Asianet Suvarna News Asianet Suvarna News

ಸಹಜ ಸ್ಥಿತಿಗೆ ಗುಜ​ರಾ​ತ್‌: ರಾಜ​ಸ್ಥಾ​ನ​ಕ್ಕೆ ಈಗ ಚಂಡ​ಮಾ​ರುತ ಲಗ್ಗೆ, ಭಾರಿ ಮಳೆ

ಗುಜ​ರಾ​ತ್‌​ನಲ್ಲಿ ಭಾರಿ ಪ್ರಾಕೃ​ತಿಕ ವಿನಾಶ ಸೃಷ್ಟಿ​ಸಿದ ಬಿಪ​ರ್‌​ ಜಾಯ್‌ ಚಂಡ​ಮಾ​ರುತ  ಬಹು​ತೇ​ಕ ದುರ್ಬ​ಲ​ಗೊಂಡಿದೆ. ಹೀಗಾಗಿ ಚಂಡ​ಮಾ​ರು​ತ​ದಿಂದ ಹೆಚ್ಚು ಬಾಧಿ​ತ​ವಾದ ಕಛ್‌ ಪ್ರದೇ​ಶವು ಶನಿ​ವಾರ ಸಹಜ ಸ್ಥಿತಿಗೆ ಮರ​ಳ​ತೊ​ಡ​ಗಿದೆ.

After cyclone Gujarat returned  to normal state Rajasthan is now hit by storm heavy rain in some districts of the state akb
Author
First Published Jun 18, 2023, 7:03 AM IST

ಭುಜ್‌ (ಗು​ಜ​ರಾ​ತ್‌​): ಗುಜ​ರಾ​ತ್‌​ನಲ್ಲಿ ಭಾರಿ ಪ್ರಾಕೃ​ತಿಕ ವಿನಾಶ ಸೃಷ್ಟಿ​ಸಿದ ಬಿಪ​ರ್‌​ ಜಾಯ್‌ ಚಂಡ​ಮಾ​ರುತ  ಬಹು​ತೇ​ಕ ದುರ್ಬ​ಲ​ಗೊಂಡಿದೆ. ಹೀಗಾಗಿ ಚಂಡ​ಮಾ​ರು​ತ​ದಿಂದ ಹೆಚ್ಚು ಬಾಧಿ​ತ​ವಾದ ಕಛ್‌ ಪ್ರದೇ​ಶವು  ಸಹಜ ಸ್ಥಿತಿಗೆ ಮರ​ಳ​ತೊ​ಡ​ಗಿದೆ. ಅಂಗ​ಡಿ-ಮುಂಗ​ಟ್ಟು​ಗಳು ವ್ಯಾಪಾರ ವಹಿ​ವಾಟು ಪುನಾ​ರಂಭ ಮಾಡಿ​ವೆ. ಇದೇ ವೇಳೆ, ವಿದ್ಯುತ್‌ ಕಡಿ​ತ​ದಿಂದಾಗಿ ಕಾರ್ಗ​ತ್ತ​ಲಲ್ಲಿ ಮುಳು​ಗಿದ್ದ 1000 ಗ್ರಾಮ​ಗಳ ಪೈಕಿ ಬಹು​ತೇಕ ಹಳ್ಳಿ​ಗ​ಳಲ್ಲಿ ವಿದ್ಯುತ್‌ ಸಂಪರ್ಕ ಮರು​ಸ್ಥಾ​ಪ​ನೆ​ಯಾ​ಗಿದೆ. ಭುಜ್‌ (Bhuj), ಮಾಂಡ್ವಿ ಸೇರಿ ಹಲವು ಪಟ್ಟ​ಣ​ಗಳು ಹಾಗೂ ಗ್ರಾಮ​ಗ​ಳಲ್ಲಿ ಮಳೆ ಸಂಪೂರ್ಣ ನಿಂತಿ​ದೆ. ಹೀಗಾಗಿ ಈ ಪಟ್ಟಣ ಹಾಗೂ ಗ್ರಾಮಗಳು ನೆಮ್ಮ​ದಿಯ ನಿಟ್ಟು​ಸಿರು ಬಿಟ್ಟಿ​ವೆ.

ಅತಿ ಗಂಭೀರ ಸ್ವರೂ​ಪದ ಚಂಡ​ಮಾ​ರುತ ಈಗ ವಾಯು​ಭಾರ ಕುಸಿ​ತ​ವಾಗಿ ಪರಿ​ರ್ತ​ನೆ​ಯಾ​ಗಿದ್ದು, ಕೆಲವೇ ಗಂಟೆ​ಗ​ಳಲ್ಲಿ ‘ಕಡಿಮೆ ಒತ್ತ​ಡ​’ದ ರೂಪ ತಾಳ​ಲಿದೆ. ಹೀಗಾಗಿ ಮಳೆ ಇನ್ನು ಕ್ಷೀಣಿ​ಸ​ಲಿದೆ. ಆದ​ರೆ ರಾಜ್ಯದ ಉತ್ತರ ಭಾಗ​ವನ್ನು ಚಂಡ​ಮಾ​ರುತ ದಾಟಿ ಹೋಗು​ತ್ತಿ​ರುವ ಕಾರಣ ಅಲ್ಲಿ ಮಾತ್ರ ಹೆಚ್ಚು ಮಳೆ ಆಗ​ಬ​ಹುದು ಎಂದು ಹವಾ​ಮಾನ ಇಲಾಖೆ ಹೇಳಿ​ದೆ.  ಈ ನಡುವೆ ಗುಜ​ರಾತ್‌ (Gujarat) ದಾಟಿ ರಾಜ​ಸ್ಥಾನಕ್ಕೂ (Rajasthan) ಚಂಡ​ಮಾ​ರುತ (Cylone) ಲಗ್ಗೆ ಇಟ್ಟು, ಅಲ್ಲಿ ಹಾದು ಹೋಗು​ತ್ತಿದೆ. ಹೀಗಾಗಿ ರಾಜ​ಸ್ಥಾ​ನದ ಅನೇಕ ಕಡೆ ಶನಿ​ವಾರ ಭಾರಿ ಮಳೆ ಬಿದ್ದಿದೆ. ಅತಿ ಗರಿಷ್ಠ ಮಳೆ ಮೌಂಟ್‌ ಅಬುನಲ್ಲಿ (21 ಸೆಂ.ಮೀ.) ಸುರಿ​ದಿ​ದೆ. ರಾಜ್ಯದ ಅನೇಕ ಭಾಗ​ಗ​ಳಲ್ಲಿ 10 ಸೆಂ.ಮೀ.ಗೂ ಹೆಚ್ಚು ಮಳೆಯಾ​ಗಿ​ದೆ.

ಬಿಪೊರ್‌ಜಾಯ್ ಚಂಡಮಾರುತಕ್ಕೆ ನಲುಗಿದ ಗ್ರಾಮ, 4 ದಿನದ ಕಂದನ ರಕ್ಷಿಸಿದ ಪೊಲೀಸ್!

ಅಮಿತ್‌ ಶಾ ಭೇಟಿ:

ಚಂಡ​ಮಾ​ರು​ತ​ದಿಂದ ಹೆಚ್ಚು ಬಾಧೆಗೆ ಒಳ​ಗಾದ ಜಖಾವು ಬಂದರು ಹಾಗೂ ಮಾಂಡ್ವಿ ಬಂದ​ರಿಗೆ ಶನಿ​ವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amith Shah)ಭೇಟಿ ನೀಡಿ​ದರು. ಬಳಿಕ ಭುಜ್‌​ನಲ್ಲಿ ಅಧಿ​ಕಾ​ರಿ​ಗಳ ಜತೆ ಸಭೆ ನಡೆ​ಸಿದ ಅವರು, ಪರಿ​ಹಾರ ಹಾಗೂ ರಕ್ಷಣಾ ಕಾರ್ಯಾ​ಚ​ರಣೆ, ಮರು​ನಿ​ರ್ಮಾ​ಣ ಕಾರ್ಯ​ಗಳ ಮಾಹಿತಿ ಪಡೆದು ಅಗತ್ಯ ಸಲ​ಹೆ-ಸೂಚ​ನೆ​ಗ​ಳನ್ನು ನೀಡಿ​ದ​ರು. ಈ ವೇಳೆ ಮುಖ್ಯ​ಮಂತ್ರಿ ಭೂಪೇಂದ್ರ ಪಟೇಲ್‌ (Bhupendra Patel) ಇದ್ದ​ರು.

ಅವಿ​ರತ ಶ್ರಮ:

1127 ವಿದ್ಯು​ತ್‌ ಇಲಾಖೆ ತಂಡ​ಗಳು ಹಗ​ಲಿ​ರುಳು ಶ್ರಮಪಟ್ಟು ವಿದ್ಯುತ್‌ ಸಂಪರ್ಕ (electricity conection) ಮರು​ಸ್ಥಾ​ಪಿ​ಸಿವೆ. ಇದೇ ವೇಳೆ ಹೆದ್ದಾ​ರಿ​ಗಳು ಹಾಗೂ ಇತರ ರಸ್ತೆ​ಗಳ ಮೇಲೆ ಬಿದ್ದಿದ್ದ 581 ಮರ​ಗ​ಳನ್ನು ಅರಣ್ಯ ಇಲಾಖೆ ತಂಡ​ಗಳು ತೆರವು ಮಾಡಿ​ವೆ. ಆದರೆ ಕಛ್‌​ನ​ಲ್ಲಿ ಚಂಡ​ಮಾ​ರುತ ಸಾಕಷ್ಟುವಿನಾಶ ಸೃಷ್ಟಿ​ಸಿ ಹೋಗಿದೆ. ದೇವ​ಭೂಮಿ ದ್ವಾರ​ಕಾ (DevBhumi Dwaraka) , ಬನಾಸ್‌ಕಂಠಾ, ಪಾಟಣ್‌ ಸೇರಿ ಹಲವು ಜಿಲ್ಲೆ​ಗ​ಳಲ್ಲಿ ರಸ್ತೆ​ಗಳು, ಕಟ್ಟ​ಡ​ಗಳು, ಮನೆ​ಗಳು, ವಿದ್ಯುತ್‌ ಕಂಬ​ಗ​ಳಿಗೆ ಭಾರಿ ಹಾನಿ​ಯಾ​ಗಿದೆ. ಹೀಗಾಗಿ ಇಲ್ಲಿನ ಮೂಲ​ಸೌ​ಕರ್ಯದ ಸಂಪೂರ್ಣ ಸುಧಾ​ರ​ಣೆಗೆ ಹಲವು ದಿನ​ಗಳೇ ಬೇಕಾ​ಗ​ಲಿ​ವೆ.

ಗುಜರಾತ್‌ ತೀರಕ್ಕೆ ಅಪ್ಪಳಿಸಿದ ಬಿಪರ್‌ ಜಾಯ್: ಮಾಂಡವಿ ಬೀಚ್‌ ಆಪೋಶನ ತೆಗೆದುಕೊಂಡ ಚಂಡಮಾರುತ

ಶನಿ​ವಾರ ಉತ್ತರ ಗುಜ​ರಾ​ತ್‌ನ ಪಾಟಣ್‌, ಬನಾ​ಸ್‌​ಕಂಠಾ ಹಾಗೂ ಸಬ​ರ್‌​ಕಂಠಾ ಜಿಲ್ಲೆ​ಗಳ ಮೇಲೆ ಚಂಡ​ಮಾ​ರುತ ಹಾದು ಹೋದ ಪರಿ​ಣಾಮ ಸರಾ​ಸರಿ 5 ಸೆಂ.ಮೀ. ಮಳೆ ಬಿದ್ದಿದೆ. ಭಾನು​ವಾರ ಇಲ್ಲಿ ಮಳೆ ಕ್ಷೀಣಿ​ಸ​ಲಿದೆ ಎಂದು ಹವಾ​ಮಾನ ಇಲಾಖೆ ಹೇಳಿ​ದೆ. ಇನ್ನು 1 ಲಕ್ಷ ಮಂದಿ ಇನ್ನೂ ನಿರ್ವ​ಸಿತ ಕೇಂದ್ರ​ಗ​ಳಲ್ಲೇ ಇದ್ದಾರೆ. ಪರಿ​ಸ್ಥಿತಿ ಸಂಪೂರ್ಣ ನಿಯಂತ್ರ​ಣಕ್ಕೆ ಬರು​ವ​ವ​ರೆಗೆ ಅವರು ನಿರ್ವ​ಸಿತ ಕೇಂದ್ರ​ಗ​ಳಲ್ಲೇ ಇರ​ಲಿ​ದ್ದಾರೆ ಎಂದು ಅಧಿ​ಕಾ​ರಿ​ಗಳು ಹೇಳಿ​ದ್ದಾ​ರೆ.

Follow Us:
Download App:
  • android
  • ios