ನಾಗ್ಪುರ(ಜ.09): ಸಾವು ಹೇಗೆಲ್ಲಾ ಹೊಂಚು ಹಾಕಿ ಕಾದಿರುತ್ತದೆ ನೋಡಿ. ಸೆಕ್ಸ್‌ನಲ್ಲಿ ತೊಡಗಿದ್ದ ವೇಳೆ ಕುತ್ತಿಗೆ ಬಿಗಿದ್ದಿದ್ದ ಹಗ್ಗ ಬಿಗಿದು ವ್ಯಕ್ತಿಯೊಬ್ಬ ಉಸಿರುಗಟ್ಟಿಸಾವನ್ನಪ್ಪಿರುವ ವಿಚಿತ್ರ ಘಟನೆ ನಾಗ್ಪುರದಲ್ಲಿ ನಡೆದಿದೆ.

ಆಗಿದ್ದೇನೆಂದರೆ, 30 ವರ್ಷದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇವರಿಬ್ಬರೂ ಗುರುವಾರ ರಾತ್ರಿ ಲಾಡ್ಜ್‌ವೊಂದಕ್ಕೆ ಹೋಗಿದ್ದರು. ಈ ವೇಳೆ ನೈಲಾನ್‌ ಹಗ್ಗದಿಂದ ಆತನ ಕೈ​ ಕಾಲುಗಳನ್ನು ಕುರ್ಚಿಗೆ ಕಟ್ಟಿಸೆಕ್ಸ್‌ನಲ್ಲಿ ಮಹಿಳೆ ತೊಡಗಿದ್ದಳು. ಇಷ್ಟು ಸಾಲದು ಎಂಬಂತೆ ಇನ್ನೊಂದು ಹಗ್ಗವನ್ನು ಕುತ್ತಿಗೆಗೆ ಕಟ್ಟಿವಾಷ್‌ರೂಮ್‌ಗೆ ಹೋಗಿದ್ದಳು.

ಆದರೆ, ಆಕೆ ಬರುವಷ್ಟರಲ್ಲಿ ಆತ ಕುರ್ಚಿಯಿಂದ ಜಾರಿಬಿದ್ದಿದ್ದರಿಂದ ಕುತ್ತಿಗೆ ಬಿಗಿದ್ದ ಹಗ್ಗ ಉರುಳಾಗಿ ಪರಿಣಮಿಸಿದ್ದು ಉಸಿರುಗಟ್ಟಿಸಾವು ಸಂಭವಿಸಿದೆ.