Asianet Suvarna News Asianet Suvarna News

ಅಮೆರಿಕ, ಪಾಕಿಸ್ತಾನ ಸೇರಿ ವಿಶ್ವದೆಲ್ಲೆಡೆಯಿಂದ ಭಾರತಕ್ಕೆ ನೆರವಿನ ಅಭಯ!

2ನೇ ಕೊರೋನಾ ಅಲೆಗೆ ಪ್ರತಿ ದಿನ 3 ಲಕ್ಷಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ. ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ಇದರ ನಡುವೆ ಆಕ್ಸಿಜನ್ ಕೊರತೆ ಸೇರಿದಂತೆ ಹಲವು ವೈದ್ಯಕೀಯ ಸವಾಲುಗಳು ಎದುರಾಗಿದೆ. ಇದೀಗ ಅಮೆರಿಕ, ಫ್ರಾನ್ಸ್, ಪಾಕಿಸ್ತಾನ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವು ನೀಡಲು ಮುಂದಾಗಿದೆ.

America Pakistan wolrd Leaders expressed their concern over surge in Covid 19 cases in India ckm
Author
Bengaluru, First Published Apr 25, 2021, 5:59 PM IST

ನವದೆಹಲಿ(ಏ.25): ಕೊರೋನಾ ವೈರಸ್ 2ನೇ ಅಲೆಗೆ ದೇಶ ಹಲವು ಸಮಸ್ಯೆ ಎದುರಿಸುತ್ತಿದೆ. ಆಕ್ಸಿಜನ್ ಸಮಸ್ಯೆ ಕಾರಣ ಹಲವು ರೋಗಿಗಳು ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ಆಕ್ಸಿಜನ್ ಸಮಸ್ಯೆಗೆ ಉತ್ತರ ಕಂಡುಕೊಂಡಿದೆ. ಆದರೆ ಸಮಸ್ಯೆಗಳು ಇಲ್ಲಿಗೆ ಅಂತ್ಯವಾಗಿಲ್ಲ. ಇದೀಗ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಭಾರತಕ್ಕೆ ನೆರವು ನೀಡಲು ಮುಂದಾಗಿದೆ. 

ಆಕ್ಸಿಜನ್ ಕೊರತೆಗೆ ಮೋದಿ ಪರಿಹಾರ; ಸರ್ಕಾರಿ ಆಸ್ಪತ್ರೆಗಳಲ್ಲಿ 551 ಉತ್ಪಾದಕ ಘಟಕ ಸ್ಥಾಪನೆ!

ಭಾರತಕ್ಕೆ ಅಗತ್ಯ ವೈದ್ಯಕೀಯ ವಸ್ತುಗಳ ಪೂರೈಕೆಗೆ ಅಮರಿಕ ಮುಂದಾಗಿದೆ. ಈ ಕುರಿತು ಅಮೆರಿಕ ರಾಷ್ಟ್ರೀಟ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಟ್ವೀಟ್ ಮೂಲಕ ನೆರವಿನ ಭರವಸೆ ನೀಡಿದ್ದಾರೆ.  ಭಾರತದಲ್ಲಿ ದಿಢೀರ್ ಕೋವಿಡ್ ಪ್ರಕರಣ ಹೆಚ್ಚಾಗಿದೆ.  ಈ ಬೆಳವಣಿಯಿಂದ ಅಮೆರಿಕ ಕಳವಳಗೊಂಡಿದೆ. ನಮ್ಮ ಜೊತೆಗಾರ ಭಾರತಕ್ಕೆ ನೆರವು ನೀಡಲು ನಾವು ಶ್ರಮಿಸುತ್ತಿದ್ದೇವೆ. ಹೆಚ್ಚಿನ ಸಲಕರಣೆ ಹಾಗೂ ಬೆಂಬಲ ನೀಡುತ್ತೇವೆ ಎಂದು ಜೇಕ್ ಟ್ವೀಟ್ ಮಾಡಿದ್ದಾರೆ.

 

ಇನ್ನು ಅಮೆರಿಕ ಸ್ಟೇಟ್ಸ್ ಸೆಕ್ರೆಟರಿ ಆ್ಯಂಟನಿ ಬ್ಲಿಂಕೆನ್ ಭಾರತಕ್ಕೆ ನೆರವು ಘೋಷಿಸಿದ್ದಾರೆ. ಭಾರತ ಅತೀ ಭೀಕರ ಕೋವಿಡ್‌ಗೆ ಗುರಿಯಾಗಿದೆ. ನಮ್ಮ ಹೃದಯ ಭಾರತೀಯರಿಗಾಗಿ ಮಿಡಿಯತ್ತಿದೆ. ನಮ್ಮ ಪಾಲುದಾರ ಭಾರತಕ್ಕೆ ಎಲ್ಲಾ ನೆರವು ನೀಡುತ್ತೇವೆ. ಶೀಘ್ರದಲ್ಲೇ ಹೆಚ್ಚುವರಿ ನೆರವನ್ನು ನೀಡುತ್ತೇವೆ ಎಂದು ಆ್ಯಂಟನಿ ಟ್ವೀಟ್ ಮಾಡಿದ್ದಾರೆ.

 

ಭಾರತಕ್ಕೆ ಲಸಿಕೆ ಅವಶ್ಯಕತೆ ಹೆಚ್ಚಿದೆ. ಅಮೆರಿಕದಲ್ಲಿ 40 ಮಿಲಿಯನ್ ಡೋಸೇಜ್ ಶೇಖರಿಸಿಡಲಾಗಿದೆ. ಇದರಲ್ಲಿ ಆಕ್ಸ್‌ಫರ್ಡ್ ಆಸ್ಟ್ರಾಜೆನೆಕಾ ಲಸಿಕೆಯನ್ನು ಭಾರತಕ್ಕೆ ಬಿಡುಗಡೆ ಮಾಡುವಂತೆ ಅಮೆರಿಕ ಕಾಂಗ್ರೆಸ್‌ಮ್ಯಾನ್ ರಾಜಾ ಕೃಷ್ಣಮೂರ್ತಿ, ಅಧ್ಯಕ್ಷ ಜೋ ಬೈಡೆನ್‌ ಜೊತೆ ಮಾತುಕತೆ ನಡೆಸಿದ್ದಾರೆ.

ಕರೋನವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಬೆಂಬಲ ನೀಡಲು ಫ್ರಾನ್ಸ್ ಸಿದ್ಧವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.  ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ನಾವಿದ್ದೇವೆ ಎಂದು ಫ್ರಾನ್ಸ್ ಹೇಳಿದೆ. 

 

ಭಾರತದ ಜೊತೆಗೆ ನಾವಿದ್ದೇವೆ. ಒಗ್ಗಟ್ಟಾಗಿ ಹೋರಾಡೋಣ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. 

Follow Us:
Download App:
  • android
  • ios