ನವದೆಹಲಿ(ಜು.27): ವೈದ್ಯಕೀಯ ಲೋಕಕ್ಕೆ ಹಲವು ಸವಾಲು ಒಡ್ಡಿದ  ಪ್ರಕರಣವನ್ನು ದೆಹಲಿಯ ಏಮ್ಸ್ ವೈದ್ಯರ ತಂಡ ಯಶಸ್ವಿಯಾಗಿ ನಿರ್ವಹಿಸಿದೆ. ಯುವಕನ ಲಿವರ್‌ನಲ್ಲಿ ಸಿಲುಕಿದ್ದ 20 ಸೆಂಟಿಮೀಟರ್ ಚಾಕುವನ್ನ ವೈದ್ಯರ ತಂಡ ಸರ್ಜರಿ ಮೂಲಕ ಹೊರತೆಗೆದಿದೆ. ಸದ್ಯ ಯುವಕ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.

ರೋಗಿಯ ಶಸ್ತ್ರ ಚಿಕಿತ್ಸೆಗೆ ರಕ್ತ ನೀಡಿದ AIIMS ಜೂನಿಯರ್ ಡಾಕ್ಟರ್..!

28 ವರ್ಷದ ಯುವಕ, ಒಂದೂವರೆ ತಿಂಗಳ ಹಿಂದೆ 20 ಸೆಂಟಿಮೀಟರ್ ಚಾಕುವನ್ನು ಅಚಾನಕ್ಕಾಗಿ ನುಂಗಿದ್ದ. ಬಳಿಕ ಈತ ಎಂದಿನಂತ ತನ್ನ ಕೆಲಸ ಕಾರ್ಯಗಳಲ್ಲಿ ತೊಡಗಿಗೊಂಡಿದ್ದ. ಇತ್ತೀಚೆಗೆ ಹೊಟ್ಟೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡ ಕಾರಣ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಸ್ಕಾನಿಂಗ್ ಮಾಡಿಡ ವೈದ್ಯರಿಗೆ ಆಶ್ಚರ್ಯ ಕಾದಿತ್ತು. 

ಈತನ ಲಿವರ್‌ನಲ್ಲಿ ಒಂದೂವರೆ ತಿಂಗಳ ಹಿಂದೆ ನುಂಗಿದ್ದ ಚಾಕು ಸಿಲುಕಿಕೊಂಡಿತ್ತು. ತಕ್ಷಣವೇ ಸರ್ಜರಿ ಆಗತ್ಯವಿದೆ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸತತ 3 ಗಂಟೆಗಳ ಸರ್ಜರಿ ಬಳಿಕ ಏಮ್ಸ್ ವೈದ್ಯರ ತಂಡ ಯಶಸ್ವಿಯಾಗಿ ಸರ್ಜರಿ ನಡೆಸಿದೆ. ಚಾಕು ಹೊರತೆಗೆದು ಈತನ ಲಿವರ್‌ಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

ಡ್ರಗ್ಸ್ ವ್ಯಸನಿಯಾಗಿದ್ದ ಹರ್ಯಾಣ ಮೂಲದ ಈ ಯುವಕ ಅವಾಂತರ ಮಾಡಿಕೊಂಡಿದ್ದ. ಎಕ್ಸ್ ರೇ ನೋಡಿದಾಗ ನಮಗೆ ಅಚ್ಚರಿಯಾಗಿತ್ತು. ಬಳಿಕ ವೈದ್ಯರ ತಂಡ ರಚಿಸಿ ಸರ್ಜರಿ ಮಾಡಿದ್ದೇವೆ ಎಂದು ಏಮ್ಸ್ ಸರ್ಜರನ್ ಎನ್ ಆರ್ ದಾಸ್ ಹೇಳಿದ್ದಾರೆ.