ಅಮರಾವತಿ(ಮೇ.23): ಕೋವಿಡ್‌ ಲಸಿಕೆಯ ದಾಸ್ತಾನು ತೀರಾ ಕಡಿಮೆ ಇದೆ. ಆದರೆ ಖಾಸಗಿ ಆಸ್ಪತ್ರೆಗಳು ಅದನ್ನು ಸಂಗ್ರಹಿಸಿ ದುಬಾರಿ ದರಕ್ಕೆ ಜನರಿಗೆ ನೀಡಿ ಹಣ ಸುಲಿಗೆ ಮಾಡುತ್ತಿವೆ. ಹಾಗಾಗಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ಪೂರೈಕೆ ಮಾಡುವುದನ್ನು ನಿಲ್ಲಿಸಿ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ ಮೋಹನ್ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

WHO ಲಿಸ್ಟ್‌ನಲ್ಲಿಲ್ಲ ಕೊವ್ಯಾಕ್ಸೀನ್: ಭಾರತೀಯರ ವಿದೇಶ ಪ್ರಯಾಣಕ್ಕೆ ಕುತ್ತು

ಈ ಬಗ್ಗೆ ಶನಿವಾರ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಜಗನ್‌, ಲಸಿಕೆಯ ದರ ನಿಗದಿಗೆ ಅವಕಾಶ ಇರುವ ಕಾರಣ ಖಾಸಗಿ ಆಸ್ಪತ್ರೆಗಳು ಒಂದು ಡೋಸ್‌ ಲಸಿಕೆಗೆ 2000-2500 ರು. ವರೆಗೆ ಜನರಿಂದ ವಸೂಲಿ ಮಾಡುತ್ತಿವೆ. ಹೀಗಾಗಿ ಜನರಿಂದ ಟೀಕೆಗಳು ಕೇಳಿಬರುತ್ತಿವೆ. ಸಾಂಕ್ರಾಮಿಕದಂಥ ಈ ಸಂದರ್ಭದಲ್ಲಿ ಉಚಿತವಾಗಿ ಅಥವಾ ಕೈಗೆಟಕುವ ಬೆಲೆಯಲ್ಲಿ ಲಸಿಕೆಯನ್ನು ವಿತರಿಸಬೇಕಾದ ಅಗತ್ಯವಿದೆ. ಆದರೆ ಖಾಸಗಿ ಆಸ್ಪತ್ರೆಗಳು ದುಬಾರಿ ದರ ವಿಧಿಸುತ್ತಿರುದರಿಂದ ಬಡ ವರ್ಗಕ್ಕೆ ಲಸಿಕೆ ಗಗನಕುಸುಮವಾಗೇ ಉಳಿಯಲಿದೆ.

ಕೊರೋನಾ ಅಬ್ಬರ ಮಧ್ಯೆ ಲಸಿಕೆ ಪಡೆದವರಿಗೊಂದು ಶುಭ ಸಮಾಚಾರ!

ಅಲ್ಲದೆ ಇದರಿಂದ ಲಸಿಕೆಯ ಕಾಳಸಂತೆ ಆರಂಭವಾಗುವ ಅಪಾಯವೂ ಇದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಲಸಿಕೆ ಪೂರೈಕೆ ನಿಲ್ಲಿಸಿ’ ಎಂದು ಮನವಿ ಮಾಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona