ಅಗ್ನಿವೀರ್ ಯೋಜನೆ ರದ್ದುಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವ ಕಾಂಗ್ರೆಸ್ ಇದೀಗ ಇದೇ ವಿಚಾರ ಮುಂದಿಟ್ಟು ಮೋದಿ ಹಾಗೂ ಕಾಂಗ್ರೆಸ್ ವಿರುದ್ದ ಹರಿಹಾಯ್ದಿದೆ. ಅಗ್ನಿವೀರರಿಗೆ ಚೀನಾ ಸೈನಿಕರನ್ನು ಎದುರಿಸಲು ಸಾಧ್ಯವಾಗುವುದಿಲ್ಲ, ಹುತಾತ್ಮರಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿ(ಏ.09) ಲೋಕಸಭಾ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಇದೀಗ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಅಗ್ನಿವೀರ್ ಯೋಜನೆಯನ್ನು ರದ್ದು ಮಾಡಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅಗ್ನಿವೀರರಿಗೆ 6 ತಿಂಗಳ ತರಭೇತಿ ನೀಡಲಾಗುತ್ತದೆ. ಈ ಅಗ್ನಿವೀರರು 5 ವರ್ಷ ಕಠಿಣ ತರಬೇತಿ ಪಡೆದ ಚೀನಾ ಯೋಧರ ಮುಂದೆ ಹೋರಾಡಲು ಸಾಧ್ಯವಾಗುವುದಿಲ್ಲ, ಹುತಾತ್ಮರಾಗುತ್ತಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹಿಂದೆ ಬಡವರು ಸೇನೆ ಸೇರಿಕೊಳ್ಳುತ್ತಿದ್ದರು. ಅವರಿಗೆ ಪಿಂಚಣಿ ಇತ್ತು, ಕ್ಯಾಂಟೀನ್ ಸೌಲಭ್ಯವಿತ್ತು.ಆದರೆ ಅಗ್ನಿವೀರರಿಗೆ ಇದು ಯಾವುದೂ ಇಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಚೀನಾ ಸೈನಿಕರಿಗೆ ಕಾಂಬಾಟ್ ತರಬೇತಿ ನೀಡಲಾಗುತ್ತದೆ. 5 ವರ್ಷಗಳ ತರಬೇತಿ ಬಳಿಕ ಗಡಿಯಲ್ಲಿ ನಿಯೋಜನೆಗೊಳ್ಳುತ್ತಾರೆ. ಕೇವಲ 6 ತಿಂಗಳು ತರಬೇತಿ ಪಡೆದ ಅಗ್ನಿವೀರರು ಹೇಗೆ ಹೋರಾಡುತ್ತಾರೆ? ಕಠಿಣ ತರಬೇತಿ ಪಡೆದ ಚೀನಾ ಸೈನಿಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದರೆ ಅವರಿಗೆ ಹುತಾತ್ಮರು ಎಂಬ ಗೌರವ ಕೂಡ ಸಿಗುವುದಿಲ್ಲ. ಕಾರಣ ಅಗ್ನಿವೀರರಿಗೆ ಈ ಗೌರವವನ್ನು ಮೋದಿ ಸರ್ಕಾರ ನೀಡಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ನಿರೀಕ್ಷಿತ ಫಲಿತಾಂಶ ಬರದಿದ್ದರೆ ರಾಹುಲ್ ಗಾಂಧಿ ಹಿಂದೆ ಸರಿಯವುದು ಒಳಿತು, ಪ್ರಶಾಂತ್ ಕಿಶೋರ್!

ಅಗ್ನಿವೀರರು ದೇಶಕ್ಕಾಗಿ ಹೋರಾಡುತ್ತಾರೆ. ಆದರೆ ಅವರಿಗೆ ಪಿಂಚಣಿ ಇಲ್ಲ, ಕ್ಯಾಂಟೀನ್ ಸೌಲಭ್ಯ ಕೂಡ ಅವರಿಗಿಲ್ಲ. ಯುದ್ಧದಲ್ಲಿ ವೀರ ಮರಣ ಹೊಂದಿದರೆ ಅಗ್ನಿವೀರರಿಗೆ ಹುತಾತ್ಮ ಗೌರವ ಕೂಡ ಕೊಡುವುದಿಲ್ಲ. ಇದು ಯಾವ ಯೋಜನೆ? ಲೋಕಸಭಾ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಅಗ್ನಿವೀರ ಯೋಜನೆ ರದ್ದು ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

Scroll to load tweet…