ಆಗ್ರಾ (ಫೆ. 15): ಪ್ರೇಮಿಗಳ ದಿನವನ್ನು ಪ್ರೇಮ ಸೌಧ ತಾಜ್‌ ಮಹಲ್‌ನಲ್ಲಿ ಆಚರಿಸಲು ಹೋಗಿದ್ದ ಪ್ರಣಯ ಜೋಡಿಗಳಿಗೆ ಭಾರೀ ನಿರಾಸೆಯಾಗಿದೆ. ಪ್ರಾರ್ಥನೆಗಾಗಿ ಪ್ರತೀ ಶುಕ್ರವಾರ ರಜೆಯಾಗಿರುವುದರಿಂದ ಪ್ರೇಮಿಗಳ ದಿನದಂದೇ ಪ್ರವಾಸಿಗರಿಗೆ ತಾಜ್‌ ಮಹಲ್‌ ಮುಚ್ಚಲಾಗಿತ್ತು.

ಪ್ರೇಮಿಗಳ ದಿನ: 10 ಲಕ್ಷ ಗುಲಾಬಿ ಹೂವಿಗೆ ಬೇಡಿಕೆ, ಬೆಲೆಯೂ ಏರಿಕೆ

ಹೀಗಾಗಿ ಪ್ರೇಮ ಸೌಧದ ಮುಂದೆ ಪ್ರೇಮ ನಿವೇದನೆಗೆ ಮುಂದಾಗಿದ್ದ ನವ ಜೋಡಿಗಳು ಹಾಗೂ ಪ್ರೀತಿ ವ್ಯಕ್ತ ಪಡಿಸಲು ಅಣಿಯಾಗಿದ್ದ ಜೋಡಿ ಹಕ್ಕಿಗಳು ಪೆಚ್ಚು ಮೋರೆ ಹಾಕಿದ್ದಾರೆ. ಆದರೆ ತಾಜ್‌ ಗೋಚರಿಸುವ ಸುತ್ತ ಮುತ್ತಲಿನ ಪ್ರದೇಶದಲ್ಲಿ ಜೋಡಿಗಳು ಪ್ರೇಮಿಗಳ ದಿನವನ್ನು ಆಚರಿಸಿಕೊಂಡಿದ್ದಾರೆ.

ತಾಜ್‌ ಹಿಂಭಾಗದ ಮೆಹ್ತಾಬ್‌ ಬಾಗ್‌ ಪಾರ್ಕ್, ಯಮುನೆಯ ದಡ ಶುಕ್ರವಾರ ಪ್ರಣಯ ಹಕ್ಕಿಗಳ ನೆಚ್ಚಿನ ಸ್ಥಳವಾಗಿತ್ತು. ಸುತ್ತಮುತ್ತಲಿನ ಹೊಟೇಲ್‌, ರೆಸ್ಟೋರೆಂಟ್‌ ಪ್ರೇಮಿಗಳಿಂದ ತುಂಬಿ ತುಳುಕುತ್ತಿತ್ತು. ವ್ಯಾಲೆಂಟೈನ್ಸ್‌ ಡೇ ಸ್ಪೆಷಲ್‌ ಊಟಕ್ಕೆ ಭಾರೀ ಬೇಡಿಕೆ ಇದ್ದಿದ್ದು ಕಂಡು ಬಂತು.