Asianet Suvarna News Asianet Suvarna News

ಬರ ಪೀಡಿತ ನಮೀಬಿಯಾದ ಆನೆಗಳ ರಕ್ಷಣೆಗೆ ಮುಂದಾದ ಅನಂತ್ ಅಂಬಾನಿಯ ವಂತಾರಾ ಪ್ರತಿಷ್ಠಾನ

ಭೀಕರ ಬರಗಾಲದಿಂದ ತತ್ತರಿಸಿರುವ ನಮೀಬಿಯಾದಲ್ಲಿ 700 ಕ್ಕೂ ಹೆಚ್ಚು ವನ್ಯಜೀವಿಗಳನ್ನು ಕೊಲ್ಲಲು ಸರ್ಕಾರ ನಿರ್ಧರಿಸಿದೆ. ಆದರೆ ಈ ಪ್ರಾಣಿಗಳ ಜೀವ ರಕ್ಷಣೆಗೆ ಅನಂತ್ ಅಂಬಾನಿ ನೇತೃತ್ವದ ವಂತಾರಾ ಪ್ರತಿಷ್ಠಾನ ಮುಂದೆ ಬಂದಿದೆ. ಪ್ರಾಣಿ ಹತ್ಯೆ ಬದಲು ಪರ್ಯಾಯ ಮಾರ್ಗಗಳನ್ನು ಪರಿಗಣಿಸುವಂತೆ ಪ್ರತಿಷ್ಠಾನ ಸರ್ಕಾರವನ್ನು ಒತ್ತಾಯಿಸಿದೆ.

Anant Ambani's Vantara Foundation to save drought stricken Namibias elephants and other wild animals akb
Author
First Published Sep 5, 2024, 11:21 AM IST | Last Updated Sep 5, 2024, 3:02 PM IST

ನವದೆಹಲಿ. ದಕ್ಷಿಣ ಆಫ್ರಿಕಾದ ರಾಷ್ಟ್ರ ನಮೀಬಿಯಾ ಭೀಕರ ಬರಗಾಲದಿಂದ (Namibia Drought) ತತ್ತರಿಸುತ್ತಿದೆ. 100 ವರ್ಷಗಳಲ್ಲಿ ಕಂಡು ಕೇಳರಿಯದ ಭೀಕರ ಬರಗಾಲದಿಂದಾಗು ಜನರು ಇಲ್ಲಿ ಹಸಿವಿನಿಂದ ಸಾಯುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ವನ್ಯಜೀವಿಗಳನ್ನು ಕೊಂದು ಅವುಗಳ ಮಾಂಸದಿಂದ ಜನರ ಹಸಿವು ನೀಗಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 700 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲು ಸರ್ಕಾರ ಮುಂದಾಗಿದೆ.

ಆದರೆ ಈ ವನ್ಯಜೀವಿಗಳನ್ನು ರಕ್ಷಿಸಲು ಉದ್ಯಮಿ ಅನಂತ್ ಅಂಬಾನಿ ಅವರ ವಂತಾರಾ ಪ್ರತಿಷ್ಠಾನ ಮುಂದೆ ಬಂದಿದೆ. ನಮೀಬಿಯಾ ಅಧಿಕಾರಿಗಳಿಗೆ ಪತ್ರ ಬರೆದಿರುವ ಪ್ರತಿಷ್ಠಾನ, ಬರದಿಂದಾಗಿ ಅಲ್ಲಿನ ಜನರು ಮತ್ತು ಪ್ರಾಣಿಗಳು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಪರಿಸ್ಥಿತಿಯು ಅತ್ಯಂತ ಗಂಭೀರವಾಗಿರುವುದರಿಂದ ಪ್ರಾಣಿಗಳನ್ನು ಕೊಲ್ಲುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ವರದಿಗಳು ಕೇಳಿ ಬಂದಿದ್ದು ಇಂತಹ ಪರಿಸ್ಥಿತಿಯಲ್ಲಿ ನಮೀಬಿಯಾ ಸರ್ಕಾರಕ್ಕೆ ಪರ್ಯಾಯ ಮಾರ್ಗವನ್ನು ಪ್ರತಿಷ್ಠಾನವು ಸೂಚಿಸಿದೆ.

ಇದನ್ನೂ ಓದಿ: ತೀವ್ರ ಬರದಿಂದ ಬೇಸತ್ತ ನಮೀಬಿಯಾ: ಜನರ ಹಸಿವು ನೀಗಿಸಲು ಆನೆಗಳ ಹತ್ಯೆಗೆ ಮುಂದಾದ ಸರ್ಕಾರ

ಕೊಲ್ಲಲು ಉದ್ದೇಶಿಸಿರುವ ಪ್ರಾಣಿಗಳನ್ನು ಜೀವಮಾನವಿಡೀ ಪಾಲನೆ ಮಾಡಲು ಅಥವಾ ಅವುಗಳಿಗೆ ತಾತ್ಕಾಲಿಕ ಆಶ್ರಯ ನೀಡಲು ವಂತಾರಾ ಪ್ರತಿಷ್ಠಾನ ಸಿದ್ಧವಾಗಿದೆ. ಪ್ರಾಣಿಗಳನ್ನು ರಕ್ಷಿಸುವಲ್ಲಿ ವಂತಾರಾ ಪ್ರತಿಷ್ಠಾನವು ಉತ್ತಮ ಹೆಸರು ಗಳಿಸಿದೆ. ಕೊಲ್ಲಲು ಉದ್ದೇಶಿಸಿರುವ ಪ್ರಾಣಿಗಳಿಗೆ ನಾವು ಆಶ್ರಯ ನೀಡುತ್ತೇವೆ ಮತ್ತು ಅವುಗಳಿಗೆ ಬದುಕಲು ಹೊಸ ಅವಕಾಶ ನೀಡುತ್ತೇವೆ. ಪ್ರಾಣಿ ಹತ್ಯೆಯ ಬದಲು ಪರ್ಯಾಯ ಮಾರ್ಗಗಳನ್ನು ಅನುಸರಿಸುವ ಮೂಲಕ ದೇಶದ ಅಮೂಲ್ಯ ವನ್ಯಜೀವಿಗಳನ್ನು ರಕ್ಷಿಸಲು ನಮೀಬಿಯಾ ಸರ್ಕಾರದೊಂದಿಗೆ ಕೈಜೋಡಿಸಲು ಪ್ರತಿಷ್ಠಾನವು ಆಶಿಸುತ್ತದೆ. ದಯವಿಟ್ಟು ನಮ್ಮ ತಂಡ ಸಿದ್ಧಪಡಿಸಿರುವ ವಿವಿಧ ಆಯ್ಕೆಗಳು ಮತ್ತು ಪ್ರಸ್ತಾವನೆಗಳನ್ನು ಪರಿಶೀಲಿಸಿ ಮತ್ತು ಪರಿಗಣಿಸಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

೭೦೦ ಕ್ಕೂ ಹೆಚ್ಚು ವನ್ಯಜೀವಿಗಳನ್ನು ಕೊಲ್ಲಲು ನಮೀಬಿಯಾ ಸರ್ಕಾರದ ನಿರ್ಧಾರ

100 ವರ್ಷಗಳಲ್ಲೇ  ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿರುವ ನಮೀಬಿಯಾ ತನ್ನ ಜನರ ಹಸಿವು ನೀಗಿಸಲು 700೦ ಕ್ಕೂ ಹೆಚ್ಚು ವನ್ಯಜೀವಿಗಳನ್ನು ಕೊಲ್ಲಲು ಮುಂದಾಗಿದೆ. 83 ಆನೆಗಳು, 30 ಘೇಂಡಾಮೃಗಗಳು, 60 ಎಮ್ಮೆಗಳು, 50 ಜಿಂಕೆಗಳು (impalas) 100 ನೀಲಿ ಹೇಸರಗತ್ತೆ(blue Wilderbeast) 300 ಜೀಬ್ರಾಗಳು ಹಾಗೂ 83 ಆನೆಗಳು ಹಾಗೂ 100 ಕಾಡುಕೋಣಗಳು(elands)  (ಒಂದು ರೀತಿಯ ಜಿಂಕೆ) ಕೊಲ್ಲಲು ಸರ್ಕಾರ ನಿರ್ಧರಿಸಿದೆ. ವಿಶ್ವಸಂಸ್ಥೆಯ ಪ್ರಕಾರ, ದೇಶದ 84% ಆಹಾರ ಸಂಗ್ರಹ ಈಗಾಗಲೇ ಖಾಲಿಯಾಗಿದೆ. 25 ಲಕ್ಷ ಜನಸಂಖ್ಯೆಯಲ್ಲಿ ಸುಮಾರು ಅರ್ಧದಷ್ಟು ಜನರು ಜುಲೈ ಮತ್ತು ಸೆಪ್ಟೆಂಬರ್ ನಡುವೆ ತೀವ್ರ ಆಹಾರದ ಕೊರತೆಯನ್ನು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಮತ್ತೊಮ್ಮೆ ಜನರ ಮನಸ್ಸು ಗೆದ್ದ ಅಂಬಾನಿ ಸೊಸೆ, ಪ್ಯಾರಿಸ್‌ನಲ್ಲೂ ಮಂಗಳಸೂತ್ರ ಹಾಕ್ಕೊಂಡ ರಾಧಿಕಾ!

ಬರಗಾಲದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಮೀಬಿಯಾ ತುರ್ತು ಪರಿಸ್ಥಿತಿ ಘೋಷಿಸಿತ್ತು. ರಾಷ್ಟ್ರೀಯ ಉದ್ಯಾನವನಗಳು ಮತ್ತು ಸಮುದಾಯ ಪ್ರದೇಶಗಳಲ್ಲಿ ಮಾತ್ರ ವನ್ಯಜೀವಿಗಳನ್ನು ಕೊಲ್ಲಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ. ವೃತ್ತಿಪರ ಬೇಟೆಗಾರರು ಪ್ರಾಣಿಗಳನ್ನು ಕೊಲ್ಲಲಿದ್ದಾರೆ. ಮಾಂಸವನ್ನು ಬರಪೀಡಿತ ಜನರಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ವಿತರಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.  ಮೊರಾಕೊ ವರ್ಲ್ಡ್ ನ್ಯೂಸ್ ವರದಿಯ ಪ್ರಕಾರ, ಈವರೆಗೆ 157 ಕ್ಕೂ ಹೆಚ್ಚು ಪ್ರಾಣಿಗಳನ್ನು ಕೊಲ್ಲಲಾಗಿದೆ. ಇದರಿಂದ ಸುಮಾರು 63 ಟನ್ ಮಾಂಸ ಸಂಗ್ರಹವಾಗಿದೆ. ವನ್ಯಜೀವಿಗಳನ್ನು ಕೊಲ್ಲುವುದರಿಂದ ಜನರಿಗೆ ಆಹಾರ ದೊರೆಯುವುದಲ್ಲದೆ, ನೀರು ಮತ್ತು ಮೇವು ಮುಂತಾದ ಸಂಪನ್ಮೂಲಗಳ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios