ಏರ್ ಇಂಡಿಯಾ ವಿಮಾನ ದುರಂತದ ಒಂದೊಂದು ಕಣ್ಣೀರ ಕತೆಗಳು ಘನಘೋರವಾಗಿದೆ. ಇದೀಗ ಅಹಮ್ಮದಾಬಾದ್ ಆಸ್ಪತ್ರೆ ಶವಾಗಾರದ ಬ್ಯಾಗ್‌ನಲ್ಲಿ ಮಡಿದವರ 2 ತಲೆ ಇದೆ. ಇದರ ಜೊತೆ ದೇಹಹ ಇತರ ಭಾಗವನ್ನೂ ನೀಡಲು ಕುಟುಂಬಸ್ಥರು ಕಣ್ಮೀರಿಡುತ್ತಿದ್ದಾರೆ. 

ಅಹಮ್ಮದಾಬಾದ್(ಜೂ.15) ಏರ್ ಇಂಡಿಯಾ ವಿಮಾನ ದುರಂತದಲ್ಲಿ ವಿಮಾನದಲ್ಲಿ 241 ಮಂದಿ ಮೃತಪಟ್ಟರೆ, ಒಬ್ಬ ಪ್ರಯಾಣಿಕ ಬದುಕುಳಿದಿದ್ದಾನೆ. ಇತ್ತ ವಿಮಾನ ಮೆಡಿಕಲ್ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡ ಕಾರಣ 56 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮೃತಪಟ್ಟವರ ದೇಹದ ಗುರುತು ಪತ್ತೆಯಾಗುತ್ತಿಲ್ಲ. ಹಲವು ದೇಹಗಳು ಸುಟ್ಟು ಕರಕಲಾಗಿದೆ. ಇದೀಗ ಮಡಿದ ಕುಟುಂಬಸ್ಥರ ಕಣ್ಣೀರಿಗೆ ಯಾವ ಸಾಂತ್ವನಗಳು ಸಾಲುತ್ತಿಲ್ಲ. ಇದೀಗ ಅಹಮ್ಮದಾಬಾದ್ ಸಿವಿಲ್ ಆಸ್ಪತ್ರೆ ದೃಶ್ಯಗಳ ಮನಕಲುಕುವಂತಿದೆ. ಒಂದಡೆ ಆಪ್ತರನ್ನು ಕಳದುಕೊಂಡ ಕುಟುಂಬಸ್ಥರು ಎಲ್ಲಾ ಮೃತದೇಹಗಳ ಬ್ಯಾಗ್ ತೆರೆದು ತಮ್ಮವರಿಗಾಗಿ ಹುಡುಕುತ್ತಿದ್ದಾರೆ. ಈ ಪೈಕಿ ಒಂದೆಡೆ ಕುಟುಂಬ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರು ಇದೇ ಆಸ್ಪತ್ರೆ ಆಗಮಿಸಿ ಹುಡುಕಾಡುತ್ತಿದ್ದಾರೆ. ಈ ವೇಳೆ ಒಂದು ಬ್ಯಾಗ್‌ನಲ್ಲಿ ಕೇವಲ 2 ತಲೆ ಭಾಗ ಮಾತ್ರವಿದೆ. ಇನ್ನುಳಿದ ದೇಹದ ಭಾಗ ಲಭ್ಯವಿಲ್ಲ. ಈ ಪೈಕಿ ಒಂದು ತಲೆ ತಮ್ಮ ಆಪ್ತರದ್ದಾಗಿರುವ ಸಾಧ್ಯತೆ ಇದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಇದೇ ವೇಳೆ ದೇಹದ ಇತರ ಭಾಗವನ್ನು ನೀಡುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮಕಲುಕುತ್ತಿದೆ.

ಅಂತ್ಯಕ್ರೀಯೆಗೆ ದೇಹದ ಇತರ ಬಾಗ ನೀಡುವಂತೆ ಕಣ್ಣೀರು

ಆಸ್ಪತ್ರೆಯಲ್ಲಿರುವ ಒಂದೊಂದು ಕುಟುಂಬದ ನೋವು, ಯಾತನೆ, ಕಣ್ಣೀರು ನೋಡಲು ಸಾಧ್ಯವಾಗುತ್ತಿಲ್ಲ. ಆಸ್ಪತ್ರೆ ಸಿಬ್ಬಂದಿಗಳ ಜೊತೆ ತೆರಳಿ ಶವಗಾರದಲ್ಲಿರುವ ಪ್ರತಿಯೊಂದು ಮೃತದೇಹದ ಭಾಗಗಳನ್ನು ಪರಿಶೀಲಿಸುತ್ತಿದ್ದಾರೆ. ಆದರೆ ತಮ್ಮವರು ಯಾರು ಅನ್ನೋದೇ ಗೊತ್ತಾದ ಪರಿಸ್ಥಿತಿ. ಈ ಪೈಕಿ ಬ್ಯಾಗ್‌ನಲ್ಲಿರುವು ಎರಡು ತಲೆ ಮಾತ್ರವಿದೆ. ಇದು ಕಳೆದುಕೊಂಡ ತಮ್ಮ ಆಪ್ತರದ್ದಾಗಿರುವ ಸಾಧ್ಯತೆ ಇದೆ ಎಂದಿದ್ದಾರೆ. ಆದರೆ ಈ ಕುಟುಂಬಸ್ಥರು ದೇಹದ ಇತರ ಭಾಗ ನೀಡುವಂತೆ ಆಸ್ಪತ್ರೆ ವೈದ್ಯರ ಬಳಿ ಕಣ್ಮೀರಿಡುತ್ತಿದ್ದಾರೆ. ಅಂತ್ಯಕ್ರಿಯೆಗೆ ದೇಹದ ಇತರ ಭಾಗ ನೀಡುವಂತೆ ಕಣ್ಣೀರಿಡುತ್ತಿದ್ದಾರೆ.

ಕುಟುಂಬಸ್ಥರನ್ನು ಸಂತೈಸಲು ಅಧಿಕಾರಿಗಳ ಹರಸಾಹಸ

ಬಹುತೇಕ ಕುಟುಂಬಸ್ಥರು ದೇಹದ ಭಾಗಗಳನ್ನು ಕೇಳುತ್ತಿದ್ದಾರೆ. ಅವರ ಕಣ್ಣೀರು ನೋಡಲು ಸಾಧ್ಯವಾಗುತ್ತಿಲ್ಲ. ಆದರೆ ಅವರನ್ನು ಸಮಾಧಾನ ಪಡಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ಕುಟುಂಬಸ್ಥರಿಗೂ ಕೆಲ ಸೂಚನೆ ನೀಡಲಾಗಿದೆ. ದೇಹದ ಸಂಪೂರ್ಣ ಬಿಡಿ ಭಾಗ ನೀಡಲು ಸಾಧ್ಯವಾಗುತ್ತಿಲ್ಲ. ಕುಟುಂಬಸ್ಥರು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಡಿಎನ್ಎ ಪರೀಕ್ಷೆಗೆ 72 ಗಂಟೆ

ಪ್ರತಿ ಮೃತದೇಹದ ಡಿಎನ್ಎ ಪರೀಕ್ಷೆ ನಡಸಲಾಗುತ್ತದೆ. ಬಳಿಕ ಕುಟುಂಬಸ್ಥರ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಸದ್ಯ ಮೃತದೇಹದ ಡಿಎನ್ಎ ಪರೀಕ್ಷೆ ಮುಗಿದಿದೆ. ಇದೀಗ ಕುಟುಂಬಸ್ಥರ ಡಿಎನ್ಎ ಪರೀಕ್ಷೆ ಮಾಡಲಾಗುತ್ತದೆ. ಡಿಎನ್ಎ ಮ್ಯಾಚ್ ಆದರೆ ಸಮಸ್ಯೆ ಇಲ್ಲ. ಆದರೆ ಡಿಎನ್‌ಎ ಪರೀಕ್ಷೆಗೆ ಕನಿಷ್ಠ 72ಗಂಟೆ ಸಮಯಬೇಕಿದೆ.