Asianet Suvarna News Asianet Suvarna News

ರಾಮಮಂದಿರ ಉದ್ಘಾಟನೆ ಬಳಿಕ ಗೋಧ್ರಾ ರೀತಿ ಘಟನೆ: ಉದ್ಧವ್‌ ಠಾಕ್ರೆ

ರಾಮಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದ ಕರಸೇವಕರಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಗೋಧ್ರಾ ನಿಲ್ದಾಣದ ಬಳಿ 2022ರ ಫೆ.27ರಂದು ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಸಾಕಷ್ಟು ಹಿಂಸಾಚಾರಕ್ಕೆ ಕಾರಣವಾಗಿತ್ತು: ಉದ್ಧವ್‌ ಠಾಕ್ರೆ 

After the Inauguration of the Ram Mandir Godhra like Incidents Says Uddhav Thackeray grg
Author
First Published Sep 11, 2023, 12:00 AM IST

ಮುಂಬೈ(ಸೆ.11):  ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರ ಉದ್ಘಾಟನೆಗೆ ತೆರಳುವ ಜನ ಮರಳುವ ವೇಳೆ ‘ಗೋಧ್ರಾ ರೀತಿ’ಯ ಘಟನೆ ನಡೆಯುವ ಸಾಧ್ಯತೆ ಇದೆ ಎಂದು ಶಿವಸೇನೆ (ಯುಬಿಟಿ)ಯ ನಾಯಕ ಉದ್ಧವ್‌ ಠಾಕ್ರೆ ಭಾನುವಾರ ಎಚ್ಚರಿಸಿದ್ದಾರೆ.

‘ರಾಮಮಂದಿರ ಉದ್ಘಾಟನೆಗೆ ಸರ್ಕಾರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಆಹ್ವಾನಿಸಲಿದೆ. ಬಸ್ಸು, ರೈಲು, ಟ್ರಕ್‌ಗಳಲ್ಲಿ ಅಯೋಧ್ಯೆಗೆ ಆಗಮಿಸಲಿದ್ದಾರೆ. ಇವರೆಲ್ಲರು ಮರಳುವಾಗ ಗೋಧ್ರಾ ರೀತಿಯ ದುರ್ಘಟನೆ ನಡೆಯುವ ಸಾಧ್ಯತೆ ಇದೆ’ ಎಂದು ಜಲಗಾಂವ್‌ನಲ್ಲಿ ಮಾಡಿದ ಭಾಷಣದ ವೇಳೆ ಹೇಳಿದ್ದಾರೆ.

ಮುಂಬೈನಲ್ಲಿ ಅಮಿತಾಬ್‌ ಬಚ್ಛನ್‌ಗೆ ರಾಖಿ ಕಟ್ಟಿದ ಮಮತಾ ಬ್ಯಾನರ್ಜಿ, ಬಾಳ್‌ ಠಾಕ್ರೆ ಫೋಟೋಗೆ ಕೈಮುಗಿದ ದೀದಿ!

ಅಲ್ಲದೇ ಇದೇ ವೇಳೆ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಕಿಡಿಕಾರಿರುವ ಅವರು, ಜನರಿಗೆ ಮಾದರಿಯಾಗಬಲ್ಲಂತಹ ಯಾವುದೇ ನಾಯಕರು ಪಕ್ಷದಲ್ಲಾಗಲೀ ಸಂಘಟನೆಯಲ್ಲಾಗಲೀ ಇಲ್ಲ ಎಂದು ಹೇಳಿದ್ದಾರೆ.
ರಾಮಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾಗಿ ವಾಪಸ್ಸಾಗುತ್ತಿದ್ದ ಕರಸೇವಕರಿದ್ದ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಗುಜರಾತ್‌ನ ಗೋಧ್ರಾ ನಿಲ್ದಾಣದ ಬಳಿ 2022ರ ಫೆ.27ರಂದು ಬೆಂಕಿ ಹಚ್ಚಲಾಗಿತ್ತು. ಈ ಘಟನೆ ಸಾಕಷ್ಟು ಹಿಂಸಾಚಾರಕ್ಕೆ ಕಾರಣವಾಗಿತ್ತು ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios