ಕರ್ನಾಟಕದ ಅತ್ಯಂತ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಅಪರೂಪದ ವಾಗ್ಬಾಣ ವಿನಿಮಯಕ್ಕೆ ರಾಜ್ಯಸಭೆಯ ಕಲಾಪ ಗುರುವಾರ ಸಾಕ್ಷಿಯಾಯಿತು.
ನವದೆಹಲಿ (ಫೆ.09): ಕರ್ನಾಟಕದ ಅತ್ಯಂತ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಅಪರೂಪದ ವಾಗ್ಬಾಣ ವಿನಿಮಯಕ್ಕೆ ರಾಜ್ಯಸಭೆಯ ಕಲಾಪ ಗುರುವಾರ ಸಾಕ್ಷಿಯಾಯಿತು. ದೇವೇಗೌಡರ ರಾಜಕೀಯ ದಾರಿಯೇ ಬದಲಾಗಿದೆ ಎಂಬ ಖರ್ಗೆ ಅವರ ಹಾಸ್ಯದ ನುಡಿ ದೇವೇಗೌಡರನ್ನು ಕೆರಳಿಸಿತು. ಸದನದಲ್ಲಿ ಮೊದಲು ಮಾತನಾಡಿದ ಖರ್ಗೆ, ದೇವೇಗೌಡರೊಂದಿಗಿನ ತಮ್ಮ ಹಲವು ವರ್ಷಗಳ ಸ್ನೇಹವನ್ನು ನೆನಪಿಸಿಕೊಂಡು, ‘ದೇವೇಗೌಡರು ತಮ್ಮ ಇಡೀ ಜೀವನವನ್ನು ಜಾತ್ಯತೀತತೆ, ಸಮಾಜವಾದ ಮತ್ತು ರೈತರ ಪರವಾಗಿಯೇ ಕಳೆದರು.
ಆದರೆ ಅವರು ಇಷ್ಟು ಮಾಗಿದ ವಯಸ್ಸಿನಲ್ಲಿ ಪ್ರಧಾನಿ (ನರೇಂದ್ರ) ಮೋದಿಯನ್ನು ಅಪ್ಪಿಕೊಂಡು ಏಕೆ ಹೊಗಳತೊಡಗಿದರು ಎಂದು ಗೊತ್ತಿಲ್ಲ. ದೇವೇಗೌಡರಿಗೆ ಸಹಜವಾಗಿಯೇ ಯಾರನ್ನೂ ಹೊಗಳುವ ಅಭ್ಯಾಸವಿಲ್ಲ. ಆದರೆ ಯಾವ ಕಾರಣವು ದೇವೇಗೌಡರ ಮನಃಪರಿವರ್ತನೆಗೆ ಕಾರಣವಾಗಿದೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಕಾಲೆಳೆದರು. ಖರ್ಗೆ ಅವರ ಈ ಮಾತುಗಳು ಪಕ್ಷಭೇದ ಮರೆತು ಎಲ್ಲ ಸದಸ್ಯರಲ್ಲಿ ನಗುವನ್ನು ಎಬ್ಬಿಸಿದವು ಮತ್ತು ಮೋದಿ ಕೂಡ ಈ ಕ್ಷಣವನ್ನು ಆನಂದಿಸಿದ್ದು ಕಂಡುಬಂತು.
ಸಿಎಂ ಸಿದ್ದರಾಮಯ್ಯ ಬಳಿ ಹಲವು ಸುಳ್ಳಿನ ಅಸ್ತ್ರಗಳಿವೆ: ಸಿ.ಟಿ.ರವಿ ಕಿಡಿ
ರಾಜ್ಯಸಭೆಯಲ್ಲಿ ಖರ್ಗೆ ವರ್ಸಸ್ ಗೌಡ: ಕರ್ನಾಟಕದ ಅತ್ಯಂತ ಹಿರಿಯ ನಾಯಕರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಡುವೆ ಅಪರೂಪದ ವಾಗ್ಬಾಣ ವಿನಿಮಯಕ್ಕೆ ರಾಜ್ಯಸಭೆಯ ಕಲಾಪ ಗುರುವಾರ ಸಾಕ್ಷಿಯಾಯಿತು. ಇದೇ ವೇಳೆ, ಖರ್ಗೆ ಅವರ ಬಗ್ಗೆ ದೇವೇಗೌಡ ಅವರು ಮೆಚ್ಚುಗೆಯ ಮಾತುಗಳನ್ನೂ ಆಡಿದ್ದು ವಿಶೇಷವಾಗಿತ್ತು. ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ ಭಾಷಣ ವೇಳೆ ಮಾತನಾಡಿದ ಖರ್ಗೆ ಅವರು, ಜೀವನದ ಅಂತ್ಯ ಕಾಲದಲ್ಲಿ ರಾಜಕೀಯ ದಾರಿಯನ್ನೇ ದೇವೇಗೌಡರು ಬದಲಿಸಿದ್ದಾರೆ ಎಂದು ಅವರು ಮೂದಲಿಸಿದರು.
ಇದಕ್ಕೆ ತಿರುಗೇಟು ನೀಡಿದ ದೇವೇಗೌಡ, ಜೆಡಿಎಸ್ ಪಕ್ಷವನ್ನು ಕೆಲವು ಕಾಂಗ್ರೆಸ್ಸಿಗರು ನಾಶ ಮಾಡಲು ಮುಂದಾದರು. ಹೀಗಾಗಿ ಪಕ್ಷ ಉಳಿಸಿಕೊಳ್ಳಲು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದು ಹೇಳಿದರಲ್ಲದೆ, ಕರ್ನಾಟಕದಲ್ಲಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನದ ಬಗ್ಗೆಯೂ ಪ್ರಸ್ತಾಪಿಸಿದರು. ಅಲ್ಲದೆ ಕಾಂಗ್ರೆಸ್‌ನಲ್ಲಿನ ಹೈಕಮಾಂಡ್ ಸಂಸ್ಕೃತಿಯನ್ನೂ ತರಾಟೆಗೆ ತೆಗೆದುಕೊಂಡ ಅವರು, ಖರ್ಗೆ ಅವರು ಪ್ರಧಾನಿಯಾದರೆ ಕಾಂಗ್ರೆಸ್ ಹೈಕಮಾಂಡ್ ಸಹಿಸುತ್ತಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ಗಾಂಧಿ ಬಿಟ್ಟರೆ ಬರೀ ಸತ್ಯ ಹೇಳೋದು ಎಚ್‌ಡಿಕೆ ಒಬ್ಬರೇ: ಸಚಿವ ಸಚಿವ ಚಲುವರಾಯಸ್ವಾಮಿ
2019ರಲ್ಲಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕೆಲವು ಕಾಂಗ್ರೆಸ್ ನಾಯಕರೇ ಕಾರಣ. ತಮ್ಮ ಪುತ್ರನ ಬದಲಾಗಿ, ಖರ್ಗೆ ಅವರನ್ನೇ ಮುಖ್ಯಮಂತ್ರಿ ಮಾಡುವಂತೆ ತಾವು ಸಲಹೆ ನೀಡಿದರೂ, ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಕಾಂಗ್ರೆಸ್ ಒತ್ತಾಯ ಮಾಡಿತ್ತು. ಆದರೆ 13 ತಿಂಗಳ ಒಳಗೆ ಅವರನ್ನು ಕೆಳಗಿಳಿಸಿದ್ದು ಯಾರು? ಅದು ಖರ್ಗೆ ಅವರಲ್ಲ. ಆದರೆ ಕಾಂಗ್ರೆಸ್ ನಾಯಕರು. ಅಂದೇ ನಾನು ಕುಮಾರಸ್ವಾಮಿ ಅವರಿಗೆ ಬಿಜೆಪಿ ಜತೆ ಹೋಗಲು ಸೂಚಿಸಿದೆ. ಕಾಂಗ್ರೆಸ್ ಬೆಳೆಯಲು ಬಿಡುವುದಿಲ್ಲ ಎಂದೂ ಹೇಳಿದೆ ಎಂದರು.
