ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್‌ ದೋವಲ್‌ ಮುಂದುವರಿಕೆ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮಾಜಿ ಐಪಿಎಸ್ ಅಧಿಕಾರಿ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (ಎನ್ಎಸ್ಎ) ಮತ್ತು ಮಾಜಿ ಐಎಎಸ್ ಅಧಿಕಾರಿ ಡಾ.ಪಿ.ಕೆ.ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಮರುನೇಮಕಗೊಳಿಸಿದೆ.
 

Ajit Doval reappointed continue as National Security Adviser san

ನವದೆಹಲಿ (ಜೂ.13): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗುರುವಾರ ಮಾಜಿ ಐಪಿಎಸ್ ಅಧಿಕಾರಿ ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ (ಎನ್‌ಎಸ್‌ಎ) ಮತ್ತು ಮಾಜಿ ಐಎಎಸ್ ಅಧಿಕಾರಿ ಡಾ.ಪಿ.ಕೆ.ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ಮರು ನೇಮಕ ಮಾಡಿದೆ. ಇಬ್ಬರೂ ಅಧಿಕಾರಿಗಳ ನೇಮಕಾತಿಯು ಪ್ರಧಾನಿ ಮೋದಿಯವರ ಅವಧಿಯೊಂದಿಗೆ ಅಥವಾ ಮುಂದಿನ ಆದೇಶದವರೆಗೆ ಸಹ-ಟರ್ಮಿನಸ್ ಆಗಿರುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ. "10.06.2024 ರಿಂದ ಜಾರಿಗೆ ಬರುವಂತೆ ಅಜಿತ್ ದೋವಲ್, IPS (ನಿವೃತ್ತ) ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ನೇಮಿಸಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ" ಎಂದು ಸಿಬ್ಬಂದಿ ಸಚಿವಾಲಯ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

"ಜೂನ್‌ 10 ರಿಂದ ಜಾರಿಗೆ ಬರುವಂತೆ ಡಾ.ಪಿ.ಕೆ. ಮಿಶ್ರಾ, ಐಎಎಸ್ (ನಿವೃತ್ತ) ಅವರನ್ನು ಪ್ರಧಾನಮಂತ್ರಿಗಳ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿಯು ಅನುಮೋದನೆ ನೀಡಿದೆ. ಅವರ ನೇಮಕಾತಿಯು ಪ್ರಧಾನ ಮಂತ್ರಿಯ ಅವಧಿಯೊಂದಿಗೆ ಅಥವಾ ಮುಂದಿನವರೆಗೆ ಸಹ-ಟರ್ಮಿನಸ್ ಆಗಿರುತ್ತದೆ' ಎಂದು ಇನ್ನೊಂದು ಆದೇಶದಲ್ಲಿ ತಿಳಿಸಲಾಗಿದೆ. 1968ರ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ದೋವಲ್‌ ಅವರು ಮೊದಲು ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ 2014ರ ಮೇ 31ರಂದು ನೇಮಕಗೊಂಡಿದ್ದರು.

ಎನ್‌ಎಸ್‌ಎಯಾಗಿ, ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಮಂಡಳಿಯ (ಎನ್‌ಎಸ್‌ಸಿ) ಮುಖ್ಯಸ್ಥರಾಗಿರುತ್ತಾರೆ, ಅವರ ಪ್ರಾಥಮಿಕ ಪಾತ್ರವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಪ್ರಧಾನಿಗೆ ಸಲಹೆ ನೀಡುವುದಾಗಿರುತ್ತದೆ. ಅವರ ಕಛೇರಿಯ ಅವಧಿಯಲ್ಲಿ, ದೋವಲ್ ಅವರಿಗೆ ಕ್ಯಾಬಿನೆಟ್ ಸಚಿವ ಶ್ರೇಣಿಯನ್ನು ನಿಯೋಜಿಸಲಾಗುವುದು ಮತ್ತು ಅವರ ನೇಮಕಾತಿಯ ನಿಯಮಗಳು ಮತ್ತು ಷರತ್ತುಗಳನ್ನು ಪ್ರತ್ಯೇಕವಾಗಿ ಸೂಚಿಸಲಾಗುತ್ತದೆ.

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ, ಸೇನಾಪಡೆಗಳ ಪೂರ್ಣ ನಿಯೋಜನೆಗೆ ಮೋದಿ ಸೂಚನೆ!

ಉತ್ತರಾಖಂಡದ ಪೌರಿ ಗರ್ವಾಲ್‌ನಲ್ಲಿ 1945 ಜನವರಿ 20 ರಂದು ಜನಿಸಿದ ದೋವಲ್ ಅವರು 1968 ರಲ್ಲಿ ಭಾರತೀಯ ಪೊಲೀಸ್ ಸೇವೆಗೆ (IPS) ಸೇರಿದರು ಮತ್ತು ಅವರ ವಿಶಿಷ್ಟ ಸೇವೆಗಳಿಗಾಗಿ 1988 ರಲ್ಲಿ ಕೀರ್ತಿ ಚಕ್ರವನ್ನು ಪಡೆದರು. ಜೊತೆಗೆ, ದೋವಲ್ ಭಾರತೀಯ ಪೊಲೀಸ್ ಪದಕವನ್ನು ಪಡೆದ ಅತ್ಯಂತ ಕಿರಿಯ ಅಧಿಕಾರಿ ಎನಿಸಿದ್ದಾರೆ. 1998 ರಲ್ಲಿ ದೇಶದಲ್ಲಿ ಎರಡನೇ ಬಾರಿಗೆ ಪರಮಾಣು ಪರೀಕ್ಷೆಗಳನ್ನು ನಡೆಸಿದಾಗ NSA ಹುದ್ದೆಯನ್ನು ಮೊದಲ ಬಾರಿಗೆ ರಚಿಸಲಾಯಿತು.

ಮೋದಿ ಭೇಟಿಗೂ ಮುನ್ನ ಇಟಲಿಯಲ್ಲಿ ಖಲಿಸ್ತಾನಿ ಉಗ್ರ ಸಂಘಟನೆ ಅಟ್ಟಹಾಸ, ಗಾಂಧಿ ಪ್ರತಿಮೆ ಧ್ವಂಸ!

Latest Videos
Follow Us:
Download App:
  • android
  • ios