ಐತಿಹಾಸಿಕ ಬಿಲ್; J&K ಅಸೆಂಬ್ಲಿಯಲ್ಲಿ ಕಾಶ್ಮೀರಿ ಪಂಡಿತರು, PoK ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದ ಕೇಂದ್ರ!
ಜಮ್ಮು ಮತ್ತು ಕಾಶ್ಮೀರದ ಆರ್ಟಿಕಲ್ 370 ರದ್ದು ಮಾಡಿದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಕಾಶ್ಮೀರ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸ್ಥಾನ ಕಾಯ್ದಿರಿಸುವ ಬಿಲ್ ಲೋಕಸಭೆಯಲ್ಲಿ ಮಂಡಿಸಿದೆ.
ನವದೆಹಲಿ(ಡಿ.06) ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲ ಮಹತ್ತರ ಬದಲಾವಣೆ ತಂದಿದೆ. ಈ ಪೈಕಿ ಪ್ರಮುಖ ಘಟ್ಟ ಆರ್ಟಿಕಲ್ 370 ರದ್ದು. ವಿಶೇಷ ಸ್ಥಾನಮಾನ ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಗಿದೆ. ಇದೀಗ ಕೇಂದ್ರ ಬಿಜೆಪಿ ಸರ್ಕಾರ ಮತ್ತೊಂದು ಐತಿಹಾಸಿಕ ಬಿಲ್ ಲೋಕಸಭೆಯಲ್ಲಿ ಮಂಡಿಸಿದೆ. ಜಮ್ಮು ಮತ್ತು ಕಾಶ್ಮೀರದ ಎರಡು ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಪೈಕಿ ಮೀಸಲಾತಿ ಮಸೂದೆಯಡಿಯಲ್ಲಿ ಐತಿಹಾಸಿಕ ನಿರ್ಧಾರವನ್ನು ಕೇಂದ್ರ ಘೋಷಿಸಿದೆ. ಜಮ್ಮು ಮತ್ತು ಕಾಶ್ಮಿರ ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಿರಾಶ್ರಿತರಿಗೆ ಸೀಟು ಕಾಯ್ದಿರಿಸಿದೆ.
ಜಮ್ಮ ಕಾಶ್ಮೀರ ವಿಧಾನಸಭೆಗೆ ಇಬ್ಬರು ಕಾಶ್ಮೀರ ಪಂಡಿತರ ಮಹಿಳೆ ಸೇರಿ ಹಾಗೂ ಒಂದು ಸ್ಥಾನವನ್ನು ಪಾಕಿಸ್ತಾನ ಆಕ್ರಮಿತಿ ಕಾಶ್ಮೀರದ ನಿರಾಶ್ರಿತರಿಗೆ ನೀಡಲಾಗಿದೆ. ಈ ಎರಡು ಸಮುದಾಯದಿಂದ ಒಟ್ಟು ಮೂವರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಆಯ್ಕೆಯಾಗುವ ಮೀಸಲಾತಿ ಮಸೂದೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡಿಸಿದ್ದಾರೆ.
ಭಾರತದ 2 ಪ್ರಧಾನಿ, 2 ಸಂವಿಧಾನ, 2 ಧ್ವಜ ಪ್ರಮಾದ ಸರಿಪಡಿಸಿದ ಮೋದಿ, ಶಾ ಮಾತಿಗೆ ಸದನ ಸೈಲೆಂಟ್!
ಕಾಶ್ಮೀರದ ವಲಸೆ ಸಮುದಾಯ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ನಿರ್ಗತಿಕರಾಗಿರುವ ಸಮುದಾಯಕ್ಕೆ ಸೀಟು ಕಾಯ್ದಿರಿಸಿದ ಬಿಲ್ ಲೋಕಸಭೆಯಲ್ಲಿ ಮಂಡನೆಯಾಗಿದೆ. ಭಯೋತ್ಪಾದಕತೆ ಕಾರಣದಿಂದ ಕಾಶ್ಮೀರ ತೊರೆದ ಸಮುದಾಯದ ಕೊಂದು ಕೊರತೆ, ಬೇಡಿಕೆಗೆ ಧನಿಯಾಗಲು ಈ ಸಮುದಾಯದಿಂದ ಇಬ್ಬರು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಪ್ರತಿನಿಧಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಟ್ಟು 114 ಕ್ಷೇತ್ರದಿಂದ ಪ್ರತಿನಿಧಿಗಳು ಇರಲಿದ್ದಾರೆ. 114 ಸ್ಥಾನದ ಪೈಕಿ 90 ಸ್ಥಾನ ಚುನಾವಣೆ ಮೂಲಕ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರೆ, 24 ಮೀಸಲಾತಿ ಸ್ಥಾನಗಳಾಗಿದೆ. ಇದೀಗ 24ಕ್ಕೆ ಮತ್ತೆ ಮೂರು ಸ್ಥಾನ ಸೇರಿಸಲಾಗಿದೆ. 24 ಸ್ಥಾನಗಳನ್ನು ಕಾಶ್ಮೀರ ಆಕ್ರಮಿತ ಪಾಕಿಸ್ತಾನ ಭಾಗಕ್ಕೆ ಮೀಸಲಾತಿ ಮೂಲಕ ನೀಡಲಾಗಿದೆ.
ಪಾಕ್ ಮಾಜಿ ಯೋಧರು ಈಗ ಉಗ್ರರು: ಐವರ ಬಲಿ ಪಡೆದ ರಜೌರಿ ದಾಳಿ ಹಿಂದೆ ಪಾಕ್ ಸೈನಿಕರು
ಕಳೆದ 70 ವರ್ಷದಿಂದ ಕಾಶ್ಮೀರದ ಮೂಲ ನಿವಾಸಿಗಳು ವಲಸೆ ಹೋಗಿದ್ದಾರೆ. ಭಯೋತ್ಪಾದನೆ ಕಾರಣದಿಂದ ಸುರಕ್ಷಿತ ಸ್ಥಳ ಅರಸಿ ವಲಸೆ ಹೋಗಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಸಮುದಾಯದ ಇಬ್ಬರು ಪ್ರತಿನಿಧಿಗಳು ವಿಧಾನಸಭೆಗೆ ಮೀಸಲಾತಿ ಮೂಲಕ ಆಯ್ಕೆಯಾಗಲಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.