ಆ್ಯಪ್‌ನಲ್ಲಿ ನೋಂದಣಿ ಇಲ್ಲದೆಯೂ ಲಸಿಕೆ| ಮಾ.1ರಿಂದ 2ನೇ ಹಂತದ ಲಸಿಕೆ ಅಭಿಯಾನ ಆರಂಭ
ನವದೆಹಲಿ(ಫೆ.26): ಮಾ.1ರಿಂದ ದೇಶಾದ್ಯಂ ಆರಂಭವಾಗುವ 2ನೇ ಹಂತದ ಕೊರೋನಾ ಲಸಿಕೆ ಅಭಿಯಾನದಡಿ ಲಸಿಕೆ ಪಡೆಯುವವರು ಮಾ.1ರಿಂದಲೇ ಕೋ-ವಿನ್ ಆ್ಯಪ್‌ನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
ಸರ್ಕಾರ ಈ ಆ್ಯಪ್ ಇನ್ನು ಆ್ಯಪ್ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡಿಲ್ಲ. ಅದು ಶೀಘ್ರದಲ್ಲೇ ಲಭ್ಯವಾಗಲಿದ್ದು, 60 ವರ್ಷ ಮೇಲ್ಪಟ್ಟಹಿರಿಯ ನಾಗರಿಕರು ಮತ್ತು ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಗೆ ತುತ್ತಾದ 45 ವರ್ಷ ಮೇಲ್ಪಟ್ಟವರು ಮಾ.1ರಿಂದ ಅಥವಾ ಮಾ.2ರಿಂದ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ಲಸಿಕೆ ನಿರ್ವಹಣೆ ಕುರಿತ ಉನ್ನತಾಧಿಕಾರವುಳ್ಳ ತಂಡದ ಮುಖ್ಯಸ್ಥ ಆರ್.ಎಸ್. ಶರ್ಮಾ ತಿಳಿಸಿದ್ದಾರೆ.
ಇದೇ ವೇಳೆ ನೋಂದಣಿ ಪ್ರಕ್ರಿಯೆ ಚುರುಕುಗೊಳ್ಳುವವರೆಗೆ, ಆ್ಯಪ್‌ನಲ್ಲಿ ಹೆಸರು ದಾಖಲ ಮಾಡದೆಯೂ ಕೆಲ ದಾಖಲೆಗಳೊಂದಿಗೆ ನೇರವಾಗಿ ಆಗಮಿಸಿ ಲಸಿಕೆ ಪಡೆಯುವ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಶರ್ಮಾ ತಿಳಿಸಿದ್ದಾರೆ.
