Asianet Suvarna News Asianet Suvarna News

ಇಸ್ರೇಲ್ ಬೆನ್ನಲ್ಲೇ, ಫ್ರಾನ್ಸ್‌ನಿಂದ ಭಾರತಕ್ಕೆ ವೆಂಟಿಲೇಟರ್‌, ವೈದ್ಯಕೀಯ ಉಪಕರಣ!

ಫ್ರಾನ್ಸ್‌ನಿಂದ ಭಾರತಕ್ಕೆ ಇಂದು ವೆಂಟಿಲೇಟರ್‌, ವೈದ್ಯಕೀಯ ಉಪಕರಣ| 50 ಒಸಿರಿಸ್‌-3 ವೆಂಟಿಲೇಟರ್‌ಗಳು ಹಾಗೂ 70 ಯುವೆಲ್‌ 830 ವೆಂಟಿಲೇಟರ್ ಹೊತ್ತು ಭಾರತಕ್ಕೆ ಬರಲಿದೆ ಫ್ರಾನ್ಸ್‌ ವಿಮಾನ

After Israel France to give India ventilators and medical equipments
Author
Bangalore, First Published Jul 28, 2020, 11:57 AM IST

ನವದೆಹಲಿ(ಜು.28): ಕೊರೋನಾ ನೆರವಿನ ಭಾಗವಾಗಿ ಫ್ರಾನ್ಸ್‌ ವಾಯುಪಡೆಯ ವಿಮಾನವೊಂದು ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ವೈದ್ಯಕೀಯ ಉಪಕರಣಗಳನ್ನು ಹೊತ್ತು ಮಂಗಳವಾರ ಭಾರತಕ್ಕೆ ಆಗಮಿಸಲಿದೆ ಎಂದು ಇಲ್ಲಿನ ಫ್ರಾನ್ಸ್‌ನ ರಾಯಭಾರ ಕಚೇರಿ ತಿಳಿಸಿದೆ.

'ಬಾಯ್ ಅಪ್ಪಾ.. ನನಗೆ ಉಸಿರಾಡೋಕಾಗ್ತಿಲ್ಲ, ಅವ್ರು ವೆಂಟಿಲೇಟರ್ ತೆಗೆದಿದ್ದಾರೆ...!'

ಭಾರತಕ್ಕೆ ವೈದ್ಯಕೀಯ ಉಪಕರಣ ಹಾಗೂ ತಾಂತ್ರಿಕ ನೆರವನ್ನು ನೀಡುವುದಾಗಿ ಫ್ರಾನ್ಸ್‌ ಅಧ್ಯಕ್ಷ ಇಮಾನ್ಯುಯಲ್‌ ಮಾಕ್ರೋನ್‌ ಈ ಮುನ್ನ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ 50 ಒಸಿರಿಸ್‌-3 ವೆಂಟಿಲೇಟರ್‌ಗಳು ಹಾಗೂ 70 ಯುವೆಲ್‌ 830 ವೆಂಟಿಲೇಟರ್‌ಗಳನ್ನು ಫ್ರಾನ್ಸ್‌ ರವಾನಿಸುತ್ತಿದೆ. ಒಸಿರಿಸ್‌ ವೆಂಟಿಲೇಟರ್‌ಗಳು ತುರ್ತು ಸಾಗಣೆ, ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ರೋಗಿಯ ಸಾಗಣೆ ಮತ್ತು ಚೇತರಿಕೆಗೆ ಅನುಕೂಲಕರವಾಗಿದೆ.

‘ಪಿಎಂ ಕೇ​ರ್ಸ್’ ನಿಧಿಯಿಂದ ಕರ್ನಾಟಕಕ್ಕೆ 90 ವೆಂಟಿಲೇಟರ್‌: 34 ಕೋಟಿ ರು. ಅನುದಾನ ಮಂಜೂರು!

ಯುವೆಲ್‌ 830 ವೆಂಟಿಲೇಟರ್‌ಗಳು ಇನ್ಟುಬೇಷನ್‌ ಟ್ಯೂಬ್‌ಗಳ ನೆರವಿಲ್ಲದೇ ಶ್ವಾಸಕೋಶಕ್ಕೆ ಆಮ್ಲಜನಕ ಪೂರೈಸಲು ಸಹಾಯಕವಾಗಿವೆ. ಈ ಎರಡು ವೆಂಟಿಲೇಟರ್‌ಗಳು ಭಾರತದ ಆಸ್ಪತ್ರೆಗಳ ಅಗತ್ಯತೆಯನ್ನು ಪೂರೈಸಲಿವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

Follow Us:
Download App:
  • android
  • ios