ಪಕ್ಷದ ಮುಖಂಡ ಅಕ್ರಮವಾಗಿ ಮದ್ಯ ಸಾಗಿಸುವಾಗ ಸಿಕ್ಕಿ ಬಿದ್ದು ಬಿಜೆಪಿ ತೀವ್ರ ಮುಖಭಂಗ ಎದುರಿಸಿದೆ. ಆಂಧ್ರ ಪ್ರದೇಶದ ಬಿಜೆಪಿ ಮುಖಂಡ ಜಿ. ರಾಮಾಂಜನೇಯುಲು ಅಲಿಯಾಸ್ ಅಂಜಿ ಬಾಬು ಎಂಬಾತ ಅಕ್ರಮವಾಗಿ ಮದ್ಯ ಸಾಗಾಟ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾನೆ.

ರಾಜ್ಯ ಅಕ್ರಮ ಮದ್ಯ ಸಾಗಣೆ ತಡೆ ತಂಡ ಕಾರ್ಯಾಚರಣೆ ಮೂಲಕ ಬಿಜೆಪಿ ಮುಖಂಡನನ್ನು ಸೆರೆ ಹಿಡಿದಿದೆ. ಈತ 2019ರ ಸಂಸದೀಯ ಚುನಾವಣೆಗೆ ಈತ ಮಚಲೀಪಟ್ಟಣಂ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದ್ದ.

'ಬಿಜೆಪಿ ಕಚೇರಿಯಲ್ಲಿ ಕಸಗುಡಿಸಿ, 2023ರ ಚುನಾವಣೆಗೆ ಟಿಕೆಟ್ ನೀಡಬಹುದು'

ತೆಲಂಗಾಣದಿಂದ ಆಂಧ್ರಪ್ರದೇಶಕ್ಕೆ ತೆರಿಗೆ ಪಾವತಿಸಿದ ಅಕ್ರಮ ಮದ್ಯವನ್ನು ಕಳ್ಳ ಸಾಗಣೆ ಮಾಡುವಾಗ ನಾಲ್ವರ ಜೊತೆ ಈತನೂ ಸಿಕ್ಕಿ ಹಾಕಿಕೊಂಡಿದ್ದಾನೆ. 40 ಕೇಸ್ ಮದ್ಯ ವಶಪಡಿಸಲಾಗಿದೆ. 6 ಲಕ್ಷ ಮೌಲ್ಯದ ಮದ್ಯ 3 ಕಾರಿನಲ್ಲಿ ಸಾಗಿಸಲಾಗುತ್ತಿತ್ತು.

ತೆಲಂಗಾಣದ ಚಿಟ್ಯಾಲ ನಾಗಲಕೊಂಡದಿಂದ ಆಂಧ್ರಪ್ರದೇಶದ ಗುಂಟೂರಿಗೆ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ತೆಲಂಗಾಣ ಬಿಜೆಪಿ ರಾಜ್ಯ ಅಧ್ಯಕ್ಷ ಸೋಮು ವೀರ ರಾಜು ರಾಮುಂಜನೇಯುಲುವನ್ನು ಪಕ್ಷದಿಂದ ಹೊರ ಹಾಕಿದ್ದಾರೆ.