Asianet Suvarna News Asianet Suvarna News

ಘೋಷಣೆ ಮಾತ್ರವೇ ಮೀಸಲಲ್ಲ: ರಾಜ್ಯಗಳಿಗೆ ಸುಪ್ರೀಂ ಕಿವಿಮಾತು

 ಕೇವಲ ಮೀಸಲು ಘೋಷಣೆ ಮಾಡುವುದರಿಂದ ಅದರ ಲಾಭ ಹಿಂದುಳಿದ ವರ್ಗಗಳಿಗೆ ಸಿಗುವುದಿಲ್ಲ| ಘೋಷಣೆ ಮಾತ್ರವೇ ಮೀಸಲಲ್ಲ: ರಾಜ್ಯಗಳಿಗೆ ಸುಪ್ರೀಂ ಕಿವಿಮಾತು

Affirmative Action Not Limited To Reservation Only Supreme Court pod
Author
Bangalore, First Published Mar 23, 2021, 2:55 PM IST

ನವದೆಹಲಿ(ಮಾ.23): ಕೇವಲ ಮೀಸಲು ಘೋಷಣೆ ಮಾಡುವುದರಿಂದ ಅದರ ಲಾಭ ಹಿಂದುಳಿದ ವರ್ಗಗಳಿಗೆ ಸಿಗುವುದಿಲ್ಲ. ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಅಭಿವೃದ್ಧಿ ಮಾಡಬೇಕಾದಲ್ಲಿ ರಾಜ್ಯ ಸರ್ಕಾರಗಳು ಘೋಷಣೆ ಮಾಡುವುದಕ್ಕೆ ಸೀಮಿತವಾಗದೆ ಇನ್ನಷ್ಟುಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಿವಿಮಾತು ಹೇಳಿದೆ.

ಮರಾಠ ಮೀಸಲು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ವೇಳೆ ಸೋಮವಾರ ಮಧ್ಯಪ್ರವೇಶ ಮಾಡಿದ ನ್ಯಾ. ಅಶೋಕ್‌ ಭೂಷಣ್‌ ನೇತೃತ್ವದ ಪೀಠ, ‘ಸರ್ಕಾರಗಳೇಕೆ ಶಿಕ್ಷಣವನ್ನು ಪ್ರೋತ್ಸಾಹಿಸಬಾರದು? ಮತ್ತಷ್ಟುಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬಾರದು? ಈ ಲೆಕ್ಕಾಚಾರವು ಮೀಸಲು ಹೊರತಾಗಿ ಮತ್ತಿನಿನ್ನೇದರೂ ಬದಲಾವಣೆಯಾಗಲೇಬೇಕು. ಕೇವಲ ಘೋಷಣೆ ಮಾಡುವುದಷ್ಟೇ ಮೀಸಲು ಅಲ್ಲ’ ಎಂದು ಕಿವಿ ಮಾತು ಹೇಳಿತು.

ಈ ವೇಳೆ ಜಾರ್ಖಂಡ್‌ ಸರ್ಕಾರದ ಪರವಾಗಿ ವಾದ ಮಂಡಿಸಿದ ಕಪಿಲ್‌ ಸಿಬಲ್‌, ‘ಕೋರ್ಟ್‌ ಪ್ರಸ್ತಾಪಿಸಿರುವ ವಿಷಯ ರಾಜ್ಯಗಳ ಆರ್ಥಿಕ ಸಂಪನ್ಮೂಲ, ಶಾಲೆಗಳು ಮತ್ತು ಶಿಕ್ಷಕರ ಸಂಖ್ಯೆಯನ್ನು ಅವಲಂಬಿಸಿದೆ. ಮೀಸಲು ಪ್ರಮಾಣ ಕೂಡಾ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಿಭಿನ್ನವಾಗಿದೆ. ಹೀಗಾಗಿ ಎಲ್ಲಾ ರಾಜ್ಯಗಳಿಗೂ ಏಕರೂಪ ಕಾನೂನು ಮಾಡಲಾಗದು ಎನ್ನುವ ಮೂಲಕ, ಮೀಸಲು ನಿಗದಿ ಮಿತಿಯನ್ನು ರಾಜ್ಯಗಳಿಗೆ ಬಿಡಬೇಕು ಎಂದು ಪರೋಕ್ಷವಾಗಿ ಹೇಳಿದರು

Follow Us:
Download App:
  • android
  • ios