Asianet Suvarna News Asianet Suvarna News

ತಪಾಸಣೆ ಮಾಡಿದ್ರೂ 2 ವಿಮಾನ ಪ್ರಯಾಣಿಕರಲ್ಲಿ ಕೊರೋನಾ‌ ಪತ್ತೆ!

ತಪಾಸಣೆ ಹೊರತಾಗಿಯೂ 2 ವಿಮಾನ ಪ್ರಯಾಣಿಕರಲ್ಲಿ ಕೊರೋನಾ ವೈರಸ್‌ ಪತ್ತೆ| ವಿಮಾನದಲ್ಲಿದ್ದ ಅಲಯನ್ಸ್‌ ಏರ್‌ನ ಸಿಬ್ಬಂದಿಯೊಬ್ಬರಲ್ಲಿ ವಿಮಾನ ಇಳಿವ ವೇಳೆ ಸೋಂಕು

Airline Employee Who Took Delhi Ludhiana Flight Tests Coronavirus Positive
Author
Bangalore, First Published May 27, 2020, 10:38 AM IST
  • Facebook
  • Twitter
  • Whatsapp

ನವದೆಹಲಿ(ಮೇ.27): ದೇಶೀಯ ವಿಮಾನ ಪ್ರಯಾಣಿಕರಿಗೆ ವಿಮಾನ ಹತ್ತುವ ಮುನ್ನ ನಾನಾ ಪರೀಕ್ಷೆಗಳನ್ನು ನಡೆಸಿದ ಹೊರತಾಗಿಯೂ, ಮಂಗಳವಾರ ಪ್ರಯಾಣ ಕೈಗೊಂಡ ಇಬ್ಬರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.

ದೆಹಲಿಯಿಂದ ಲೂಧಿಯಾನಕ್ಕೆ ಸಂಚಾರ ಕೈಗೊಂಡಿದ್ದ ಏರ್‌ಇಂಡಿಯಾ ವಿಮಾನದಲ್ಲಿದ್ದ ಅಲಯನ್ಸ್‌ ಏರ್‌ನ ಸಿಬ್ಬಂದಿಯೊಬ್ಬರಲ್ಲಿ ವಿಮಾನ ಇಳಿವ ವೇಳೆ ಸೋಂಕು ಪತ್ತೆಯಾಗಿದೆ.

ವಿಮಾನ ಹಾರಿದ್ದಕ್ಕಿಂತ ರದ್ದಾಗಿದ್ದೇ ಹೆಚ್ಚು: 1050ರ ಪೈಕಿ 630 ಸಂಚಾರ ರದ್ದು!

ಇನ್ನು ಚೆನ್ನೈನಿಂದ ಕೊಯಮತ್ತೂರಿಗೆ ಪ್ರಯಾಣಿಸಿದ್ದ ವಿಮಾನದಲ್ಲಿದ್ದ 24 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ದೇಶೀಯ ವಿಮಾನದಲ್ಲಿ ಸೋಂಕು ಪತ್ತೆಯಾದ ಮೊದಲ ಪ್ರಕರಣಗಳು ಇವು. ಹೀಗಾಗಿ ಹೊಸ ಆತಂಕ ಎದುರಾಗಿದೆ.

Follow Us:
Download App:
  • android
  • ios