ನವದೆಹಲಿ(ಆ.19): ಗಡಿಯಲ್ಲಿ ಚೀನಾ ಜತೆಗಿನ ಸಂಘರ್ಷ ಮುಂದುವರಿದಿರುವಾಗಲೇ, ಬೆಂಗಳೂರಿನ ಹಿಂದುಸ್ತಾನ್‌ ಏರೋನಾಟಿಕ್ಸ್‌ ಸಂಸ್ಥೆ (ಎಚ್‌ಎಎಲ್‌) ಅಭಿವೃದ್ಧಿಪಡಿಸಿರುವ ತೇಜಸ್‌ ಲಘು ಯುದ್ಧ ವಿಮಾನಗಳನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ. ಇದರಿಂದಾಗಿ ವಾಯುಪಡೆಗೆ ಮತ್ತಷ್ಟುಬಲ ಸಿಕ್ಕಂತಾಗಿದೆ.

ಬೆಂಗಳೂರಿನಲ್ಲಿ ತಯಾರಾದ ಸ್ವದೇಶಿ ತೇಜಸ್‌ ಯುದ್ಧ ವಿಮಾನಗಳು ಮೊದಲಿಗೆ ಬೆಂಗಳೂರಿನಲ್ಲೇ ಇದ್ದವು. ಕಳೆದ ಕೆಲವು ವರ್ಷಗಳ ಹಿಂದೆ ತಮಿಳುನಾಡಿನ ಸೂಲೂರಿನಲ್ಲಿರುವ ವಾಯುಪಡೆಯ 45ನೇ ಸ್ಕಾ ್ವಡ್ರನ್‌ಗೆ ಕಳುಹಿಸಲಾಗಿತ್ತು. ಆ ಸ್ಕಾ ್ವಡ್ರನ್‌ನಲ್ಲಿ 20 ತೇಜಸ್‌ ವಿಮಾನಗಳು ಇವೆ. ಈ ವಿಮಾನಗಳನ್ನು ಪಾಕಿಸ್ತಾನ ಗಡಿಗೆ ಸನಿಹದಲ್ಲಿ ನಿಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

ಲಡಾಖ್ ಬೆನ್ನಲ್ಲೇ ಪಾಕಿಸ್ತಾನ ಗಡಿ ಬಳಿ ತೇಜಸ್ ಯುದ್ದ ವಿಮಾನ ನಿಯೋಜಿಸಿದ IAF!

ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೇಜಸ್‌ ವಿಮಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ತೇಜಸ್‌ನ ಮಾರ್ಕ್ 1ಎ ಮಾದರಿಯ ಖರೀದಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದರು.

ತೇಜಸ್‌ ವಿಮಾನ ಕಳೆದ ಮಾಚ್‌ರ್‍ 17ರಂದು ಬೆಂಗಳೂರಿನಲ್ಲಿ ಯಶಸ್ವಿ ಹಾರಾಟ ನಡೆಸುವ ಮೂಲಕ ಅಂತಿಮ ಹಾರಾಟ ಅನುಮತಿ ಪಡೆದುಕೊಂಡಿದೆ. ಈ ವಿಮಾನಕ್ಕೆ ಹಾರಾಡುವಾಗಲೇ ಇಂಧನ ಭರ್ತಿ, ದೃಷ್ಟಿಗೆ ಕಾಣದ ಶತ್ರುಪಡೆಗಳನ್ನು ಸಂಹಾರ ಮಾಡುವ ಕ್ಷಿಪಣಿ ವ್ಯವಸ್ಥೆಯನ್ನು ಅಳವಡಿಕೆ ಮಾಡಲಾಗಿದೆ.