ಅಹಮದಾಬಾದ್(ಮೇ 19)  ನಾನ್ ವೆಜ್ ಕರಿಗೆ ಉಪ್ಪು ಹೆಚ್ಚಾಗಿದೆ ಎಂಬ ಕಾರಣಕ್ಕೆ ಕೋಲಾರದಲ್ಲಿ ಮಹಾಶಯನೊಬ್ಬ ಹೆಂಡತಿಯನ್ನೇ ಕೊಲೆ ಮಾಡಿದ್ದ. ಆದರೆ ಈ ಪುಣ್ಯಾತ್ಮನ ಕತೆ ಮತ್ತೊಂದು ತರಹ.

ಊಟದ ಕಾರಣಕ್ಕೆ ಗಂಡ-ಹೆಂಡತಿ ನಡುವೆ ವಾಗ್ವಾದ ಆಗಿದೆ.  ಕುಪಿತಗೊಂಡ ಗಂಡ ಮನೆಯ ಬಾಲ್ಕನಿಯಿಂದ ಕೆಳಗೆ ಹಾರಲು ಯತ್ನಿಸಿದ್ದಾನೆ.  ಕೊನೆಗೆ ಅಕ್ಕಪಕ್ಕದವರು ಒಂದಾಗಿ ಆತನ ರಕ್ಷಣೆ ಮಾಡಿದ್ದಾರೆ. 

ಅವಳಿ ಮಕ್ಕಳ ಜನನ; ಮಕ್ಕಳ ತಂದೆ ಮಾತ್ರ ಬೇರೆ ಬೇರೆ!

ಅಹಮದಾಬಾದ್ ನ ಈ  ಗಂಡನ ಆತ್ಮಹತ್ಯೆ ಅವತಾರದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಊಟದ ಮೆನುವಿನ ವಿಚಾರದಲ್ಲಿ ಗಂಡ ಹೆಂಡತಿ ನಡುವೆ ಜೋರಾಗಿ ಮಾತುಕತೆ ನಡೆದಿದೆ.

ಲಾಕ್ ಡೌನ್ ಪರಿಣಾಮ  ಎಲ್ಲರೂ ಮನೆಯಲ್ಲೇ ಅತಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಡೊಮೆಸ್ಟಿಕ್ ವಯಲೆನ್ಸ್ ಸಹ ಜಾಸ್ತಿಯಾಗಿದೆ ಎಂದು ಅಧ್ಯಯನ ವರದಿಗಳು ಹೇಳಿವೆ.  ಹೆಂಡತಿಯ ಮೇಲಿನ ಸಿಟ್ಟಿಗೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಲು ಮುಂದಾಗಿದ್ದ ಗಂಡ ಅಕ್ಕಪಕ್ಕದವರ ನೆರವಿನಿಂದ ರಕ್ಷಿಸಲ್ಪಟ್ಟಿದ್ದಾನೆ.   ಗುಜರಾತ್ ನಲ್ಲಿ 11 ಸಾವಿರ ಕೊರೋನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 625 ಸಾವು ಸಹ ಆಗಿದೆ.