Asianet Suvarna News Asianet Suvarna News

ಭಾರತಕ್ಕೆ ಆಗಮಿಸುವ ಆಫ್ಘಾನಿಸ್ತಾನ ನಾಗರೀಕರಿಗೆ 6 ತಿಂಗಳ ವೀಸಾ; ಕೇಂದ್ರ ಸರ್ಕಾರ!

  • ತಾಲಿಬಾನ್ IS-K ಉಗ್ರರ ಅಟ್ಟಹಾಸಕ್ಕೆ ನಲುಗಿದ ಆಫ್ಘಾನಿಸ್ತಾನ
  • ದೇಶ ತೊರೆಯಲು ಕಾಬೂಲ್ ವಿಮಾನ ನಿಲ್ದಾಣ ಹೊರಗೆ ನೂಕು ನುಗ್ಗಲು
  • ಭಾರತಕ್ಕೆ ಆಗಮಿಸುವವರಿಗೆ 6 ತಿಂಗಳ ವೀಸಾ ಘೋಷಿಸಿದ ಕೇಂದ್ರ
Afghan nationals arriving in india will get 6 month visa says Ministry of External Affairs ckm
Author
Bengaluru, First Published Aug 27, 2021, 8:38 PM IST

ನವದೆಹಲಿ(ಆ.27): ನರಕ ದೇಶ ಆಫ್ಘಾನಿಸ್ತಾನ ತೊರೆಯಲು ಅಮಾಯಕ ಜನ ಹಾತೊರೆಯುತ್ತಿದ್ದಾರೆ. ಕಾಬೂಲ್ ವಿಮಾನ ನಿಲ್ದಾಣದ ಚಿತ್ರಣ ಮನಕಲುಕುವಂತಿದೆ. ಇದರ ನಡುವೆ ಬಾಂಬ್ ದಾಳಿಗೆ ಪ್ರಾಣತೆತ್ತವರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತ ಇದುವರೆಗೆ 550 ಮಂದಿಯನ್ನು ಆಫ್ಘಾನಿಸ್ತಾನದಿಂದ ಭಾರತಕ್ಕೆ ಕರೆ ತಂದಿದೆ. ಇದೀಗ ಕೇಂದ್ರ ಸರ್ಕಾರ ಭಾರತಕ್ಕೆ ಆಗಮಿಸುವ ಆಫ್ಘಾನಿಸ್ತಾನ ನಾಗರೀಕರಿಗೆ 6 ತಿಂಗಳ ವೀಸಾ ನೀಡಲಾಗುವುದು ಎಂದಿದೆ.

ಕಾಶ್ಮೀರ ಕೈವಶ ಮಾಡಲು ತಾಲಿಬಾನ್ ನಾಯಕರ ಭೇಟಿಯಾದ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ!

ಭಾರತಕ್ಕೆ ಆಗಮಿಸುವ ಆಫ್ಘಾನ್ ನಾಗರೀಕರಿಗೆ ಸದ್ಯ 6 ತಿಂಗಳ ವೀಸಾ ನೀಡಲಾಗುವುದು. ಸದ್ಯದ ಪರಿಸ್ಥಿತಿಯಲ್ಲಿ ದೀರ್ಘಾವದಿ ವೀಸಾ ನೀಡುವುದು ಒಳಿತಲ್ಲ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯ ಹೇಳಿದೆ. ಭದ್ರತೆ ಹಾಗೂ ತಾಲಿಬಾನ್ ಉಗ್ರರ ಅಟ್ಟಹಾಸ ಕಾರಣದಿಂದ ಆಫ್ಘಾನಿಸ್ತಾನ ನಾಗರೀಕರು ಭಾರತ ಪ್ರಯಾಣಕ್ಕೆ ಇ ವೀಸಾ ಬಳಕೆ ಮಾಡಿ ಎಂದು ಕೇಂದ್ರ ಗೃಹ ಇಲಾಖೆ ಇತ್ತೀಚೆಗೆ ಹೇಳಿತ್ತು. 

ಸದ್ಯದ ಪರಿಸ್ಥಿತಿಗೆ ಅನುಗುಣವಾಗಿ 6 ತಿಂಗಳ ವೀಸಾ ನೀಡಲಾಗುತ್ತಿದೆ. ಇ ಎಮರ್ಜೆನ್ಸಿ ವೀಸಾ ಮೂಲಕ ಭಾರತದಲ್ಲಿ 6 ತಿಂಗಳ ಕಾಲ ಉಳಿದುಕೊಳ್ಳುವ ಅವಕಾಶವಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಆರಿಂದಮ್ ಬಗ್ಚಿ ಹೇಳಿದ್ದಾರೆ. 

ಪಾಕ್ ಶನಿ ಸಂತಾನ ಭಾರತಕ್ಕೂ ಬರುತ್ತಾ? ಮಕ್ಕಳ ಮೇಲೆ ಕ್ರೌರ್ಯ!

ಇದುವರೆಗೆ ಭಾರತ 6 ವಿಮಾನದ ಮೂಲಕ 550 ಮಂದಿಯನ್ನು ಆಫ್ಘಾನಿಸ್ತಾನದಿಂದ ಸ್ಥಳಾಂತರ ಮಾಡಿದೆ. ಈ 550 ಮಂದಿಯಲ್ಲಿ 260 ಮಂದಿ ಭಾರತೀಯರು. 

Follow Us:
Download App:
  • android
  • ios