ಹಿಮಾಲಯದಂತಹ ದುರ್ಗಮ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕುವುದಕ್ಕೆ ‘ಇಂಡಿಯನ್‌ ಮಲ್ಟಿರೋಲ್‌  ಹೆಲಿಕಾಪ್ಟರ್‌ (ಐಎಂಆರ್‌ಎಚ್‌) ಎಚ್‌ಎಎಲ್‌ ಫ್ಯಾಕ್ಟರಿಯಲ್ಲಿ ಸಿದ್ಧವಾಗುತ್ತಿದೆ. 

ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ ವಾರ್ತೆ 

ಬೆಂಗಳೂರು: ಹಿಮಾಲಯದಂತಹ ದುರ್ಗಮ ಗಡಿ ಪ್ರದೇಶದಲ್ಲಿ ಚೀನಾ ಮತ್ತು ಪಾಕಿಸ್ತಾನದ ಉಪಟಳಕ್ಕೆ ಕಡಿವಾಣ ಹಾಕುವುದಕ್ಕೆ ‘ಇಂಡಿಯನ್‌ ಮಲ್ಟಿರೋಲ್‌ ಹೆಲಿಕಾಪ್ಟರ್‌ನ್ನು (ಐಎಂಆರ್‌ಎಚ್‌) ಎಚ್‌ಎಎಲ್‌ ಫ್ಯಾಕ್ಟರಿಯಲ್ಲಿ ಸಿದ್ಧವಾಗುತ್ತಿದೆ. ಚೀನಾ ಮತ್ತು ಪಾಕಿಸ್ತಾನ ಗಡಿ ಪ್ರದೇಶದ ಕಣಿವೆ ಸಾಲು ಮತ್ತು ಹಿಮಾಲಯ ಪ್ರದೇಶದಲ್ಲಿ ನಿಗಾ ವಹಿಸುವುದಕ್ಕೆ ಯುದ್ಧ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೆ ಭಾರತೀಯ ರಕ್ಷಣಾ ಇಲಾಖೆಯು ಈ ಹೆಲಿಕಾಪ್ಟರ್‌ ಅಭಿವೃದ್ಧಿ ಪಡಿಸಲು ಮುಂದಾಗಿದೆ.

ಇಂದೊಂದು ಮುಂದಿನ ಪೀಳಿಗೆಯ ಹೆಲಿಕಾಪ್ಟರ್‌ ಆಗಿದ್ದು, ಸಿವಿಲ್‌ ಮತ್ತು ಯುದ್ಧ (war) ಸಂದರ್ಭದಲ್ಲಿ ಭಾರತೀಯ ರಕ್ಷಣಾ ಪಡೆಗೆ (Indian Defense Force) ಬೆಂಬಲವಾಗಿ ನಿಲ್ಲುವ ಹೆಲಿಕಾಪ್ಟರ್‌ ಆಗಿದೆ. ಎಚ್‌ಎಎಲ್‌ ಇಂಡಿಯನ್‌ ಮಲ್ಟಿರೋಲ್‌ ಹೆಲಿಕಾಪ್ಟರ್‌ನ (ಐಎಂಆರ್‌ಎಚ್‌) ವಿನ್ಯಾಸ ಸಿದ್ಧಪಡಿಸಿ ಅನುಮೋದನೆ ನೀಡಲಾಗಿದೆ. ರಕ್ಷಣಾ ಪಡೆಯ ಕ್ಯಾಬಿನೆಟ್‌ ಕಮಿಟಿ ಸೆಕ್ಯೂರಿಟಿ (ಸಿಸಿಎಸ್‌) ಅನುಮೋದನೆ ಬಾಕಿ ಇದೆ.

ನಾಲ್ಕು ವರ್ಷದಲ್ಲಿ ಹೆಲಿಕಾಪ್ಟರ್‌ ಸಿದ್ಧ:

ಅನುಮೋದನೆ ಲಭ್ಯವಾದ ನಾಲ್ಕು ವರ್ಷದಲ್ಲಿ ಮೊದಲ ಹೆಲಿಕಾಪ್ಟರ್‌ (Helicopter) ಹಾರಾಟಕ್ಕೆ ಸಿದ್ಧವಾಗಲಿದೆ. ಅದಾದ ಬಳಿಯ ಯುದ್ಧ ಕಾರ್ಯಾಚರಣೆಗೆ ತಂತ್ರಜ್ಞಾನ ಅಭಿವೃದ್ಧಿ ಪಡಿಸುವುದಕ್ಕೆ 4 ವರ್ಷ ಬೇಕಾಗಲಿದೆ. ಒಟ್ಟು 8 ವರ್ಷದಲ್ಲಿ ಈ ಹೆಲಿಕಾಪ್ಟರ್‌ ಭಾರತೀಯ ಸೇನೆಯ ಸೇವೆಗೆ ಸಿದ್ಧವಾಗಲಿದೆ. ಈ ಹೆಲಿಕಾಪ್ಟರ್‌ಗೆ 7.26 ಎಂಎಂ ಬುಲೆಟ್‌ ಹಾಗೂ 42 ಎ ಮಿಸೈಲ್ಸ್‌ ಉಡಾವಣೆ ತಂತ್ರಜ್ಞಾನ ಅಳವಡಿಕೆ ಮಾಡಲಾಗುವುದು ಎಂದು ಎಚ್‌ಎಎಲ್‌ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಿ-17ಗೆ ಪರ್ಯಾಯ

ರಷ್ಯಾದ ಮಿ-17 ಹೆಲಿಕಾಪ್ಟರ್‌ ಹಲವು ದಶಕದಿಂದ ಭಾರತೀಯ ವಾಯು ಸೇನೆಯಲ್ಲಿ (Indian Airforce) ಕಾರ್ಯನಿರ್ವಹಿಸುತ್ತಿದೆ. ಹಳೆಯ ತಂತ್ರಜ್ಞಾನ (Technology) ಮತ್ತು ದುರ್ಗಮ ಪ್ರದೇಶದಲ್ಲಿ ಈ ಹೆಲಿಕಾಪ್ಟರ್‌ ಹಾರಾಟ ನಡೆಸುವುದಕ್ಕೆ ಸಾಧ್ಯವಿಲ್ಲ. ಜತೆಗೆ, ಹಳೆ ಹೆಲಿಕಾಪ್ಟರ್‌ ಆಗಿರುವುದರಿಂದ ಇದರ ನಿರ್ವಹಣೆ ವೆಚ್ಚವೂ ಅತ್ಯಧಿಕವಾಗಿದೆ. ಹಾಗಾಗಿ, ಮಿ-17 ಹೆಲಿಕಾಪ್ಟರ್‌ಗೆ ಪರ್ಯಾಯವಾಗಿ ಐಎಂಆರ್‌ಎಚ್‌ ತಯಾರಿಕೆಗೆ ಭಾರತೀಯ ವಾಯು ಸೇನೆ ಸೂಚಿಸಿದ ಹಿನ್ನೆಲೆಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಐಎಂಆರ್‌ಎಚ್‌ ವಿಶೇಷಗಳು:

ಈ ಹೆಲಿಕಾಪ್ಟರ್‌ (IMRH)14,000 ಕೇಜಿ ಹೊತ್ತೊಯ್ಯ ಬಲ್ಲ ಸಾಮರ್ಥ್ಯ ಮತ್ತು 24 ಆಸನ ವ್ಯವಸ್ಥೆಯನ್ನು ಹೊಂದಿದೆ. ಇದನ್ನು 36 ಆಸನಕ್ಕೆ ಹೆಚ್ಚಿಸಬಹುದಾಗಿದೆ. 260 ಕಿ.ಮೀ. ವೇಗದಲ್ಲಿ ಚಲಿಸಲಿದೆ. ಸಮುದ್ರ ಮಟ್ಟದಿಂದ 7 ಕಿ.ಮೀ ಎತ್ತರದಲ್ಲಿ ಹಾರಾಟ ನಡೆಸಬಲ್ಲದು. ಎರಡು ಎಂಜನ್‌ಗಳನ್ನು ಹೊಂದಿದೆ.

ಏರೋ ಇಂಡಿಯಾದಲ್ಲಿ ದಾಖಲೆಯ 80000 ಕೋಟಿ ರು. ಒಪ್ಪಂದಕ್ಕೆ ಸಹಿ

360 ಕೋಟಿ ಯೋಜನೆ:

ಐಎಂಆರ್‌ಎಚ್‌ ಅನ್ನು ಒಟ್ಟು .360 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಭಾರತೀಯ ರಕ್ಷಣಾ ಇಲಾಖೆ ಹಾಗೂ ಮಿತ್ರ ರಾಷ್ಟ್ರಗಳಿಗೆ ರಫ್ತು ಸೇರಿದಂತೆ ಒಟ್ಟು 500 ಹೆಲಿಕಾಪ್ಟರ್‌ ತಯಾರಿಸುವ ಯೋಜನೆಯನ್ನು ಎಚ್‌ಎಎಲ್‌ ಹಾಕಿಕೊಂಡಿದೆ. ಮಿ-17 ಹೆಲಿಕಾಪ್ಟರ್‌ ತುಂಬಾ ವರ್ಷದಿಂದ ಕಾರ್ಯ ನಿರ್ವಹಿಸುತ್ತಿದೆ. ಅದರ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಅದಕ್ಕೆ ಪರ್ಯಾಯವಾಗಿ ಮೇಕ್‌ ಇನ್‌ ಇಂಡಿಯಾ ಅಡಿ ಐಎಂಆರ್‌ಎಚ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಅನುಮೋದನೆ ಸಿಕ್ಕರೆ ನಾಲ್ಕು ವರ್ಷದಲ್ಲಿ ಹೆಲಿಕಾಪ್ಟರ್‌ ಹಾರಾಟ ನಡೆಸಲಿದೆ. -ರಾಮಮೂರ್ತಿ, ಯೋಜನಾ ವ್ಯವಸ್ಥಾಪಕ, ಎಚ್‌ಎಎಲ್‌.