Asianet Suvarna News Asianet Suvarna News

8 ಕೋಟಿ ಜನರ ಉದ್ದೇಶಿಸಿ ಇಂದು ಶಾ ಭಾಷಣ: ಸಚಿವರಾದ ಬಳಿಕ ಮೊದಲ ಸಮಾವೇಶ!

* ರಾಜ್ಯಗಳ ಸಹಕಾರ ಸಚಿವರು, ಸಹಕಾರ ಸಂಘಗಳ ಉದ್ದೇಶಿಸಿ ಮಾತು

* ಸಹಕಾರ ಸಚಿವರಾದ ಬಳಿಕ ಅಮಿತ್‌ ಶಾರಿಂದ ಮೊದಲ ಸಮಾವೇಶ

* 8 ಕೋಟಿ ಜನರ ಉದ್ದೇಶಿಸಿ ಇಂದು ಶಾ ಭಾಷಣ

Amit Shah to address first national cooperative conference on Sept 25 pod
Author
Bangalore, First Published Sep 24, 2021, 10:07 AM IST
  • Facebook
  • Twitter
  • Whatsapp

ನವದೆಹಲಿ(ಸೆ.24): ಕೇಂದ್ರ ಸಹಕಾರ ಖಾತೆ ಸಚಿವರಾಗಿರುವ ಅಮಿತ್‌ ಶಾ(Amit Shah), ಶುಕ್ರವಾರ ರಾಷ್ಟ್ರೀಯ ಸಹಕಾರ ಸಮ್ಮೇಳನ(Nnational Cooperative Conference) ಉದ್ದೇಶಿಸಿ ಮಾತನಾಡಲಿದ್ದಾರೆ. ದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ(Indira Gandhi Indoor Stadium) ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ 2000 ಜನರು ಭಾಗಿಯಾಗಲಿದ್ದಾರೆ.

ಉಳಿದಂತೆ ವಿವಿಧ ರಾಜ್ಯಗಳಿಂದ ಸಹಕಾರ ಸಚಿವರು ಮತ್ತು ಸಹಕಾರ ವಲಯದ ಸುಮಾರು 8 ಕೋಟಿ ಜನರು ವಚ್ರ್ಯುವಲ್‌ ಆಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಅಮಿತ್‌ ಶಾ(Amit Shah) ಅವರು ಕೇಂದ್ರ ಸಹಕಾರ ಸಚಿವರಾಗಿ ನಿಯುಕ್ತಿಗೊಂಡ ಬಳಿಕ ದೇಶದ ಸಹಕಾರಿ ವಲಯವನ್ನು ಉದ್ದೇಶಿಸಿ ಮಾತನಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಹೀಗಾಗಿ ಅಮಿತ್‌ ಶಾ ತಮ್ಮ ಭಾಷಣದಲ್ಲಿ ದೇಶದ ಸಹಕಾರ ವಲಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ತಮ್ಮ ಸಚಿವಾಲಯದ ದೂರದೃಷ್ಟಿಯನ್ನು ಪ್ರಸ್ತುತ ಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಸಮಾವೇಶ ಆಯೋಜಿಸುವ ಮೂಲಕ ಕೇಂದ್ರ ಸರ್ಕಾರ ಸಹಕಾರ ವಲಯದ ಏಳಿಗೆಗೆ ಬದ್ಧವಾಗಿದೆ ಎಂಬ ಸಂದೇಶವನ್ನು ರವಾನಿಸಿದೆ ಎಂದು ಇಂಡಿಯನ್‌ ಫಾರ್ಮರ್ಸ್‌ ಫರ್ಟಿಲೈಸರ್‌ ಕೊ-ಆಪರೇಟಿವ್‌ ಲಿ.(ಭಾರತೀಯ ರೈತರು ರಸಗೊಬ್ಬರ ಸಹಕಾರ ಲಿ.) ಹೇಳಿದೆ.

Follow Us:
Download App:
  • android
  • ios