* ಜನಸಂಖ್ಯೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಉತ್ತರಪ್ರದೇಶ ಸರ್ಕಾರ* 10,000 ಕೋಟಿ ವೆಚ್ಚದಲ್ಲಿ ಲಸಿಕೆ ಖರೀದಿಗೆ ಯುಪಿ ಯೋಗಿ ಸರ್ಕಾರ ನಿರ್ಧಾರ!'* ಈಗಾಗಲೇ ಅಮೆರಿಕದ ಫೈಝರ್‌ ಮತ್ತು ಹೈದ್ರಾಬಾದ್‌ ಮೂಲದ. ಡಾ.ರೆಡ್ಡೀಸ್‌ ಲ್ಯಾಬ್‌ ಜೊತೆಗೆ ಮಾತುಕತೆ

ಲಖನೌ(ಮೇ.15): ಜನಸಂಖ್ಯೆಯಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿರುವ ಉತ್ತರಪ್ರದೇಶ ಸರ್ಕಾರ, ಜನರಿಗೆ ಕೋವಿಡ್‌ ಲಸಿಕೆ ವಿತರಿಸಲು ಅಂದಾಜು 10000 ಕೋಟಿ ರು. ವಿನಿಯೋಗಿಸಲು ನಿರ್ಧರಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ರಾಜ್ಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ನವನೀತ್‌ ಸೆಹಗಲ್‌, ಲಸಿಕೆ ಖರೀದಿ ಕುರಿತು ನಾವು ಈಗಾಗಲೇ ಅಮೆರಿಕದ ಫೈಝರ್‌ ಮತ್ತು ಹೈದ್ರಾಬಾದ್‌ ಮೂಲದ. ಡಾ.ರೆಡ್ಡೀಸ್‌ ಲ್ಯಾಬ್‌ ಜೊತೆಗೆ ಮಾತುಕತೆ ನಡೆಸಿದ್ದೇವೆ. ಲಸಿಕೆ ಖರೀದಿಗೆ 10000 ಕೋಟಿ ರು. ವಿನಿಯೋಗಿಸಲಿದ್ದೇವೆ. ಇನ್ನೂ ಹೆಚ್ಚಿನ ಹಣ ವಿನಿಯೋಗಿಸಲೂ ಸರ್ಕಾರ ಬದ್ಧ ಎಂದು ತಿಳಿಸಿದ್ದಾರೆ.

22 ಕೋಟಿ ಜನಸಂಖ್ಯೆ ಹೊಂದಿರುವ ರಾಜ್ಯದಲ್ಲಿ ಈ ವರೆಗೆ 1.20 ಕೋಟಿ ಜನರಿಗೆ ಮಾತ್ರವೇ ಲಸಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ರಾಜ್ಯದಲ್ಲಿ ಈ ವರೆಗೆ 16 ಲಕ್ಷ ಜನರಿಗೆ ಸೋಂಕು ತಗುಲಿದ್ದು, ಈ ಪೈಕಿ 13.6 ಲಕ್ಷ ಜನರು ಚೇತರಿಸಿಕೊಂಡಿದ್ದಾರೆ. ಜೊತೆಗೆ 16700ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ.