ಜಮ್ಮು ಮತ್ತು ಕಾಶ್ಮೀರ ಕುರಿತ ಮಸೂದೆ ಮಂಡನೆ ವೇಳೆ ಆರ್‌ಜೆಡಿ ಸಂಸದ, ಈ ಸದನದಲ್ಲಿ ಕಾಶ್ಮೀರದ ಪರ ಯಾರೂ ಇಲ್ಲ ಎಂದಿದ್ದಾರೆ. ಈ ಹೇಳಿಕೆಗೆ ಅಮಿತ್ ಶಾ ನೀಡಿದ ಉತ್ತರ ಮರು ಮಾತೇ ಇರಲಿಲ್ಲ. ಕಾಶ್ಮೀರ ಪ್ರತಿಯೊಬ್ಬ ಭಾರತೀಯನಿಗೆ ಸೇರಿದ್ದು, ಅದೇ ರೀತಿ ಭಾರತ, ಪ್ರತಿಯೊಬ್ಬ ಕಾಶ್ಮೀರಿಗೆ ಸೇರಿದೆ ಎಂದಿದ್ದಾರೆ. ಅಮಿತ್ ಶಾ ಖಡಕ್ ಉತ್ತರದ ವಿಡಿಯೋ ಇಲ್ಲಿದೆ.
ನವದೆಹಲಿ(ಡಿ.11) ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ ಮಸೂದೆ ಮಂಡಿಸಿದ್ದಾರೆ. ಲೋಕಸಭೆಯಲ್ಲಿ ಅಂಗೀಕಾರ ಪಡೆದ ಈ ಮಸೂದೆಯನ್ನು ಇದೀಗ ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಇದೇ ವೇಳೆ ಆರ್‌ಜೆಡಿ ಸಂಸದ ಮನೋಜ್ ಕುಮಾರ್ ಝಾ ಮಹತ್ವದ ಹೇಳಿಕೆ ನೀಡಿದ್ದರು. ಕಾಶ್ಮೀರದ ಪರವಾಗಿ ಬಿಲ್ ಮಂಡಿಸುವಾಗ ಈ ಸದನದಲ್ಲಿ ಕಣಿವೆ ರಾಜ್ಯದ ಪರವಾಗಿ ಯಾರೂ ಇಲ್ಲ ಎಂದಿದ್ದಾರೆ. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಅಮಿತ್ ಶಾ, ನಿಮ್ಮ ವಿಚಾರವನ್ನು ಹೇಳುತ್ತಿದ್ದೀರಿ. ನಾವು ಯಾವತ್ತೂ ಕಾಶ್ಮೀರೀಗರ ಪರವಾಗಿ ನಿಂತಿದ್ದೇವೆ. ಕಾಶ್ಮೀರ ಪ್ರತಿಯೊಬ್ಬ ಭಾರತೀಯನಿಗೆ ಸೇರಿದೆ. ಅದೇ ರೀತಿ ಭಾರತ ದೇಶ ಪ್ರತಿಯೊಬ್ಬ ಕಾಶ್ಮೀರಿಗೆ ಸೇರಿದೆ ಎಂದಿದ್ದಾರೆ.
ಕಾಶ್ಮೀರ ಮೀಸಲಾತಿ ಮಸೂದೆ ಮಂಡಿಸಿದ ಬೆನ್ನಲ್ಲೇ ಮನೋಜ್ ಕುಮಾರ್, ಈ ಸದನದಲ್ಲಿ ಇಂದು ಕಾಶ್ಮೀರದ ಪರವಾಗಿ ಯಾರೂ ಇಲ್ಲ ಎಂದಿದ್ದಾರೆ. ತಕ್ಷಣವೇ ಎದ್ದು ನಿಂತ ಅಮಿತ್ ಶಾ, ಈ ಮಾತನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಸಭಾಧ್ಯಕ್ಷರ ಮೂಲಕ ಸ್ಪಷ್ಟ ಸಂದೇಶ ರವಾನಿಸಿದ, ಅಮಿತ್ ಶಾ, ಸಂದರು ತಮ್ಮ ಬಗ್ಗೆ ಹೇಳುತ್ತಿದ್ದಾರೆ. ಆದರೆ ನೀವು ನಮ್ಮ ಬಗ್ಗೆ ಯಾಕೆ ಹೇಳುತ್ತಿದ್ದೀರಿ? ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ, ದ್ವಾರಕದಿಂದ ಈಶಾನ್ಯ ರಾಜ್ಯಗಳವರೆಗಿನ ಜನರಿಗೆ ಕಾಶ್ಮೀರ ಸೇರಿದೆ. ಅದೇ ರೀತಿ ಪ್ರತಿಯೊಬ್ಬ ಕಾಶ್ಮೀರಿಗೆ ಭಾರತ ಸೇರಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
Article 370 Verdict: ಲಡಾಖ್ ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನಕ್ಕೂ ಸುಪ್ರೀಂ ಅಸ್ತು
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲು (ತಿದ್ದುಪಡಿ) ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್‌ವಿಂಗಡನಾ (ತಿದ್ದುಪಡಿ) ಮಸೂದೆ ಮಂಡಿಸಿ ಮಾತನಾಡಿದ್ದ ಅಮಿತ್ ಶಾ, 70 ವರ್ಷಗಳಿಂದ ತಮ್ಮ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯ ದೊರಕಿಸಿಕೊಡುತ್ತವೆ ಮತ್ತು ಸ್ಥಳಾಂತರಗೊಂಡವರಿಗೆ ಶಾಸನಸಭೆಯಲ್ಲಿ ತಮ್ಮ ಧ್ವನಿಯಾಗಲು ಅವಕಾಶ ಕಲ್ಪಿಸುತ್ತವೆ’ ಎಂದರು. ಇದೇ ವೇಳೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಜಮ್ಮುಗೆ ಈ ಹಿಂದೆ 37 ಸ್ಥಾನ ಇತ್ತು. ಅದನ್ನು ಇದೀಗ 43ಕ್ಕೆ ಹೆಚ್ಚಿಸಲಾಗಿದೆ. ಅದೇ ರೀತಿ ಕಾಶ್ಮೀರಕ್ಕೆ 46 ಸ್ಥಾನ ಇದ್ದು ಅದನ್ನು 47ಕ್ಕೆ ಹೆಚ್ಚಿಸಲಾಗಿದೆ. ಜೊತೆಗೆ 24 ಸ್ಥಾನಗಳನ್ನು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶಕ್ಕೆಂದೇ ಮೀಸಲಿಡಲಾಗಿದೆ ಏಕೆಂದರೆ ಅದು ನಮ್ಮ ಪ್ರದೇಶ’ ಎಂದು ಹೇಳಿದರು.
Article 370: ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಮೋದಿ, ಅಮಿತ್ ಶಾ, ಕಾಶ್ಮೀರಿ ನಾಯಕರು ಹೇಳಿದ್ದೀಗೆ..
ನೆಹರು ಅವರು ಎಸಗಿದ ಎರಡು ಪ್ರಮಾದಗಳಿಂದ ಜಮ್ಮು ಮತ್ತು ಕಾಶ್ಮೀರದ ಜನತೆ ಇಂದಿಗೂ ಕಷ್ಟ ಅನುಭವಿಸುತ್ತಿದ್ದಾರೆ. ನೆಹರು ಎಸಗಿದ ಮೊದಲ ತಪ್ಪೆಂದರೆ 1962ರ ಪಾಕಿಸ್ತಾನದ ವಿರುದ್ಧ ಯುದ್ಧದಲ್ಲಿ ಭಾರತ ಗೆಲುವಿನ ಹಂತದಲ್ಲಿದ್ದಾಗ ಮತ್ತು ಭಾರತೀಯ ಸೇನೆ ಹಾಲಿ ಪಾಕ್‌ನ ಭಾಗವಾಗಿರುವ ಪಂಜಾಬ್ ಪ್ರಾಂತ್ಯವನ್ನು ಪ್ರವೇಶಿಸಿದ್ದ ವೇಳೆ ನೆಹರು ಕದನ ವಿರಾಮ ಘೋಷಿಸಿದರು. ಈ ಮೂಲಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಜನನಕ್ಕೆ ಕಾರಣವಾದರು. ಈ ತಪ್ಪನ್ನು ಮೋದಿ ಸರಿ ಮಾಡಿದ್ದಾರೆ ಎಂದಿದ್ದರು.
