Asianet Suvarna News Asianet Suvarna News

Amedabad Bomb Blast ಮಾಸ್ಟರ್ ಮೈಂಡ್ ಅಬು ಬಶರ್‌ನನ್ನು ಅರೆಸ್ಟ್‌ನಿಂದ ಬಿಡಿಸಲು ಕಾಂಗ್ರೆಸ್ ನಡೆಸಿತ್ತು ಯತ್ನ!

  • ಅಹಮದಾಬಾದ್ ಬಾಂಬ್ ಸ್ಫೋಟದ ಬಳಿಕ ನಡೆದ ಭಯಾಕನ ಘಟನೆ
  • ಅಪರಾಧಿಯನ್ನು ರಕ್ಷಿಸಲು ಕಾಂಗ್ರೆಸ್ ನಡೆಸಿತ್ತು ಬಹುದೊಡ್ಡ ಪ್ಲಾನ್
  • ಕಾಂಗ್ರೆಸ್ ನಾಯಕರ ಹೇಳಿಕೆ ಹಿಂದಿತ್ತು ಮಾಸ್ಟರ್ ಪ್ಲಾನ್
     
Amedabad Bomb Blast 2008 how congress try to save mastermind Abu Bashar from arrest hypocrisy of INC ckm
Author
Bengaluru, First Published Feb 19, 2022, 1:26 AM IST | Last Updated Feb 19, 2022, 1:27 AM IST

ಗುಜರಾತ್(ಫೆ.19): ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದಲ್ಲಿ 38 ಮಂದಿಗೆ ಮರಣದಂಡನೆ ಶಿಕ್ಷೆ ವಿಧಿಸಿದರೆ, ಇನ್ನುಳಿದ 11 ಮಂದಿಗೆ ಜೀವಾವದಿ ಶಿಕ್ಷೆಯನ್ನು ವಿಶೇಷ ನ್ಯಾಯಾಯಲಯ ಪ್ರಕಟಿಸಿದೆ. ಮರಣದಂಡನೆಗೆ ಒಳಗಾದ ಅಪರಾಧಿಗಳ ಪೈಕಿ ಈ ಸರಣಿ ಬಾಂಬ್ ಸ್ಫೋಟದ ರೂವಾರಿ ಅಬು ಬಶರ್ ಕೂಡ ಇದ್ದಾನೆ. ಇದೇ ಅಬು ಬಶರ್‌ನ್ನು 2008ರಲ್ಲಿ ಗುಜರಾತ್ ಪೊಲೀಸರು ಬಂಧಿಸಿದ ಬೆನ್ನಲ್ಲೇ ಬಶರ್ ಅಮಾಯಕ ಎಂದು ಬಂಬಿಸಿ ಬಂಧನ ಮುಕ್ತಗೊಳಿಸಲು ಕಾಂಗ್ರೆಸ್ ಯತ್ನಿಸಿತ್ತು. ಇದೀಗ ಇದೇ ಬಶರ್‌ಗೆ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

ಸ್ಫೋಟ ನಡೆದು 14 ವರ್ಷಗಳ ಬಳಿಕ ತೀರ್ಪು ಹೊರಬಂದಿದೆ. ಸಾಕ್ಷಿ, ದಾಖಲೆ, ವಾದ ಪ್ರತಿವಾದ ಸೇರಿದಂತೆ ಸುದೀರ್ಘ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ.ಕಾಂಗ್ರೆಸ್ ಈ ಬಾಂಬ್ ಸ್ಫೋಟಕ ಮಾಸ್ಟರ್ ಮೈಂಡ್ ಅಬು ಬಶರ್ ಬಿಡುಗಡೆ ಯತ್ನಿಸಿದ್ದು ಮಾತ್ರವಲ್ಲ, ಅಮಾಯಕ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಬಂಧನ ಮಾಡಲಾಗಿದೆ. ಉಗ್ರ ಸಂಘನೆಟೆ ಸಿಮಿಯನ್ನು ಇಲ್ಲ ಸಲ್ಲದ ಆರೋಪ ಮಾಡಿ ನಿಷೇಧಿಸಲಾಗಿದೆ ಎಂದು ಕಾಂಗ್ರೆಸ್ ಹೇಳಿತ್ತು. ಇದೀಗ ಕಾಂಗ್ರೆಸ್ ಈ ವಿಚಾರ ಅತ್ತ ನುಂಗಲು ಆಗದೆ ಇತ್ತ ಉಗುಳಲು ಆಗದೆ ಧರ್ಮ ಸಂಕಟಕ್ಕೆ ಸಿಲುಕಿದೆ.

2008 Ahmedabad Bomb Blasts: 38 ಅಪರಾಧಿಗಳಿಗೆ ಗಲ್ಲು, 11 ಮಂದಿಗೆ ಜೀವಾವಧಿ ಶಿಕ್ಷೆ!

2008ರಲ್ಲಿ ಸರಣಿ ಬಾಂಬ್ ಸ್ಪೋಟ ನಡೆದ ಬಳಿಕ ಗುಜರಾತ್ ಪೊಲೀಸರು ತನಿಖೆ ಆರಂಭಿಸಿದರು. ಸಿಕ್ಕ ಮಾಹಿತಿಗಳನ್ನು ಕಲೆ ಹಾಕಿ ಪ್ರಕರಣ ಮಾಸ್ಟರ್ ಮೈಂಡ್ ಸೇರಿದಂತೆ ಕೃತ್ಯ ಎಸಗಿದ ಬಹುತೇಕರನ್ನು ಬಂಧಿಸಿತ್ತು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ವಿಶೇಷ ತಂಡ ರಚಿಸಿ ಪ್ರಕರಣ ಬೇಧಿಸಲು ಸೂಚಿಸಿದ್ದರು.ಅಬು ಬಶರ್ ಬೆನ್ನಲ್ಲೇ ಗುಜರಾತ್ ಕಾಂಗ್ರೆಸ್ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿತ್ತು. ಅಬು ಬಶರ್ ಬಂಧನದ ಬೆನ್ನಲ್ಲೇ ಯುಪಿ ಕಾಂಗ್ರೆಸ್ ನಯಾಕ ರಾಮ್ ನರೇಶ್ ಯಾದವ್ ನೇರವಾಗಿ ಬಶರ್ ಮನೆಗೆ ತೆರಳಿ ಪೋಷಕರಿಕೆ ಸಾಂತ್ವನ ಹೇಳಿದ್ದರು. ಬಳಿಕ ಗುಜರಾತ್ ಪೊಲೀಸರು ಅಯಾಮಕ ಅಬುರನ್ನು ಬಂಧಿಸಿದ್ದಾರೆ. ಇದು ತಪ್ಪಾದ ಬಂಧನವಾಗಿದೆ. ಈ ವಿಚಾರವನ್ನು ಕಾಂಗ್ರೆಸ್ ಹೈಕಮಾಂಡ್‌ಗ ಕೊಂಡೊಯ್ಯುತ್ತೇನೆ. ನಿಮ್ಮ ಮಗನಿಗೆ ಪರ ನಾವಿದ್ದೇವೆ ಎಂದು ಅಬು ಬಶರ್ ಪೊಷಕರಿಗೆ ಹೇಳಿದ್ದರು. ಈ ಕುರಿತು ಖ್ಯಾತ ಪತ್ರಕರ್ತ ಜಪನ್ ಕೆ ಪಾತಕ್ ಟ್ವೀಟ್ ಸಂಚಲನ ಸೃಷ್ಟಿಸಿದೆ..

 

ಕಾಂಗ್ರೆಸ್ ಸರಣಿ ಸ್ಫೋಟಕ ಆರೋಪಿಗಳ ನೆರವಿಗೆ ನಿಂತಿತ್ತು. ಒಬ್ಬರ ಮೇಲೊಬ್ಬ ನಾಯಕ ಉಗ್ರರ ಪರ ಹೇಳಿಕೆ ನೀಡಲು ಆರಂಭಿಸಿದರು. ಇದು ಬಿಜೆಪಿ ಹಾಗೂ ಮೋದಿ ನಡೆಸಿದ ದಾಳಿ ಎಂದು ಹೇಳಿ, ಇಡೀ ಪ್ರಕರಣಕ್ಕೆ ಯೂ ಟರ್ನ್ ನೀಡಲು ಕಾಂಗ್ರೆಸ್ ಇನ್ನಿಲ್ಲದ ಶ್ರವಹಿಸಿತ್ತು. 

2008 Ahmedabad Bomb Blasts: 13 ವರ್ಷ ವಿಚಾರಣೆ, 1100 ಸಾಕ್ಷಿ, 49 ಆರೋಪಿಗಳಿಗೆ ಶಿಕ್ಷೆ!

ಅಂದು ಕಾಂಗ್ರೆಸ್ ಕೇಂದ್ರ ಸಚಿವರಾಗಿದ್ದ ಶಂಕರ್‌ ಸಿನ್ಹ ವಘೇಲಾ ಸಿಲ್ಕ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮ ಜೊತೆ ಮಾತನಾಡುತ್ತಾ ನೇರವಾಗಿ ಸಿಎಂ ಮೋದಿ ಹಾಗೂ ಗುಜರಾತ್ ಸರ್ಕಾರದ ವಿರುದ್ದ ಆರೋಪ ಮಾಡಿದ್ದರು. ಗುಜರಾತ್ ಪೊಲೀಸರು ಅಮಾಯಕ ಮುಸ್ಲಿಮರನ್ನು ಬಂಧಿಸಿ ಭಯೋತ್ಪಾದಕರು ಎಂದು ಬಿಂಬಿಸುತ್ತಿದೆ. ಈ ಬಾಂಬ್ ಸ್ಫೋಟ ಮೋದಿ ಹಾಗೂ ಬಿಜೆಪಿ ರಾಜಕೀಯ ಮೈಲೇಜ್‌ಗಾಗಿ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ವಿವಾದಿತ ಹೇಳಿಕೆ ನೀಡುವುದರಲ್ಲಿ ನಿಸ್ಸೀಮರಾಗಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆ ಗಮನಿಸಿದರೆ ಪ್ರಕರಣದ ಹಿಂದೆ ಕಾಂಗ್ರೆಸ್ ಭಯೋತ್ಪಾದಕರಿಗೆ ನೆರವು ನೀಡಲು ಟೊಂಕ ಕಟ್ಟಿ ನಿಂತಿದ್ದರು ಅನ್ನೋದು ಸ್ಪಷ್ಟವಾಗಲಿದೆ. ಈ ದೇಶದಲ್ಲಿ ಯಾವಾಗೆಲ್ಲಾ ಬಿಜೆಪಿಗೆ ಸಮಸ್ಯೆಯಾಗಿದೆ. ಆ ಸಂದರ್ಭದಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದೆ. ಬಿಜೆಪಿ ಹಾಗೂ ಆರ್‌ಎಸ್ಎಸ್ ಬಾಂಬ್ ತಯಾರಿಕೆಯಲ್ಲಿ ತೊಡಗಿದೆ ಎಂದು ದಿಗ್ವಿಜಯ್ ಸಿಂಗ್ ಆರೋಪಿಸಿದ್ದರು.

ಇಷ್ಟಕ್ಕೆ ಕಾಂಗ್ರೆಸ್ ಷಡ್ಯಂತ್ರ ಮುಗಿದಿಲ್ಲ. ಉತ್ತರ ಪ್ರದೇಶದಲ್ಲಿ ಅಬು ಬಶರ್‌ನನ್ನು ಬಂಧಿಸಲಾಯಿತು. ಆದರೆ ಬಶರ್‌ನನ್ನು ಗುಜರಾತ್‌ಗೆ ಕರೆತರಲು ಅಂದಿನ ಉತ್ತರ ಪ್ರದೇಶದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಲಿಲ್ಲ. ಆದರೆ ಕೋರ್ಟ್ ಮೊರೆ ಹೋದ ಗುಜರಾತ್ ಪೊಲೀಸರಿಗೆ ಅನುಮತಿ ಸಿಕ್ಕಿತ್ತು. ವಿಮಾನ ಹೈಜಾಕ್ ಆಗುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ ಸಾಮಾನ್ಯ ವಿಮಾನದಲ್ಲಿ ಅಬು ಬಶರ್ ಕಳಹಿಸಿಲು ಸಾಧ್ಯವಿಲ್ಲ ಅನ್ನೋ ವಾದ ಮುಂದಿಟ್ಟಿತ್ತು. ತಕ್ಷಣವೇ ಗುಜರಾತ್ ಸರ್ಕಾರ ವಿಶೇಷ ವಿಮಾನ ಕಳುಹಿಸಿ ಆರೋಪಿ ಅಬು ಬಶರ್‌ನನ್ನು ಗಜರಾತ್‌ಗೆ ಕರೆ ತಂದು ವಿಚಾರಣೆ ನಡೆಸಿತು. ಇದೀಗ ಇದೇ ಬಶರ್ ಸೇರಿ 49 ಮಂದಿಗ ಶಿಕ್ಷೆ ಪ್ರಕಟವಾಗಿದೆ.

ಘಟನೆ ನಡೆದು 9 ವರ್ಷಗಳ ಬಳಿಕ ಅಂದರೆ 2017ರಲ್ಲಿ ಲಾಲು ಪ್ರಸಾದ್ ಯಾದವ್ ಅಚ್ಚರಿ ಹೇಳಿಕೆ ನೀಡಿದ್ದರು. ಅಬು ಬಶರ್ ಬಂಧನ ಬಿಜೆಪಿ ಪಿತೂರಿ. ಬಶರ್ ಅಮಾಯಕ. ಆತ ಮುಸ್ಲಿಂ ಅನ್ನೋ ಕಾರಣಕ್ಕೆ ಟಾರ್ಗೆಟ್ ಮಾಡಿದ್ದಾರೆ. ಇನ್ನು ಸಿಮಿ ಉಗ್ರ ಸಂಘಟನೆ ಮೇಲಿನ ನಿಷೇಧ ತಪ್ಪು ನಿರ್ಧಾರ ಎಂದಿದ್ದರು.ಇಂಡಿಯನ್ ಮುಜಾಹಿದ್ದೀನ್ ಉಗ್ರ ಸಂಘಟನೆ, ಸಿಮಿ ಉಗ್ರ ಸಂಘಟನೆ ಈ ದಾಳಿಯ ಹಿಂದಿನ ರೂವಾರಿಯಾಗಿತ್ತು. 
 

Latest Videos
Follow Us:
Download App:
  • android
  • ios