ಮುಂಬೈ[ನ.28]: ಮಹಾರಾಷ್ಟ್ರ ರಾಜಕೀಯದಲ್ಲಾದ ಬೆಳವಣಿಗೆಗಳು ಎಲ್ಲರನ್ನೂ ಅಚ್ಚರಿಗೀಡು ಮಾಡಿದೆ. ರಾತ್ರೋ ರಾತ್ರಿ ಬಿಜೆಪಿ ಜೊತೆ ಕೈಜೋಡಿಸಿದ್ದ ಅಜಿತ್ ಪವಾರ್ ಬುಧವಾರ ನಡೆಯಲಿದ್ದ ವಿಸೇಷ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಆದರೆ ಅದಕ್ಕೂ ಮುನ್ನ ಮತ್ತೊಂದು ಬೆಳವಣಿಗೆ ನಡೆದಿದ್ದು, ಬಿಜೆಪಿ ಜೊತೆ ಸೇರಿದ್ದ ಅಜಿತ್ ಪವಾರ್ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮರಳಿ ಗೂಡು ಸೇರಿದ್ದರು. ಹೀಗಿರುವಾಗ ಸಹೋದರನನ್ನು NCP ನಾಯಕಿ ಸುಪ್ರಿಯಾ ಸುಳೆ ಪ್ರೀತಿಯಿಂದ ಆಲಂಗಿಸಿಕೊಂಡಿದ್ದರು. ಆದರೆ ಈ ವೇಳೆ ನಡೆದ ಚಿಕ್ಕ ಘಟನೆಯೊಂದರ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ತಂದೆಯಂತೆ ಮಗಳು, ಈಗ 'ಮಹಾ' ರಾಜಕೀಯದಲ್ಲಿ ಸುಪ್ರಿಯಳದ್ದೇ ಸುದ್ದಿ!

ಹೌದು ಸಹೋದರ ಅಜಿತ್ ಪವಾರ್ ರನ್ನು ಆಲಂಗಿಸಿಕೊಂಡಿದ್ದ ಸುಪ್ರಿಯಾ ಸುಳೆ ಮರುಕ್ಷಣವೇ ಕೆಳಗೆ ಬಗ್ಗುತ್ತಾರೆ. ಸುಪ್ರಿಯಾ ಸಹೋದರನ ಕಾಲಿಗೆರಗಿ ಆಶೀರ್ವಾದ ಪಡೆಯುತ್ತಿದ್ದಾರೆಂದು ಎಲ್ಲರೂ ಭಾವಿಸುತ್ತಾರೆ. ಆದರೆ ನಡೆದದ್ದು ಮಾತ್ರ ಬೇರೆಯೇ, ಈ ಘಟನೆ ನಡೆದಾಗ ಇವರಿಬ್ಬರ ಹಿಂಬದಿಯಲ್ಲಿ ನಿಂತಿದ್ದ ಪತ್ರಕರ್ತ ಒದ್ದಾಟ ಮಾತ್ರ ಯಾರ ಗಮನಕ್ಕೂ ಬಂದಿರಲಿಲ್ಲ.

ವಾಸ್ತವವಾಗಿ ಸಜಿತ್ ಪವಾರ್ ಬರುತ್ತಿದ್ದಂತೆಯೇ ಪತ್ರಕರ್ತನೊಬ್ಬ ಮೈಕ್ ಹಿಡಿದು ಅವರನ್ನು ಮಾತನಾಡಿಸಲು ಯತ್ನಿಸಿದ್ದ. ಆದರೆ ಅಷ್ಟರಲ್ಲಾಗಲೇ ಸುಪ್ರಿಯಾ ಸುಳೆ ಅವರನ್ನು ಆಲಂಗಿಸಿಕೊಂಡಿದ್ದರು. ಈ ವೇಳೆ ಹಿಂಬದಿಯಲ್ಲಿದ್ದ ಪತ್ರಕರ್ತನ ಕೈ ಮೈಕ್ ಸಮೇತ ಇವರಿಬ್ಬರ ನಡುವೆ ಸಿಲುಕಿತ್ತು. ಆತ ತನ್ನ ಕೈ ತೆಗೆಯಲು ಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಮೈಕ್ ಬಿಡುವುದು ಅನಿವಾರ್ಯವಾಗಿತ್ತು.

ಕ್ಷಮಿಸಿದ್ದೀನಿ ಬಾರಯ್ಯ: ಅಜಿತ್ ಬಾಂಧವ್ಯ ಏಕತೆ ಮೆರೆದ ಸುಪ್ರಿಯಾ!

ಬೇರೆ ದಾರಿ ಕಾಣದ ಪತ್ರಕರ್ತ ಮೈಕ್ ಬಿಟ್ಟು ಕೈ ತೆಗೆದಿದ್ದಾನೆ. ಹೀಗಿರುವಾಗ ಇದ್ದಕ್ಕಿದ್ದಂತೆ ಕೆಳ ಬಿದ್ದ ಮೈಕ್ ಎತ್ತಲು ಸುಪ್ರಿಯಾ ಸುಳೆ ಬಾಗಿದ್ದು, ಎಲ್ಲರೂ ಸಹೋದರ ಅಜಿತ್ ಪವಾರ್ ಆಶೀರ್ವಾದ ಪಡೆಯಲು ಬಾಗಿರಬಹುದು ಎಂದು ಭಾವಿಸಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಪತ್ರಕರ್ತನ ಒದ್ದಾಟ ಎಲ್ಲರ ಗಮನಕ್ಕೂ ಬಂದಿದೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು