ನವದೆಹಲಿ(ಡಿ.23): ಕಳೆದ ವರ್ಷ ವಾಯು ಮಾಲಿನ್ಯದಿಂದ ಉಂಟಾದ ಆರೋಗ್ಯ ಸಮಸ್ಯೆ ಹಾಗೂ ಸಾವಿನಿಂದಾಗಿ ದೇಶದ ಆರ್ಥಿಕತೆಗೆ 2.60 ಲಕ್ಷ ಕೋಟಿ ರು.ನಷ್ಟುಅಥವಾ ಜಿಡಿಪಿಯ ಶೇ.1.4ರಷ್ಟುನಷ್ಟಉಂಟಾಗಿದೆ ಎಂದು ಅಧ್ಯಯನವೊಂದು ತಿಳಿಸಿದೆ.

ವಾಯು ಮಾಲಿನ್ಯದಿಂದ ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಉಂಟಾದ ಪರಿಣಾಮದ ಕುರಿತು ಮಂಡಿಸಲಾದ ವೈಜ್ಞಾನಿಕ ವರದಿಯ ಪ್ರಕಾರ, 2019ರಲ್ಲಿ ದೇಶದಲ್ಲಿ ಸಂಭವಿಸಿದ ಸಾವಿನ ಪೈಕಿ ವಾಯು ಮಾಲಿನ್ಯದಿಂದಲೇ ಶೇ.18ರಷ್ಟುಅಂದರೆ 17 ಲಕ್ಷ ಮಂದಿ ಬಲಿ ಆಗಿದ್ದಾರೆ.

ವಾಯು ಮಾಲಿನ್ಯ ಸಂಬಂಧಿತ ಆರೋಗ್ಯ ಸಮಸ್ಯೆ ಹಾಗೂ ಜನರ ಸಾವು ಉತ್ಪಾದನೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದ್ದು, ಜಿಡಿಪಿಯ ಶೇ.1.4ರಷ್ಟುನಷ್ಟವಾಗಿದೆ. ಒಂದು ವೇಳೆ ಭಾರತದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸಿದರೆ ಭಾರತಲ್ಲಿ ಉತ್ತಮ ಆರ್ಥಿಕ ಪ್ರಗತಿ ಹಾಗೂ ಅಭಿವೃದ್ಧಿಯನ್ನು ನಿರೀಕ್ಷಿಸಬಹುದಾಗಿದೆ ಎಂದು ವರದಿ ತಿಳಿಸಿದೆ.