Covid Vaccination : 11 ಬಾರಿ ಕೋವಿಡ್-19 ಲಸಿಕೆ ಪಡೆದಿದ್ದೇನೆ ಎಂದ ಬಿಹಾರದ ವ್ಯಕ್ತಿ, ತನಿಖೆಗೆ ಆದೇಶ!

ದೇಶದಲ್ಲಿ ವ್ಯಾಪಕವಾಗಿ ನಡೆಯುತ್ತಿರುವ ಕೋವಿಡ್-19 ಲಸಿಕಾ ಕಾರ್ಯಕ್ರಮ
11 ಬಾರಿ ಕೋವಿಡ್-19 ಲಸಿಕೆ ಪಡೆದಿರುವುದಾಗಿ ಹೇಳಿರುವ ಬಿಹಾರ ವ್ಯಕ್ತಿ
ತನಿಖೆಗೆ ಆದೇಶ ನೀಡಿದ ಸ್ಥಳೀಯ ವೈದ್ಯಾಧಿಕಾರಿ

An 84 year old man from Bihar has claimed to have taken 11 jabs of Covid vaccines san

ಪಟನಾ (ಜ. 5): ಒಂದೆಡೆ ದೇಶದಲ್ಲಿ ಕೋವಿಡ್-19 (Covid 19) ಪ್ರಕರಣಗಳು ಹಾಗೂ ಒಮಿಕ್ರಾನ್ (Omicron) ಪ್ರಕರಣಗಳ ಏರಿಕೆಯಿಂದಾಗಿ ಆತಂಕ ಸೃಷ್ಟಿಯಾಗಿರುವಾಗಲೇ ದೇಶಾದ್ಯಂತ ಲಸಿಕಾ ಕಾರ್ಯಕ್ರಮಗಳು ವೇಗ ಪಡೆದುಕೊಳ್ಳುತ್ತಿವೆ. ಬಹುತೇಕ ರಾಜ್ಯಗಳು ಈಗಾಗಲೇ ನೈಟ್ ಕರ್ಫ್ಯೂ, ಸೆಮಿ ಲಾಕ್ ಡೌನ್, ಲಾಕ್ ಡೌನ್ ನಲ್ಲಿ ನಿಯಮಗಳನ್ನು ಜಾರಿ ಮಾಡುತ್ತಿವೆ. ಇದರ ನಡುವೆ ಕೋವಿಡ್-19 ಲಸಿಕಾ ಕಾರ್ಯಕ್ರಮದಲ್ಲಿ (Covid 19 vaccine) ನಡೆದಿರಬಹುದಾದ ಸಂಭಾವ್ಯ ಅಕ್ರಮದ ಬಗ್ಗೆ ಬಿಹಾರ (Bihar) ವರದಿ ಮಾಡಿದೆ. ಬಿಹಾರದ ಮಾಧೇಪುರ (Madhepura) 84 ವರ್ಷದ ವ್ಯಕ್ತಿ, ತಾನು ಈವರೆಗೂ 11 ಬಾರಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದೇನೆ ಎಂದು ಹೇಳಿದ್ದು, ಈ  ಕುರಿತಾಗಿ ತನಿಖೆ ನಡೆಸುವಂತೆ ಸ್ಥಳೀಯ ವೈದ್ಯಾಧಿಕಾರಿ ಹೇಳಿದ್ದಾರೆ.

ದೇಶದಲ್ಲಿ ಇನ್ನೂ ಕೆಲವು ವ್ಯಕ್ತಿಗಳು 2ನೇ ಡೋಸ್ ಲಸಿಕೆ ಪಡೆಯಬೇಕಿದೆ. ಆದರೆ, ಮಾಧೇಪುರ ಜಿಲ್ಲೆಯ ಉದಕಿಶುಂಗಂಜ್ (Udakishunganj ) ಉಪವಿಭಾಗದ ಪುರೈನಿ ಪೊಲೀಸ್ ಠಾಣೆಯ ಓರೈ ಗ್ರಾಮದ ನಿವಾಸಿ ಬ್ರಹ್ಮದೇವ್ ಮಂಡಲ್ (Brahmadev Mandal) ಅವರು 12 ನೇ ಡೋಸ್ ತೆಗೆದುಕೊಳ್ಳುವ ಮೊದಲು ಸಿಕ್ಕಿಬಿದ್ದರು. ಈವರೆಗೂ 11 ಡೋಸ್ ಗಳನ್ನು ತೆಗೆದುಕೊಳ್ಳಲು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಕಂಡುಹಿಡಿಯಲು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲಾಗುವುದು ಎಂದು ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಹೇಳಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಬ್ರಹ್ಮದೇವ್ ಮಂಡಲ್ (Brahmadev Mandal), 11 ಡೋಸ್ ಪಡೆದುಕೊಂಡಿದ್ದರಿಂದ ತಮಗೆ ಲಾಭವಾಗಿದೆ ಎಂದು ತಿಳಿಸಿದ್ದಾರೆ. "ಈ ಲಸಿಕೆಗಳಿಂದ ನನಗೆ ಬಹಳ ಲಾಭವಾಗಿದೆ. ಆ ಕಾರಣಕ್ಕಾಗಿಯೇ ನಾನು ಸಾಕಷ್ಟು ಬಾರಿ ತೆಗೆದುಕೊಂಡಿದ್ದೇನೆ' ಎಂದು ತಿಳಿಸಿದ್ದಾರೆ.

ಅಂಚೆ ಇಲಾಖೆಯಲ್ಲಿ (postal department) ನಿವೃತ್ತ ಉದ್ಯೋಗಿಯಾಗಿರುವ ಬ್ರಹ್ಮದೇವ್ ಮಂಡಲ್, ಕಳೆದ ವರ್ಷ ಫೆಬ್ರವರಿ 13 ರಂದು ಮೊದಲ ಬಾರಿಗೆ ತಾವು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದರಂತೆ. ಫೆಬ್ರವರಿ 13 ರಿಂದ ಡಿಸೆಂಬರ್ 30ರ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ(Public Health Centre) ಒಟ್ಟು 11 ಬಾರಿ ಲಸಿಕೆ ಪಡೆದುಕೊಂಡಿದ್ದಾರೆ. ಯಾವ ಸ್ಥಳದಲ್ಲಿ ತಾವು ಲಸಿಕೆ ಪಡೆದುಕೊಂಡಿದ್ದೇನೆ, ದಿನಾಂಕ ಹಾಗೂ ಸಮಯವನ್ನೂ ಕೂಡ ಅವರು ದಾಖಲು ಮಾಡಿಟ್ಟುಕೊಂಡಿದ್ದಾರೆ. ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಅನಿವಾರ್ಯ. ಅದರೊಂದಿಗೆ ಕೋವಿನ್ ಪೋರ್ಟಲ್ ಅಲ್ಲಿ ನೋಂದಣಿ ಕಡ್ಡಾಯ ಹಾಗಿದ್ದರೂ ಒಬ್ಬ ವ್ಯಕ್ತಿ 11 ಬಾರಿ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿದ್ದು ಹೇಗೆ ಎನ್ನುವ ಕುತೂಹಲ ಎಲ್ಲರಲ್ಲೂ ಆರಂಭವಾಗಿದೆ.

Covid Vaccination : ಬೂಸ್ಟರ್‌ ಡೋಸ್‌ಗೆ ಯಾವ ಲಸಿಕೆ
"ನಮ್ಮ ಸರ್ಕಾರ ಅದ್ಭುತವಾದ ಲಸಿಕೆ ಮಾಡಿದೆ ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಿ" ಎಂದು ಮಂಡಲ್ ಹೇಳಿದ್ದಾರೆ. ಹಲವಾರು ಬಾರಿ ಕೋವಿಡ್-19 ಲಸಿಕೆ ಪಡೆದುಕೊಂಡಿದ್ದು ಹೇಗೆ ಎನ್ನುವುದನ್ನೂ ತಿಳಿಸಿದ್ದಾರೆ. ಮಂಡಲ್ ಅವರು ಎಂಟು ಬಾರಿ ಲಸಿಕೆ ಪಡೆಯುವ ವೇಳೆಗೆ ತಮ್ಮ ಆಧಾರ್ ಕಾರ್ಡ್ ಹಾಗೂ ಫೋನ್ ಸಂಖ್ಯೆಯನ್ನು ನೀಡಿದ್ದಾರೆ. ಉಳಿದ ಮೂರು ಬಾರಿ ಮತದಾರರ ಗುರುತಿನ ಚೀಟಿ ಹಾಗೂ ಅವರ ಪತ್ನಿಯ ಫೋನ್ ಸಂಖ್ಯೆಯನ್ನು ಬಳಸಿದ್ದರಂತೆ.

Covid Outbreak In Mandya : ಭಕ್ತರಿಗೆ ಓಂ ಶಕ್ತಿಯೇ ಮಾರಕವಾಯ್ತು
ಆಫ್ ಲೈನ್ ಶಿಬಿರದಲ್ಲಿ ಹೀಗಾಗುತ್ತದೆ: ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಮಾತನಾಡಿದ್ದು, ಆಫ್ ಲೈನ್ ಶಿಬಿರದ ವೇಳೆ ಇಂಥ ಅಚಾತುರ್ಯಗಳು ಆಗುತ್ತವೆ. ಶಿಬಿರದಲ್ಲಿ ಆಯಾ ವ್ಯಕ್ತಿಗಳ ಆಧಾರ್ ಕಾರ್ಡ್ ಹಾಗೂ ಫೋನ್ ನಂಬರ್ ಅನ್ನು ದಾಖಲು ಮಾಡಲಾಗುತ್ತದೆ. ಬಳಿಕ ಡೇಟಾಬೇಸ್ ಗೆ ಹಾಕಲಾಗುತ್ತದೆ. ಕೆಲವೊಮ್ಮೆ ಆಧಾರ್ ಕಾರ್ಡ್ ನಂಬರ್ ಗಳು ಹಾಗೂ ಫೋನ್ ಸಂಖ್ಯೆ ರಿಪೀಟ್ ಆದಲ್ಲಿ ರಿಜೆಕ್ಟ್ ಆಗುತ್ತದೆ. ಇದರಿಂದಾಗಿ ವ್ಯಕ್ತಿಗಳು 2 ಕ್ಕಿಂತ ಹೆಚ್ಚು ಬಾರಿ ಲಸಿಕೆ ಹಾಕುವ ಅವಕಾಶ ಸಿಗುತ್ತದೆ. ಆ ಕಾರಣದಿಂದಾಗಿಯೇ ಕಂಪ್ಯೂಟರ್ ನಲ್ಲಿರುವ ಡೇಟಾಗೂ ನೋಂದಣಿ ಪುಸ್ತಕದಲ್ಲಿನ ಡೇಟಾಗೂ ಸಾಕಷ್ಟು ವ್ಯತ್ಯಾಸವಿರುತ್ತದೆ" ಎಂದಿದ್ದಾರೆ. ಮಾಧೇಪುರ ಜಿಲ್ಲೆಯ ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ಈ ಕುರಿತಂತೆ ತನಿಖೆಗೆ ಆದೇಶ ನೀಡಿದ್ದು, ಸಾರ್ವಜನಿಕ ಆರೋಗ್ಯ ಕೇಂದ್ರಗಳು ಸಂಪೂರ್ಣ ವಿವರವಾದ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios