ರಾಜಸ್ಥಾನ(ಮೇ.01): ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ಮದ್ಯ ಮಾರಾಟ ಸ್ಥಗಿತಗೊಂಡಿದೆ. ರಾಜ್ಯದ ಆರ್ಥಿಕತೆ ಕುಸಿತ ಕಂಡರೂ ಮದ್ಯ ಮಾರಾಟಕ್ಕೆ ಅವಕಾಶ ನೀಡುವ ಕುರಿತು ಯಾವ ಸರ್ಕಾರವೂ ಚಿಂತಿಸುತ್ತಿಲ್ಲ. ಇದರ ನಡವೆ ರಾಜಸ್ಥಾನ ಶಾಸಕ ಭರತ್ ಸಿಂಗ್ ಹೊಸ ವರದಿಯೊಂದಿಗೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‌ಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾನೆ.

ಪಾರ್ಸೆಲ್ ಮೂಲಕ ಎಣ್ಣೆ ಮಾರಾಟ, ದಿನಕ್ಕೆ 5 ಗಂಟೆ ಮಾತ್ರ?

ಆಲ್ಕೋಹಾಲ್(ಮದ್ಯ)ದಿಂದ ತಯಾರಿಸುವ ಸ್ಯಾನಿಟೈಸರ್ ಕೊರೋನಾ ವೈರಸ್ ಕೊಲ್ಲುವ ಶಕ್ತಿ ಇದ್ದರೆ, ಮದ್ಯದಿಂದ ಗಂಟಲಿನಲ್ಲಿ ಸೇರಿಕೊಳ್ಳುವ ವೈರಸ್ ಸಾಯಲಿದೆ. ಇಷ್ಟೇ ಅಲ್ಲ ರಾಜ್ಯದಲ್ಲಿನ ಆರ್ಥಿಕ ಚೇತರಿಕೆಗೆ ಮದ್ಯ ಮಾರಾಟ ನೆರವು ನೀಡಲಿದೆ. ಹೀಗಾಗಿ ಮದ್ಯ ಮಾರಾಟಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವಕಾಶ ನೀಡಬೇಕು ಎಂದು ಶಾಸಕ ಭರತ್ ಸಿಂಗ್ ಹೊಸ ವರದಿ ಸಲ್ಲಿಸಿದ್ದಾರೆ .

ಮದ್ಯ ಮಾರಾಟ:  ಸಚಿವ ಸಂಪುಟ ಸಭೆ ತೀರ್ಮಾನ ಹೇಳಿದ ಅಶೋಕ್

ಲಾಕ್‌ಡೌನ್ ಕಾರಣ ರಾಜ್ಯದ ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ವೈರಸ್ ತೆರವಾದ ಬಳಿಕ, ಸುಂಕ ಹೆಚ್ಚಳ,  ಜನರ ಮೇಲೆ ತೆರಿಗೆ ಹೆಚ್ಚಳ ಸೇರಿದಂತೆ ಹಲವು ರೀತಿಯಲ್ಲಿ ಸಾಮಾನ್ಯರಿಗೆ ಆರ್ಥಿಕ ಹೊರೆ ಹೇರುವುದಕ್ಕಿಂತ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡುವುದು ಉತ್ತಮ. ಇದರಿಂದ ಒಂದು ಹಂತದ ವೈರಸ್ ಕೂಡ ಸಾಯಲಿದೆ ಎಂದು ಭರತ್ ಸಿಂಗ್ ಹೇಳಿದ್ದಾರೆ. ಇತ್ತ ಭರತ್ ಸಿಂಗ್ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಭರತ್ ಸಿಂಗ್ ಹೇಳಿಕೆಯನ್ನು ಬೆಂಬಲಿಸಿದ್ದಾರೆ. 

ರಾಜಸ್ಥಾನದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಮೇ.1ರ ಬೆಳಗ್ಗೆ 146 ಹೊಸ ಕೊರೋನಾ ಕೇಸ್ ಪತ್ತೆಯಾಗಿದೆ. ರಾಜಸ್ಥಾನದಲ್ಲಿ ಇದುವರೆಗೆ 2,584 ಕೊರೋನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 836 ಮಂದಿ ಗುಣಮುಖರಾಗಿದ್ದರೆ, 56 ಮಂದಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ.