Asianet Suvarna News Asianet Suvarna News

ಭಾರತದಲ್ಲಿ ವಿವಾಹಿತ ಮಹಿಳೆಯರು ತುಂಬಾ ಪೊಸೆಸಿವ್ ಎಂದ ಅಲಹಾಬಾದ್ ಹೈಕೋರ್ಟ್!

ಆತ್ಮಹತ್ಯೆ ಪ್ರಕರಣದ ವಿಚಾರಣೆಯ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಅಲಹಾಬಾದ್ ಹೈಕೋರ್ಟ್, ಭಾರತೀಯ ವಿವಾಹಿತ ಮಹಿಳೆಯರು 'ತುಂಬಾ ಪೊಸೆಸಿವ್' ಮತ್ತು "ತಮ್ಮ ಗಂಡನನ್ನು ಬೇರೆಯವರ ಜೊತೆ ಕಾಣಲು ಇಷ್ಟಪಡುವುದಿಲ್ಲ' ಎಂದು ಹೇಳಿದೆ.

Allahabad High Court says Indian married women are extremely possessive and cant share their husbands san
Author
Bengaluru, First Published May 3, 2022, 6:28 PM IST

ಲಕ್ನೋ (ಮೇ.3): ಭಾರತದಲ್ಲಿ ವಿವಾಹಿತ ಮಹಿಳೆ (Indian Married Women) ತನ್ನ ಗಂಡನ ಬಗ್ಗೆ ಅತ್ಯಂತ ಪೊಸೆಸಿವ್ (possessive) ಆಗಿರುತ್ತಾಳೆ ಮತ್ತು ಆತನನ್ನು ಇತರರೊಂದಿಗೆ ಹಂಚಿಕೊಳ್ಳುವುದಾಗಲಿ, ಬೇರೆ ಮಹಿಳೆಯರ ಜೊತೆ ಇರುವುದಾಗಲಿ ಅವರು ಸಹಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿ ರಾಹುಲ್ ಚತುರ್ವೇದಿ (Justice Rahul Chaturvedi) ಅವರ ಪೀಠವು ತನ್ನ ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಬಿಡುಗಡೆ ಅರ್ಜಿಯನ್ನು ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ. ಆರೋಪಿ ಸುಶೀಲ್ ಕುಮಾರ್ (Sushil Kumar) ಮೂರನೇ ಬಾರಿಗೆ ಮದುವೆಯಾಗಿದ್ದು, ಆತನ ಪತ್ನಿ ಆತ್ಮಹತ್ಯೆ ಮಾಡಿಕೊಳ್ಳಲು ಇದೊಂದೇ ಕಾರಣ ಎಂದು ನ್ಯಾಯಾಲಯ ಹೇಳಿದೆ.

ಹೆಂಡತಿಗೆ, ಆಕೆಯ ಪತಿ ಇನ್ನೊಬ್ಬ ಮಹಿಳೆಯನ್ನು ರಹಸ್ಯವಾಗಿ ಮದುವೆಯಾಗುವುದು ತನ್ನ ಸ್ವಂತ ಜೀವನವನ್ನು ಕೊನೆಗೊಳಿಸಲು ಸಾಕಷ್ಟು ದೊಡ್ಡ ಕಾರಣವೂ ಆಗಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಭಾರತದ ವಿವಾಹಿತ ಮಹಿಳೆಯರು ತಮ್ಮ ಗಂಡನ ಬಗ್ಗೆ ಅಕ್ಷರಶಃ ಪೊಸೆಸಿವ್ ಆಗಿದ್ದಾರೆ. ಯಾವುದೇ ವಿವಾಹಿತ ಮಹಿಳೆಗೆ ತನ್ನ ಪತಿಯನ್ನು ಬೇರೊಬ್ಬ ಮಹಿಳೆ ಹಂಚಿಕೊಳ್ಳುವುದು ಅಥವಾ ಅವನು ಬೇರೆ ಮಹಿಳೆಯನ್ನು ಮದುವೆಯಾಗಲು ಹೊರಟಿರುವುದು ಆಘಾತದ ವಿಚಾರ ಎನಿಸಿರುತ್ತದೆ. ಅಂತಹ ವಿಚಿತ್ರ ಪರಿಸ್ಥಿತಿಯಲ್ಲಿ, ಅವರಿಂದ ಯಾವುದೇ ವಿವೇಕವನ್ನು ನಿರೀಕ್ಷಿಸುವುದು ಅಸಾಧ್ಯ. ಈ ಪ್ರಕರಣದಲ್ಲೂ ಅದೇ ಸಂಭವಿಸಿದೆ.'ಎಂದು ಪೀಠ ಹೇಳಿದೆ. ಈ ವಿಷಯವು ಆತ್ಮಹತ್ಯೆಯಿಂದ ಸಾವನ್ನಪ್ಪಿದ ಮಹಿಳೆಯ ಪತಿ ಸಲ್ಲಿಸಿದ ತ್ವರಿತ ಪರಿಷ್ಕರಣೆ ಮನವಿಗೆ ಸಂಬಂಧಿಸಿದ್ದಾಗಿದೆ.

ಮೃತ ಮಹಿಳೆ ವಾರಣಾಸಿಯ ಮಾಂಡುವಾಡಿಹ್ ಪೊಲೀಸ್ ಠಾಣೆಯಲ್ಲಿ (Manduadih police station in Varanasi )  ತನ್ನ ಪತಿ ಮತ್ತು ಆತನ ಆರು ಕುಟುಂಬ ಸದಸ್ಯರ ವಿರುದ್ಧ ಐಪಿಸಿಯ ಅನೇಕ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸಂಗಾತಿ ಬದುಕಿದ್ದ ಸಮಯದಲ್ಲಿಯೇ ಇನ್ನೊಂದು ಮದುವೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಇನ್ನೂ ಕೆಲ ಆರೋಪಗಳನ್ನು ಪತಿಯ ವಿರುದ್ಧ ಮಾಡಿದ್ದರು.

Allahabad High Court| ಮಕ್ಕಳ ಜೊತೆ ಮುಖ ಮೈಥುನ ಅಷ್ಟು ಗಂಭೀರವಲ್ಲ: ಹೈಕೋರ್ಟ್‌

ನನ್ನ ಪತಿಗೆ ಈಗಾಗಲೇ ಮದುವೆಯಾಗಿದ್ದು 2ನೇ ಮಕ್ಕಳನ್ನೂ ಹೊಂದಿದ್ದಾರೆ. ವಿಚ್ಛೇದನ ನೀಡದೆಯೇ ಅವರು ಮೂರನೇ ಬಾರಿಗೆ ವಿವಾಹವಾಗಿದ್ದಾರೆ ಎಂದು ಎಫ್ಐಆರ್ ನಲ್ಲಿ ಪತ್ನಿ ಬರೆದಿದ್ದಾರೆ. ಸಂತ್ರಸ್ತೆ ತನ್ನ ಪತಿ ಮತ್ತು ಅತ್ತೆಯರಿಂದ ಹಲ್ಲೆ ಮತ್ತು ಮಾನಸಿಕವಾಗಿ ಹಿಂಸಿಸಿದ್ದಾರೆ ಎಂದು ಹೇಳಿದ್ದಾರೆ. ಎಫ್‌ಐಆರ್ ದಾಖಲಿಸಿದ ಕೂಡಲೇ ಮಹಿಳೆ ವಿಷ ಸೇವಿಸಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆರೋಪಿಯು ಮೊದಲು ವಿಚಾರಣಾ ನ್ಯಾಯಾಲಯದಲ್ಲಿ ಡಿಸ್ಚಾರ್ಜ್ ಅರ್ಜಿಯನ್ನು ಸಲ್ಲಿಸಿದರು, ಅದನ್ನು ತಿರಸ್ಕರಿಸಲಾಗಿತ್ತು.

ಆಶಿಶ್ ಮಿಶ್ರಾ ಜಾಮೀನು ರದ್ದುಗೊಳಿಸಿದ ಸುಪ್ರೀಂ, ಒಂದು ವಾರದಲ್ಲಿ ಶರಣಾಗಲು ಆದೇಶ!

ಕೆಲ ತಿಂಗಳ ಹಿಂದೆ, 10 ವರ್ಷದ ಬಾಲಕನೊಬ್ಬನ ಜತೆ ಮುಖಮೈಥುನ (Oral Sex) ನಡೆಸಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬನ ಶಿಕ್ಷೆಯನ್ನು ಅಲಹಾಬಾದ್‌ ಹೈಕೋರ್ಟ್‌ (Allahabad High Court) 7 ವರ್ಷಕ್ಕೆ ಇಳಿಸಿತ್ತು. ಅಷ್ಟುಮಾತ್ರವಲ್ಲ, ‘ಮುಖಮೈಥುನ ಅಷ್ಟು ಗಂಭೀರ ಅಪರಾಧವಲ್ಲ’ ಎಂಬ ಕಾರಣವನ್ನು ತನ್ನ ಈ ಆದೇಶಕ್ಕೆ ಹೈಕೋರ್ಟ್‌ ನೀಡಿದೆ. ನ್ಯಾ| ಅನುಲ್‌ ಕುಮಾರ್‌ ಝಾ ಅವರು ಅಪರಾಧಿ ಸೋನು ಕುಶ್ವಾಹಾ ಎಂಬ ವ್ಯಕ್ತಿಗೆ ನೀಡಿದ್ದ ಶಿಕ್ಷೆಯನ್ನು (Punishment) 10ರಿಂದ 7 ವರ್ಷಕ್ಕೆ ಹಾಗೂ ದಂಡವನ್ನು 5 ಸಾವಿರಕ್ಕೆ ಇಳಿಸಿ ಪ್ರಕಟಿಸಿದ ಈ ಆದೇಶಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

Follow Us:
Download App:
  • android
  • ios