ಕಳೆದ ವರ್ಷ ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದ ಚಿತ್ರ 12thFail. ವಿಕ್ರಾಂತ್‌ ಮಸ್ಸೆ ಹಾಗೂ ಮೇಧಾ ಶಂಕರ್‌ ಮುಖ್ಯ ಭೂಮಿಕೆಯಲ್ಲಿದ್ದ ಈ ಚಿತ್ರ ಮನೋಜ್‌ ಕುಮಾರ್‌ ಶರ್ಮ ಹಾಗೂ ಶ್ರದ್ಧಾ ಜೋಶಿ ಅವರ ರಿಯಲ್‌ ಲೈಫ್‌ ಕಥೆಯಾಗಿತ್ತು. 

ಬೆಂಗಳೂರು (ಫೆ.7): ಬಹುಶಃ ಯುಪಿಎಸ್‌ಸಿ ಪರೀಕ್ಷೆಯ ಆಕಾಂಕ್ಷಿಗಳಿಗೆ 'ಆಸ್ಪಿರೆಂಟ್ಸ್‌' ವೆಬ್‌ ಸಿರೀಸ್‌ ಬಳಿಕ ಸಖತ್‌ ಇಷ್ಟವಾದ ಮತ್ತೊಂದು ಸಿನಿಮಾ ಎಂದರೆ ಅದು 12th ಫೇಲ್‌ ಸಿನಿಮಾ. ವಿಕ್ರಾಂತ್‌ ಮಸ್ಸೆ ಹಾಗೂ ಮೇಧಾ ಶಂಕರ್‌ ಪ್ರಮುಖ ಭೂಮಿಕೆಯಲ್ಲಿದ್ದ ಸಿನಿಮಾ ಇಂದಿಗೂ ಸೋನಿ ಲಿವ್‌ ಅಪ್ಲಿಕೇಶನ್‌ನಲ್ಲಿ ಗರಿಷ್ಠ ಬಾರಿ ವೀಕ್ಷಣೆಯಾದ ಸಿನಿಮಾ ಎನಿಸಿಕೊಂಡಿದೆ. 2023ರ ಅಕ್ಟೋಬರ್ 27 ರಂದು ಬಿಡುಗಡೆಯಾದ ಈ ಸಿನಿಮಾದಲ್ಲಿ ವಿಕ್ರಾಂತ್‌ ಮಸ್ಸೆ, ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಶರ್ಮ ಅವರ ಪಾತ್ರವನ್ನು ನಿಭಾಯಿಸಿದ್ದರು. ತಮ್ಮ ಶಿಕ್ಷಣದ ಪ್ರಯಾಣವನ್ನು ಮರು ಪ್ರಾರಂಭ ಮಾಡುವ ಕಲ್ಪನೆಯನ್ನು ನಿರ್ಭಯವಾಗಿ ಸ್ವೀಕರಿಸುವ ಅವರು, ವಿಶ್ವದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಎನಿಸಿಕೊಂಡಿರುವ ಯುಪಿಎಸ್‌ಸಿಯಲ್ಲಿ ಯಶಸ್ಸು ಪಡೆಯುವ ಕಥಾಹಂದರವನ್ನು ಹೊಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ನಿಜ ಜೀವನದ ಕಥೆ. ವಿಧು ವಿನೋದ್‌ ಚೋಪ್ರಾ ನಿರ್ದೇಶನದ ಈ ಸಿನಿಮಾದಲ್ಲಿರುವುದು ಐಪಿಎಸ್‌ ಅಧಿಕಾರಿ ಮನೋಜ್‌ ಕುಮಾರ್‌ ಶರ್ಮ ಹಾಗೂ ಅವರ ಪತ್ನಿ ಶ್ರದ್ಧಾ ಜೋಶಿಯವರ ಕಥೆ. ಪ್ರಸ್ತುತ ಮನೋಜ್‌ ಕುಮಾರ್‌ ಶರ್ಮ ಮುಂಬೈ ಪೊಲೀಸ್‌ನ ಉಪ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಭಾರತೀಯ ಕಂದಾಯ ಇಲಾಖೆ ಅಧಿಕಾರಿಯಾಗಿರುವ ಅವರ ಪತ್ನಿ ಶ್ರದ್ಧಾ ಜೋಶಿ ಮುಂಬೈ ಟೂರಿಸ್ಟ್‌ ಡೆವಲಪ್‌ಮೆಂಟ್‌ ಕಾರ್ಪೋರೇಷನ್‌ನವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಇತ್ತೀಚೆಗೆ ಇವರಿಬ್ಬರನ್ನು ಭೇಟಿಯಾಗಿರುವ ಮಹೀಂದ್ರಾ & ಮಹೀಂದ್ರಾ ಕಂಪನಿಯ ಚೇರ್ಮನ್‌ ಆನಂದ್‌ ಮಹೀಂದ್ರಾ ತಾವು ಇವರಿಬ್ಬರ ಆಟೋಗ್ರಾಫ್‌ ಪಡೆದುಕೊಂಡಿರುವುದಾಗಿ ಹೆಮ್ಮೆಯಿಂದ ಹೇಳಿದ್ದಾರೆ. 'ನಾನು ಹೆಮ್ಮೆಯಿಂದ ಹಿಡಿದುಕೊಂಡಿರುವ ಈ ಕಾರ್ಡ್‌ನಲ್ಲಿ ಇವರ ಆಟೋಗ್ರಾಫ್‌ ಪಡೆಯುವ ಸಲುವಾಗಿ ಮನವಿ ಮಾಡುವ ಮುನ್ನ ನನಗೆ ಬಹಳ ಮುಜುಗರವಿತ್ತು. ಆದರೆ ಇವರು ನಿಜವಾದ ನಿಜ ಜೀವನದ ಹೀರೋಗಳು ಐಪಿಎಸ್‌ ಮನೋಜ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಐಆರ್‌ಎಸ್‌ ಶ್ರದ್ಧಾ ಜೋಶಿ. ಇವರ ಶ್ರೇಷ್ಠ ಜೀವನವನ್ನೇ ಆಧರಿಸಿದ ಅಸಾಧಾರಣ ಚಿತ್ರ #12thFail. ಇಂದು ಊಟದ ಸಮಯದಲ್ಲಿ ಇವರ ಭೇಟಿ ಆಗಿದ್ದ. ಚಿತ್ರದ ನಿರೂಪಣೆಯು ಅವರ ನೈಜ ಕಥೆಗಳಿಗೆ ನಿಜವಾಗಿದೆ ಎಂದು ನಾನು ಕಲಿತಿದ್ದೇನೆ ಮತ್ತು ಇವರು ತಮ್ಮ ಉತ್ತಮ ಜೀವನಕ್ಕೆ ಅಧಾರವಾಗಿರುವ ಫಿಲಾಸಪಿಯ ಅಭ್ಯಾಸ ನಡೆಸುವುದನ್ನು ಮುಂದುವರಿಸಿದ್ದಾರೆ. ಭಾರತವು ಜಾಗತಿಕ ಶಕ್ತಿಯಾಗಬೇಕಾದರೆ, ಹೆಚ್ಚಿನ ಜನರು ತಮ್ಮ ಜೀವನ ವಿಧಾನವನ್ನು ಈ ರೀತಿಯಲ್ಲಿ ಅಳವಡಿಸಿಕೊಂಡರೆ ಅದು ಹೆಚ್ಚು ವೇಗವಾಗಿ ಸಂಭವಿಸುತ್ತದೆ. ಹಾಗಾಗಿ ಅವರೇ ಈ ದೇಶದ ನಿಜವಾದ ಸೆಲೆಬ್ರಿಟಿಗಳು. ಮತ್ತು ಅವರ ಆಟೋಗ್ರಾಫ್‌ಗಳು ನನಗೆ ಆಸ್ತಿ ಇದ್ದಂತೆ. ಅವರನ್ನು ಭೇಟಿ ಮಾಡಿದ್ದಕ್ಕಾಗಿ ನಾನು ಇಂದು ಶ್ರೀಮಂತ ವ್ಯಕ್ತಿಯಾಗಿದ್ದೇನೆ' ಎಂದು ಆನಂದ್‌ ಮಹೀಂದ್ರಾ ಬರೆದುಕೊಂಡಿದ್ದಾರೆ.

ಮಕ್ಕಳಲ್ಲಿ ಸ್ವಚ್ಛತಾ ಪ್ರಜ್ಞೆ ಬೆಳೆಸಲು ಬೆಸ್ಟ್ ಐಡಿಯಾ ಎಂದು ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ!

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಲವರು, 'ಇದೊಂದು ಶ್ರೇಷ್ಠ ಸ್ಫೂರ್ತಿದಾಯಕ ಚಿತ್ರ. ನಾವು ಇಂದು ನಮ್ಮ ನಡುವೆ ಇಂಥ ವ್ಯಕ್ತಿಗಳನ್ನು ಹೊಂದಿರುವುದೇ ಅದೃಷ್ಟ. ಇದನ್ನು ಶೇರ್‌ ಮಾಡಿಕೊಂಡಿದ್ದಕ್ಕೆ ಥ್ಯಾಂಕ್ಸ್‌' ಎಂದು ಬರೆದಿದ್ದಾರೆ. ನಾನು ಇಂದು ಈ ಚಿತ್ರವನ್ನು ನೋಡಿದೆ. ತುಂಬಾ ಸ್ಫೂರ್ತಿದಾಯಕ ಚಿತ್ರ ಅದ್ಭುತ ನಿರ್ದೇಶನವಿದ್ದು, ಇಬ್ಬರ ನಟನೆ ಕೂಡ ಅಷ್ಟೇ ಶ್ರೇಷ್ಠವಾಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ. 12thFail ನ ನಿಜವಾದ ಹೀರೋಗಳು. ಸ್ಪೂರ್ತಿದಾಯಕ ಚಿತ್ರದ ಬಗ್ಗೆ ವಿಮರ್ಶೆಗಳನ್ನು ಓದಿದ್ದೇನೆ ಆದರೆ ಖಂಡಿತವಾಗಿಯೂ ಅದನ್ನು ಈಗ ನೋಡಬೇಕಾಗಿದೆ ಎಂದು ಮತ್ತೊಬ್ಬರು ಟ್ವೀಟ್‌ ಮಾಡಿದ್ದಾರೆ.

ನಿಮ್ಮ ಕಂಪನಿ ಷೇರು ಖರೀದಿಸ್ಬೇಕು, 1 ಲಕ್ಷ ಕೊಡಿ ಎಂದು ಆನಂದ್‌ ಮಹೀಂದ್ರಾಗೆ ಕೇಳಿದ ಭೂಪ!

Scroll to load tweet…