ಪ್ರೀತಿಯ ಶ್ವಾನದ ಬರ್ತ್‌ಡೇಗೆ ಅದ್ದೂರಿ ಪಾರ್ಟಿ... ಯುವಕ ಖರ್ಚು ಮಾಡಿದ್ದು ಎಷ್ಟು ಲಕ್ಷ...?
- ಶ್ವಾನದ ಹುಟ್ಟುಹಬ್ಬಕ್ಕೆ ಖರ್ಚು ಮಾಡಿದ್ದು ಲಕ್ಷಗಳಲ್ಲಿ
- ಅದ್ದೂರಿ ಪಾರ್ಟಿಯ ಫೋಟೋಗಳು ವೈರಲ್
- ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಘಟನೆ
ಅಹ್ಮದಾಬಾದ್(ಜ. 9): ನೀವು ಈಗಾಗಲೇ ಬೆಕ್ಕಿಗೆ ಸೀಮಂತ ಮಾಡಿದ ವಿಡಿಯೋ. ಸಾಕು ಕೋಳಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ ವಿಡಿಯೋ ಮುಂತಾದವುಗಳನ್ನು ಈಗಾಗಲೇ ನೋಡಿದ್ದೀರಿ. ಈಗ ಶ್ವಾನದ ಸರದಿ. ಶ್ವಾನ ಮನುಷ್ಯನ ನೆಚ್ಚಿನ ಸ್ನೇಹಿತ ಹೀಗಾಗಿ ಶ್ವಾನಕ್ಕೆ ಸಾಮಾನ್ಯವಾಗಿ ಬಹುತೇಕ ಮಂದಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿರುವುದನ್ನು ನೀವು ನೋಡಿರಬಹುದು. ಆದರೆ ಇಲ್ಲಿ ಅಹ್ಮದಾಬಾದ್‌ನ ಯುವಕನೋರ್ವ ಶ್ವಾನದ ಹುಟ್ಟುಹಬ್ಬವನ್ನು ಯಾವುದೋ ಮದುವೆ ಕಾರ್ಯಕ್ರಮಕ್ಕೆ ಕಡಿಮೆ ಇಲ್ಲದಂತೆ ಅದ್ದೂರಿಯಾಗಿ ಮಾಡಿದ್ದು, ಈ ಶ್ವಾನದ ಹುಟ್ಟುಹಬ್ಬದ ಫೋಟೋಗಳು ಈಗ ಇಂಟರ್‌ನೆಟ್‌ನಲ್ಲಿ ರಾರಾಜಿಸುತ್ತಿದ್ದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶ್ವಾನದ ಹುಟ್ಟುಹಬ್ಬಕ್ಕೆ ಇಷ್ಟೊಂದು ಖರ್ಚು ಮಾಡುವುದೇ ಎಂದು ಎಲ್ಲರೂ ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಅಷ್ಟಕ್ಕೂ ಶ್ವಾನದ ಬರ್ತ್‌ಡೇಗೆ ಯುವಕ ಖರ್ಚು ಮಾಡಿದ್ದು, ಎಷ್ಟು ಲಕ್ಷ ಗೊತ್ತೇ. ಬರೋಬರಿ 7 ಲಕ್ಷ.
ಹೆಚ್ಚಿನ ಕುಟುಂಬಗಳಲ್ಲಿ ಸಾಕುಪ್ರಾಣಿಗಳು ಕೇವಲ ಪ್ರಾಣಿಗಳಲ್ಲ, ಅವರು ಕುಟುಂಬದ ಪ್ರಮುಖ ಸದಸ್ಯರ ಸ್ಥಾನವನ್ನು ಪಡೆಯುತ್ತವೆ. ಪ್ರಸ್ತುತ ಈ ಶ್ವಾನವೂ ಹಾಗೆ. ಅಬ್ಬಿ ಹೆಸರಿನ ಈ ಶ್ವಾನದ ಬರ್ತ್‌ಡೇ ಗುಜರಾತ್‌ನ (Gujarat) ಅಹ್ಮದಾಬಾದ್ (Ahmedabad) ನ ನಿಕೋಲ್ ( Nikol) ಪ್ರದೇಶದಲ್ಲಿ ನಡೆದಿದೆ. ಅಬ್ಬಿಗೆ ಇದು 2ನೇ ವರ್ಷದ ಹುಟ್ಟುಹಬ್ಬವಾಗಿದೆ. ಅಬ್ಬಿಯ ಬರ್ತ್‌ಡೇ ಪಾರ್ಟಿಗಾಗಿ ಹಲವಾರು ಅತಿಥಿಗಳನ್ನು ಆಹ್ವಾನಿಸಲಾಗಿತ್ತು. ಹುಟ್ಟು ಹಬ್ಬಕ್ಕಾಗಿ ಸಿದ್ದಗೊಂಡ ಸ್ಥಳವೂ ಯಾವುದೇ ಮದುವೆ ಪಾರ್ಟಿಗೆ ಕಡಿಮೆ ಇರಲಿಲ್ಲ. ಮಧುಬನ್ ಗ್ರೀನ್ (Madhuban Green)ನಲ್ಲಿ ದೊಡ್ಡ ಪ್ಲಾಟ್ ಅನ್ನು ಪಾರ್ಟಿಗಾಗಿ ಕಾಯ್ದಿರಿಸಲಾಗಿತ್ತು. ಮತ್ತು ಸುಂದರವಾದ ಅಲಂಕಾರಗಳು ಮತ್ತು ಶ್ವಾನದ ದೊಡ್ಡ ಪೋಸ್ಟರ್‌ಗಳೊಂದಿಗೆ ಟೆಂಟ್‌ಗಳನ್ನು ಸ್ಥಾಪಿಸಲಾಗಿತ್ತು.
ಎಲ್ಲವೂ ನಿಜವಾಗಿಯೂ ಅದ್ದೂರಿ ಮತ್ತು ಭವ್ಯವಾಗಿತ್ತು. ಕೇವಲ ನಾಯಿಯ ಹುಟ್ಟುಹಬ್ಬಕ್ಕೆ ಇಷ್ಟೊಂದೆಲ್ಲಾ ವ್ಯವಸ್ಥೆಗಳನ್ನು ಮಾಡಿರುವುದನ್ನು ನೋಡಿ ಪಾರ್ಟಿಗೆ ಬಂದ ಅತಿಥಿಗಳು ಆಶ್ಚರ್ಯಚಕಿತರಾದರು. ಹುಟ್ಟುಹಬ್ಬದ ಪಾರ್ಟಿಗಾಗಿ ಅಬ್ಬಿಗೆ ಕಪ್ಪು ಉಡುಗೆ ಹಾಗೂ ಸ್ಕಾರ್ಪ್‌ನ್ನು ತೊಡಿಸಲಾಗಿತ್ತು. ಹುಟ್ಟುಹಬ್ಬದ ದೃಶ್ಯಗಳಲ್ಲಿ ಕಾಣಿಸುವಂತೆ ಗಾರ್ಬಾ ನೃತ್ಯ, ಲೈವ್ ಆರ್ಕೆಸ್ಟ್ರಾ ಮತ್ತು ಸಂಗೀತವನ್ನು ಕೂಡ ಆಯೋಜಿಸಲಾಗಿತ್ತು ಎಂದು ತಿಳಿದು ಬಂದಿದೆ.
ಕೋಳಿಯ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿದ ಮನೆಮಂದಿ
ಈ ಮಧ್ಯೆ, ಗುಜರಾತ್ ಹೊಸ ವರ್ಷದ ಆರಂಭದಿಂದಲೂ ಕೋವಿಡ್ -19 ಪ್ರಕರಣಗಳಲ್ಲಿ ಸ್ಥಿರವಾದ ಹೆಚ್ಚಳವನ್ನು ದಾಖಲಿಸಿದೆ. ಹಲವಾರು ಮಾರ್ಗಸೂಚಿಗಳ ಜೊತೆಗೆ, ರಾತ್ರಿ ಕರ್ಫ್ಯೂ ಕೂಡ ರಾಜ್ಯದಲ್ಲಿ ಒಂದು ಗಂಟೆ ಹೆಚ್ಚಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಅದ್ದೂರಿ ಪಾರ್ಟಿಯು ಕೊರೊನಾವೈರಸ್‌ನಿಂದ ನಿವಾಸಿಗಳ ಸುರಕ್ಷತೆಗೆ ದೊಡ್ಡ ಹೊಡೆತವನ್ನು ನೀಡಿದೆ. ಪಾರ್ಟಿಯ ಫೋಟೋಗಳನ್ನು ಪರಿಶೀಲಿಸಿದ ನಂತರ, ಹೆಚ್ಚಿನ ಅತಿಥಿಗಳು ಮುಖವಾಡಗಳನ್ನು ಧರಿಸಿರಲಿಲ್ಲ ಎಂದು ಪೊಲೀಸರಿಗೆ ಗೊತ್ತಾಗಿದ್ದು, ಅವರು ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದಾರೆ ಮತ್ತು ಸಾಂಕ್ರಾಮಿಕ ಕಾಯ್ದೆಯಡಿ ಪಾರ್ಟಿಗೆ ಜವಾಬ್ದಾರರಾಗಿರುವ ಜನರ ವಿರುದ್ಧ ದೂರು ದಾಖಲಾಗಿದ್ದು, ಮೂವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
Woman Bites: ನಾಯಿ ವಿಚಾರವಾಗಿ ಜಗಳ... ಶ್ವಾನದ ಮಾಲಕಿಗೆ ಕಚ್ಚಿದ್ದು ನಾಯಿ ಅಲ್ಲ ಮಹಿಳೆ...!
ಪೊಲೀಸರ ಪ್ರಕಾರ, ಪಮೊರಿಯನ್ ತಳಿಯ ಸಾಕು ನಾಯಿ ಅಬ್ಬಿಗಾಗಿ ಈ ಹುಟ್ಟುಹಬ್ಬವನ್ನು ಶುಕ್ರವಾರ ರಾತ್ರಿ ಅಚರಿಸಲಾಗಿತ್ತು. ಚಿರಾಗ್ ಪಟೇಲ್ (Chirag Patel) ಅಲಿಯಾಸ್ ಡಾಗೊ (24), ಅವರ ಸಹೋದರ ಉರ್ವೀಶ್ ಪಟೇಲ್ ( Urvish Patel) ಮತ್ತು ಅವರ ಸ್ನೇಹಿತ ದಿವ್ಯೇಶ್ ಮಹೇರಿಯಾ (35) (Divyesh Maheria) ಸೇರಿ ಈ ಪಾರ್ಟಿ ಆಯೋಜಿಸಿದ್ದರು. ಇವರೆಲ್ಲರೂ ಎಲ್ಲರೂ ಅಹಮದಾಬಾದ್‌ನ ಕೃಷ್ಣನಗರದ ನಿವಾಸಿಗಳು.