ಮುಂಬೈ[ಮಾ.10]: ಬ್ಯಾಂಕಿಂಗ್ ಕ್ಷೇತ್ರದ ದಿಗ್ಗಜರೆನಿಸಿಕೊಮಡಿದ್ದ ಯಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಸದ್ಯ ಇಡಿ ಹಾಗೂ ಸಿಬಿಐ ಗಾಳಕ್ಕೆ ಸಿಲುಕಿದ್ದಾರೆ. 2004ರಲ್ಲಿ ಅವರು ಯಸ್ ಬ್ಯಾಂಕ್ ಪ್ರಾರಂಭಿಸಿದ್ದರು. ಕೆಲವೇ ವರ್ಷಗಳಲ್ಲಿ ಬೆಳೆದು ನಿಂತ ಈ ಬ್ಯಾಂಕ್ ಯಶಸ್ಸು ಗಳಿಸಿತ್ತು. ಅದರಲ್ಲೂ ರಾಣಾರವರ ಇಡೀ ಕುಟುಂಬ ಈ ಬ್ಯಾಂಕ್ ಮುನ್ನಡೆಸುವಲ್ಲಿ ಶ್ರಮ ವಹಿಸಿತ್ತು ಎಂಬುವುದು ಮತ್ತಷ್ಟು ವಿಶೇಷ. ರಾಣಾರವರ ಬ್ಯುಸಿನೆಸ್ ಪಾರ್ಟ್ನರ್ ಅಶೋಕ್ ಕಪೂರ್ ಅವರ ಸಂಬಂದಿಯಾಗಿದ್ದರು. ಇನ್ನು ಶಿಕ್ಷಣ ಪೂರೈಸಿದ ಬಳಿಕ ರಾಣಾರವರ ಮೂವರು ಹೆಣ್ಮಕ್ಕಳು ತಮ್ಮ ಬ್ಯುಸಿನೆಸ್ ಆರಂಭಿಸುವುದಕ್ಕೂ ಮುನ್ನ ಬ್ಯಾಂಕ್ ನಲ್ಲಿ ತಂದೆಯ ಸಹಾಯಕ್ಕೆ ಮುಂದಾಘಿದ್ದರು. ಆದರೀಗ ಆ ಮೂವರವರು ಮಕ್ಕಳ ವಿರುದ್ಧವೂ FIR ದಾಖಲಾಗಿದೆ. ಿಲ್ಲಿದೆ ಮೂವರು ಮಕ್ಕಳ ವಿವರ

ರಾಖೀ ಕಪೂರ್

ರಾಖೀ ಕಪೂರ್ ಟಂಡನ್ ಎಲ್ಲರಿಗಿಂತ ಮುನ್ನ ಅಂದರೆ 2015ರ IPLನಲ್ಲಿ ಇವರು ಸದ್ದು ಮಾಡಿದ್ದರು. ಮುಂಬೈ ಇಂಡಿಯನ್ಸ್ ಹಾಗೂ ವಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಬಳಿಕ ರಾಖಿ ಆಟಗಾರರಿಗೆ ಯಸ್ ಬ್ಯಾಂಕ್ ಮ್ಯಾಕ್ಸಿಮಮ್ ಸಿಕ್ಸಸ್ ಅವಾರ್ಡ್ ನೀಡಿದ್ದರು. ಮೊದಲ ಬಾರಿ ಅವರು ಮಾಧ್ಯಮದೆದುರು ಬಂದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲೂ ವೈರಲ್ ಆಗಿದ್ದರು. ರಾಖೀ ಯೂನಿವರ್ಸಿಟಿ ಆಫ್ ಪೆನ್ಸಿಲ್ವೇನಿಯಾದಿಂದ MBA ಪೂರೈಸಿದ್ದಾರೆ. 

2012ರಲ್ಲಿ ರಾಖಿ ಮದುವೆ ದುಬೈ ಉದ್ಯಮಿ ಅಲ್ಕೇಶ್ ಟಂಡನ್ ಜೊತೆ ಆಯ್ತು. ಅಲ್ಕೇಶ್ ದೆಹಲಿ ನಿವಾಸಿಗರಾಗಿದ್ದು, ಇಂಟರ್ ನ್ಯಾಷನಲ್ ಬೂಟಿಕ್ ಉದ್ಯಮ ಹೊಂದಿದ್ದಾರೆ. 

ರಾಧಾ ಕಪೂರ್

ರಾಧಾ ಕಪೂರ್ ಮದುವೆ 2017ರಲ್ಲಿ ದೆಹಲಿಯ ಉದ್ಯಮಿ ರವಿ ಖನ್ನಾ ಮಗ ಆದಿತ್ಯ ಖನ್ನಾ ಜೊತೆ ಆಯ್ತು. ಆದಿತ್ಯ ಹೆಜ್ ಫಂಡ್ ಮ್ಯಾನೇಜರ್ ಆಗಿದ್ದಾರೆ. ಇವರಿಬ್ಬರ ಮದುವೆ ಮುಂಬೈನಲ್ಲಿ ನಡೆದಿತ್ತು. ಈ ಮದುವೆಗೆ ಬಾಲಿವುಡ್ ಗಣ್ಯರೂ ಆಗಮಿಸಿದ್ದರು. ಆದಿತ್ಯ ಹಾಗೂ ರಾಧಾ ಭೇಟಿ 2007ರಲ್ಲಿ ನ್ಯೂಯಾರ್ಕ್ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾಗ ನಡೆದಿತ್ತು. ರಾಖೀ ಇಂಡಿಯನ್ ಸ್ಕೂಲ್ ಆಫ್ ಡಿಸೈನ್ ಆ್ಯಂಡ್ ಇನ್ನೋವೇಷನ್ ಹೆಸರಿನ ಒಂದು ಸ್ಟಾರ್ಟಪ್ ಕೂಡಾ ಆರಂಭಿಸಿದ್ದರು. ಇನ್ನು ಆದಿತ್ಯ 2015 ಉದ್ಯೋಗ ಮಾಡಿ ಅಮೆರಿಕಾದಿಂದ ಭಾರತಕ್ಕೆ ಮರಳಿದ್ದರು.

ಇವರ ಇನ್ನೊಬ್ಬ ಮಗಳು ರೋಶನಿ ಕಪೂರ್;.