ಬಳಿಕ ರೋಜಾ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿಲ್ಲ. ಇದೀಗ ಇಟಲಿ ಪ್ರವಾಸದಲ್ಲಿರುವ ರೋಜಾ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ತಿರುಪತಿಗೇ ನಾಮ ಹಾಕಿರುವ ಆರೋಪ ಹೊತ್ತ ನಟಿ ರೋಜಾ ಇನ್ನೊಂದು ಎಡವಟ್ಟು: ಎಲ್ಲೆಡೆ ಆಕ್ರೋಶ

ರೋಜಾ ಹಾಗೂ ಕುಟುಂಬ ಇಟಲಿ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿನ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಮಾಜಿ ಸಚಿವೆಯನ್ನು ಕೆಲವರು ಟ್ರೋಲ್ ಮಾಡಿದ್ದರೆ, ಮತ್ತೆ ಕೆಲವರು ಬೆಂಬಲಕ್ಕೆ ನಿಂತಿದ್ದಾರೆ. ಈ ಪೈಕಿ ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಟೀಕಿಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ವೆಂಕಟ ರಮಣ ರೆಡ್ಡಿಗೆ ರೋಜಾ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

 

 

ವೆಂಕಟ ರಮಣ ರೆಡ್ಡಿ ಟ್ವೀಟ್ ಮೂಲಕ ಸಹೋದರಿ ಸೂಪರ್ ಎಂದು ಶಾರ್ಟ್ ಡ್ರೆಸ್ ಫೋಟೋ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ರೋಜಾ ಅಭಿಮಾನಿಗಳು ಗರಂ ಆಗಿದ್ದಾರೆ. ರಾಜಕೀಯವಾಗಿ ವಿರೋಧಿಸುವುದು ತಪ್ಪಲ್ಲ. ಆದರೆ ಮಹಿಳೆಯ ಡ್ರೆಸ್ ಕುರಿತು ಕಮೆಂಟ್ ಮಾಡುವುದು ಸರಿಯಲ್ಲ. ಇದು ಸಭ್ಯತೆ ಇಲ್ಲ. ರಾಜಕೀಯ ನಡೆ, ನಿರ್ಧಾರಗಳ ಬಗ್ಗೆ ವಿರೋಧಿಸಿದರೆ ಯಾರದೂ ತಕರಾರರಿಲ್ಲ. ಆದರೆ ಇದು ವೈಯುಕ್ತಿಕ ವಿಚಾರಗಳಿಗೆ ಕಮೆಂಟ್ ಮಾಡಲಾಗುತ್ತಿದೆ. ಹೆಣ್ಣಿನ ಸ್ವಾತಂತ್ರ್ಯವನ್ನೇ ಪ್ರಶ್ನಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಹಲವರು ತಿರುಗೇಟು ನೀಡಿದ್ದಾರೆ.

ನಟಿ ರೋಜಾ ವಿರುದ್ಧ ತಿರುಪತಿ ದರ್ಶನಕ್ಕಾಗಿ ಭಕ್ತರಿಂದ ಹಣ ಸಂಗ್ರಹದ ಆರೋಪ? ತನಿಖೆಗೆ ಒತ್ತಾಯ

ಒಂದೆಡೆ ಪರ ವಿರೋಧಗಳು ಹೆಚ್ಚಾಗುತ್ತಿದ್ದರೆ, ರೋಜಾ ಮಾತ್ರ ತಮ್ಮ ವಿದೇಶ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.ಕೆಲ ದಿನಗಳಿಂದ ಇಟಲಿ ಪ್ರವಾಸದಲ್ಲಿರುವ ರೋಜಾ ಭಾರತಕ್ಕೆ ಮರಳಲಿದ್ದಾರೆ. ಈ ಬಳಿಕ ಟೀಕೆಗಳಿಗೆ ಉತ್ತರಿಸುವ ಸಾಧ್ಯತೆ ಇದೆ.
 

Latest Videos
Follow Us:
Download App:
  • android
  • ios