Asianet Suvarna News Asianet Suvarna News

UP Elections: ಬಿಜೆಪಿ ಅಗತ್ಯ ನಮಗಿಲ್ಲ, ಅಮಿತ್ ಶಾ ಆಫರ್ ತಿರಸ್ಕರಿಸಿದ ಜಯಂತ್ ಚೌಧರಿ!

* ಉತ್ತರ ಪ್ರದೇಶ ಚುನಾವಣಾ ಅಖಾಡದಲ್ಲಿ ಪಕ್ಷಗಳ ಆಟ

* ಬಿಜೆಪಿ ಅಗತ್ಯ ನಮಗಿಲ್ಲ, ಅಮಿತ್ ಶಾ ಆಫರ್ ತಿರಸ್ಕರಿಸಿದ ಚೌಧರಿ

After Amit Shah Offer Jayant Chaudhary Rejects Post Poll Alliance with BJP pod
Author
Bangalore, First Published Jan 28, 2022, 9:22 AM IST

ಲಕ್ನೋ(ಜ.28): ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ ಅವರ ಆಹ್ವಾನವನ್ನು ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಖ್ಯಸ್ಥ ಜಯಂತ್ ಚೌಧರಿ ತಿರಸ್ಕರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ನಂತರ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದ್ದಾರೆ. ವಾಸ್ತವವಾಗಿ, ನವದೆಹಲಿಯಲ್ಲಿ ಜಾಟ್ ನಾಯಕರೊಂದಿಗಿನ ಸಭೆಯ ಸಂದರ್ಭದಲ್ಲಿ ಅಮಿತ್ ಶಾ ಅವರು ಆರ್‌ಎಲ್‌ಡಿಗೆ ಬಿಜೆಪಿಯ ಬಾಗಿಲು ಯಾವಾಗಲೂ ತೆರೆದಿರುತ್ತದೆ ಎಂದು ಹೇಳಿದ್ದರು.

ಮಾಧ್ಯಮದವರೊಂದಿಗೆ ಮಾತನಾಡಿದ ಜಯಂತ್ ಚೌಧರಿ, ''ರೈತರಿಗೆ ಬಿಜೆಪಿ ಏನೂ ಮಾಡಿಲ್ಲ, ಎರಡು ದಿನಗಳ ಹಿಂದೆ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಬಲ ಪ್ರಯೋಗಿಸಲಾಗಿತ್ತು, ಇಂತಹ ವಾತಾವರಣದಲ್ಲಿ ಬಿಜೆಪಿಯವರು ಹೇಗೆ ಯೋಚಿಸುತ್ತಾರೆ? ಯಾರಾದರೂ ಕೈ ಕುಲುಕುತ್ತಾರೆಯೇ ಅವರು?" ಜಯಂತ್ ತಪ್ಪು ಮನೆಗೆ (ಘಟಬಂಧನ್) ಹೋಗಿದ್ದಾರೆ ಎಂಬ ಅಮಿತ್ ಶಾ ಹೇಳಿಕೆಗೆ, ನಾವು ನಮ್ಮ ಮನೆಯಲ್ಲಿಯೇ ಕುಳಿತಿದ್ದೇವೆ ಎಂದು ಹೇಳಿದರು. ನೀವು ಮೋಸ ಮಾಡಿದ್ದೀರಿ ದೇಶದ ಜನತೆಯ ಜೊತೆಗೆ ಉತ್ತರ ಪ್ರದೇಶದ ಜನತೆ ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದರು ಅವರಿಗೂ ನ್ಯಾಯ ಕೊಡಿಸಲಿಲ್ಲ ಎಂದು ಕಿಡಿ ಕಾರಿದ್ದಾರೆ.

ಆಮಂತ್ರಣ ನನಗಲ್ಲ, ರೈತ ಕುಟುಂಬಗಳಿಗೆ ಕೊಡಿ

ಇದಕ್ಕೂ ಮುನ್ನ ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್ ಚೌಧರಿ ಅವರು ಈ ಕುರಿತು ಟ್ವೀಟ್ ಮಾಡಿ ನನಗಲ್ಲ, ನೀವು ಮನೆಗಳನ್ನು ನಾಶಪಡಿಸಿದ 700 ಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಆಹ್ವಾನ ನೀಡಿ ಎಂದು ಹೇಳಿದ್ದರು! ಉತ್ತರ ಪ್ರದೇಶ ಚುನಾವಣೆಗೆ ಆರ್‌ಎಲ್‌ಡಿ-ಎಸ್‌ಪಿ ಮೈತ್ರಿಯನ್ನು ಉಲ್ಲೇಖಿಸಿದ ಬಿಜೆಪಿ ಸಂಸದ ಪರ್ವೇಶ್ ವರ್ಮಾ, ಜಯಂತ್ ಚೌಧರಿಗೆ ಅವರು (ಅಮಿತ್ ಶಾ) ಚುನಾವಣೆಯ ನಂತರ ಹಲವು ಸಾಧ್ಯತೆಗಳಿವೆ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಅವರು ಒಂದು ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಜಾಟ್ ಸಮುದಾಯದ ಜನರು ಜಯಂತ್ ಅವರೊಂದಿಗೆ ಮಾತನಾಡಲಿದ್ದಾರೆ. ಅವರಿಗಾಗಿ ಬಿಜೆಪಿಯ ಬಾಗಿಲು ಸದಾ ತೆರೆದಿರುತ್ತದೆ ಎಂದಿದ್ದಾರೆ.

Follow Us:
Download App:
  • android
  • ios