ದೆಹಲಿ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ಬೆನ್ನಲ್ಲಿಯೇ ಕಾಂಗ್ರೆಸ್‌ಗೆ 1700 ಕೋಟಿ ರೂಪಾಯಿ ಐಟಿ ನೋಟಿಸ್!
ದಂಡ ಮತ್ತು ಬಡ್ಡಿ ಸೇರಿದಂತೆ 2017-2021ರ ತೆರಿಗೆ ಮರುಮೌಲ್ಯಮಾಪನದ ವಿರುದ್ಧದ ತನ್ನ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ನಂತರ ಕಾಂಗ್ರೆಸ್ ಪಕ್ಷವು ಆದಾಯ ತೆರಿಗೆ ಇಲಾಖೆಯಿಂದ 1,700 ಕೋಟಿ ರೂಪಾಯಿಯ ನೋಟಿಸ್ ಅನ್ನು ಸ್ವೀಕರಿಸಿದೆ.
ನವದೆಹಲಿ (ಮಾ.29): ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳ ವಿರುದ್ಧ ಪಕ್ಷದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಆದಾಯ ತೆರಿಗೆ ಇಲಾಖೆಯು ಕಾಂಗ್ರೆಸ್‌ಗೆ 1,700 ಕೋಟಿ ರೂಪಾಯಿಗಳ ನೋಟೀಸ್ ಅನ್ನು ಜಾರಿ ಮಾಡಿದೆ. ಈ ಬೆಳವಣಿಗೆಯನ್ನು ಕಾಂಗ್ರೆಸ್ ನಾಯಕ ವಿವೇಕ್ ತಂಖಾ ಖಚಿತಪಡಿಸಿದ್ದಾರೆ. 2017-18 ಮತ್ತು 2020-21 ರ ಮೌಲ್ಯಮಾಪನ ವರ್ಷಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ದಂಡ ಮತ್ತು ಬಡ್ಡಿಯನ್ನು ಕೂಡ ಇದು ಒಳಗೊಂಡಿದೆ. ಗುರುವಾರ, ತೆರಿಗೆ ಅಧಿಕಾರಿಗಳು ನಾಲ್ಕು ವರ್ಷಗಳ ಅವಧಿಗೆ ತೆರಿಗೆ ಮರುಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ ಅರ್ಜಿಗಳನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿತ್ತು.
ಕಾಂಗ್ರೆಸ್ ಪಕ್ಷ 100 ಕೋಟಿ ತೆರಿಗೆ ಬಾಕಿ ಕಟ್ಟಬೇಕು: ಐಟಿಎಟಿ ಆದೇಶ ಎತ್ತಿ ಹಿಡಿದ ದೆಹಲಿ ಹೈಕೋರ್ಟ್
ನ್ಯಾಯಮೂರ್ತಿಗಳಾದ ಯಶವಂತ್ ವರ್ಮಾ ಮತ್ತು ಪುರುಷೇಂದ್ರ ಕುಮಾರ್ ಕೌರವ್ ಅವರ ಪೀಠವು, ಮರುಮೌಲ್ಯಮಾಪನವನ್ನು ಇನ್ನೊಂದು ವರ್ಷದವರೆಗೆ ತೆರೆಯುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿತ್ತು. ಇದೇ ಆದೇಶದ ಆಧಾರದ ಮೇಲೆ ಅರ್ಜಿಗಳನ್ನು ವಜಾಗೊಳಿಸಲಾಗಿದೆ ಎಂದು ಹೇಳಿದೆ. ಪ್ರಸ್ತುತ ವಿಷಯವು 2017 ರಿಂದ 2021 ರ ಮೌಲ್ಯಮಾಪನ ವರ್ಷಗಳಿಗೆ ಸಂಬಂಧಿಸಿದೆ. ಕಳೆದ ವಾರ ವಜಾಗೊಂಡ ಹಿಂದಿನ ಅರ್ಜಿಯಲ್ಲಿ, ಕಾಂಗ್ರೆಸ್ ಪಕ್ಷವು 2014-15 ರಿಂದ 2016-17 ರ ಮೌಲ್ಯಮಾಪನ ವರ್ಷಗಳ ಮರು ಮೌಲ್ಯಮಾಪನ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನೆ ಮಾಡಿತ್ತು.
ತೆರಿಗೆ ಕೇಸ್‌ನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ, ಅಕೌಂಟ್ ಫ್ರೀಜ್‌ಗೆ ತಡೆ ನೀಡುವ ಮನವಿ ತಿರಸ್ಕಾರ