ಅಹಮದಾಬಾದ್[ಫೆ.17]: ಅಮೆರಿಕಾ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಇದಕ್ಕಾಗಿ ವಿಶೇಷ ತಯಾರಿ ನಡೆಯುತ್ತಿದೆ. ಮೂರು ಗಂಟೆಯ ಭೇಟಿ ವೇಳೆ ಟ್ರಂಪ್‌ಗೆ ಅಹಮದಾಬಾದ್ ಸ್ವಚ್ಛ ಹಾಗೂ ಸುಂದರವಾಗಿ ಕಾಣಬೇಕೆಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಪ್ರಯತ್ನಗಳು ನಡೆಯುತ್ತಿವೆ. ಸ್ಲಂ ಕಾಣಬಾರದೆಂಬ ನಿಟ್ಟಿನಲ್ಲಿ ಎತ್ತರದ ಗೋಡೆಗಳ ನಿರ್ಮಾಣ ಕಾರ್ಯ ನಡೆಯುತ್ತಿರುವ ವಿಚಾರ ಬಹಿರಂಗಗೊಂಡಿತ್ತು. ಇದೀಗ ಟ್ರಂಪ್ ಹಾದಿಯಲ್ಲಿರುವ ನಾಯಿ, ನೀಲಿ ಜಿಂಕೆಗಳನ್ನೂ 'ಮಾಯ' ಮಾಡಲಾಗುತ್ತದೆ. ಇಷ್ಟೇ ಅಲ್ಲ ಜನರು ಪಾನ್ ತಿಂದು ಗೋಡೆಗಳ ಮೇಲೆ ಉಗಿಯಬಾರದೆಂಬ ನಿಟ್ಟಿನಲ್ಲಿ ಪಾನ್ ಅಂಗಡಿಗಳನ್ನೂ ಸೀಲ್ ಮಾಡಲಾಗುತ್ತಿದೆ. 

3 ಗಂಟೆ ಇರಲಿರುವ ಟ್ರಂಪ್‌ಗಾಗಿ 100 ಕೋಟಿ ರೂ. ಖರ್ಚು ಮಾಡಿದ ಸರ್ಕಾರ!

2015ರಲ್ಲಿ ಎದುರಾಗಿತ್ತು ಮುಜುಗರ

2015ರಲ್ಲಿ ಘಟನೆಯೊಂದು ನಡೆದಿತ್ತು. ಅಮೆರಿಕಾದ ಸಚಿವ ಜಾನ್ ಕೈರಿ ವೈಬ್ರೆಂಟ್ ಗುಜರಾತ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ತೆರಳಲು ಸಿದ್ಧರಾಗಿ ವಿಮಾನ ನಿಲ್ದಾಣದತ್ತ ಹೊರಟಿದ್ದರು. ಆದರೆ ಈ ವೇಳೆ ನಾಯಿಯೊಂದು ಅವರ ವಾಹನದೆದುರು ಬಂದಿತ್ತು. ಈ ವೇಳೆ ವೇಗವಾಗಿ ಚಲಿಸುತ್ತಿದ್ದ ಕಾರು ನಾಯಿಗೆ ತಾಗಿತ್ತು. ಆದರೆ ಈ ಬಾರಿ ಇಂತಹ ಮುಜುಗರ ಎದುರಾಗಬಾರದೆಂಬ ನಿಟ್ಟಿನಲ್ಲಿ ಎಲ್ಲಾ ರೀತಿಯ ಮುಂಗಾಗೃತಾ ಕ್ರಮ ಕೈಗೊಳ್ಳಲಾಗುತ್ತಿದೆ. ಪಶು ಸಂಗೋಪನಾ ಇಲಾಖೆ ಇದಕ್ಕಾಗಿ ಸೋಮವಾರದಂದು ವಿಶೇಷ ಸಭೆ ಕರೆದಿದೆ. ಇದರಲ್ಲಿ ಬೀದಿ ನಾಯಿಗಳನ್ನು 5 ದಿನಗಳವರೆಗೆ VVIP ಹಾದಿಯಿಂದ ದೂರ ಇಡುವುದು ಹೇಗೆ ಎಂಬ ನಿಟ್ಟಿನಲ್ಲಿ ಸಮಾಲೋಚನೆ ನಡೆಸಲಾಗುತ್ತದೆ.

ಇನ್ನು ವಿಮಾನ ನಿಲ್ದಾಣದಿಂದ ಸ್ಟೇಡಿಯಂಗೆ ತೆರಳುವ ಹಾದಿಯಲ್ಲಿ  1 ಕಿ. ಮೀಟರ್ ಪ್ರದೇಶದಲ್ಲಿ ನೀಲಿ ಜಿಂಕೆಗಳು ಹೇರಳವಾಗಿವೆ. ಅವುಗಳ ನಿಯಂತ್ರಣಕ್ಕಾಗಿ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಲಿದೆ. ಇನ್ನು VVIP ಹಾದಿಯಲ್ಲಿ ಸುಮಾರು 2.75 ಕಿ. ಮೀಟರ್ ಪ್ರದೇಶದಲ್ಲಿ ಬೀದಿ ನಾಯಿಗಳು ಹೆಚ್ಚಾಗಿ ಇರುವುದರಿಂದ ಅವುಗಳನ್ನು ದೂರವಿಡಲು, ಸರ್ಕಾರ ಕ್ರಮ ಕೈಗೊಳ್ಳಲಿದೆ.

ಟ್ರಂಪ್‌ಗೆ ಸ್ಲಮ್ ಕಾಣದಂತೆ ತಡೆಯಲು ಅರ್ಧ ಕಿಮೀ ಉದ್ದದ ತಡೆಗೋಡೆ!

ಮೂರು ಪಾನ್ ಅಂಗಡಿಗಳು ಸೀಲ್

ದೇಶದೆಲ್ಲೆಡೆ ಪೇಮಸ್ಬ ಆಗಿರುವ ಪಾನ್ ಗುಜರಾತ್‌ನಲ್ಲೂ ತಿನ್ನುತ್ತಾರೆ. ಇಲ್ಲಿನ ಜನರೂ ಪಾನ್ ತಿಂದು ಹಾದಿಬದಿಯಲ್ಲೇ ಉಗಿಯುತ್ತಾರೆ. ಆದರೆ ಟ್ರಂಪ್ ಪ್ರವಾಸ ಮುಗಿಯುವವರೆಗೆ ಜನರಿಗೆ ಹೀಗೆ ಮಾಡಲು ಕಷ್ಟವಾಗಬಹುದು. ವಿಮಾನ ನಿಲ್ದಾಣದಿಂದ ಸ್ಟೇಡಿಯಂವರೆಗಿನ ಹಾದಿ ಸ್ವಚ್ಛವಾಗಿರಬೇಕೆಂಬ ನಿಟ್ಟಿನಲ್ಲಿ ಾಡಳಿತ ಅಧಿಕಾರಿಗಳು ಈ ಹಾದಿಯಲ್ಲಿರುವ ಸುಮಾರು ಮೂರು ಪಾನ್ ಅಂಗಡಿಗಳನ್ನು ಸೀಲ್ ಮಾಡಿದೆ. ಒಂದು ವೇಳೆ ಈ ಬೀಗ ತೆರೆದರೆ ಕ್ರಮ ಕೈಗೊಳ್ಳುವುದಾಗಿ ಅಂಗಡಿ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. 

News In 100 Seconds: ಪ್ರಮುಖ ಸುದ್ದಿಗಳು

"