2023-24ನೇ ಸಾಲಿನಲ್ಲಿ 3 ಲಕ್ಷ ಟನ್‌ ಸಂಗ್ರಹ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ ಅದನ್ನು ಇದೀಗ 5 ಲಕ್ಷ ಟನ್‌ಗೆ ಏರಿಸಿದೆ. ಹೀಗಾಗಿ ಹಾಲಿ ಇರುವ ಅಂದಾಜು 3 ಲಕ್ಷ ಟನ್‌ ಜೊತೆಗೆ ಹೊಸದಾಗಿ 2 ಲಕ್ಷ ಟನ್‌ ಈರುಳ್ಳಿಯನ್ನು ನ್ಯಾಫೆಡ್‌ ಹಾಗೂ ಎನ್‌ಸಿಸಿಎಫ್‌ಗಳ ಮೂಲಕ ಸಂಗ್ರಹಕ್ಕೆ ಮುಂದಾಗಿದೆ.

ನವದೆಹಲಿ(ಆ.21): ಟೊಮೆಟೋ ಬೆನ್ನಲ್ಲೇ ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದು, ಇದನ್ನು ಎದುರಿಸಲು ಹೆಚ್ಚುವರಿಯಾಗಿ 2 ಲಕ್ಷ ಟನ್‌ ಈರುಳ್ಳಿ ಸಂಗ್ರಹ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬೆಲೆ ನಿಯಂತ್ರಣದ ನಿಟ್ಟಿನಲ್ಲಿ ಇತ್ತೀಚೆಗೆ ಕೇಂದ್ರ ಸರ್ಕಾರ ಮಾರುಕಟ್ಟೆಗೆ 3 ಲಕ್ಷ ಟನ್‌ ಈರುಳ್ಳಿ ಬಿಡುಗಡೆ ಮಾಡಿತ್ತು, ಜೊತೆಗೆ ಈರುಳ್ಳಿ ರಫ್ತಿಗೆ ಶೇ.40ರಷ್ಟು ತೆರಿಗೆ ಹಾಕಿತ್ತು. ಅದರ ಬೆನ್ನಲ್ಲೇ ಮುಂದಿನ ದಿನಗಳಲ್ಲಿ ಮತ್ತಷ್ಟುಏರಿಕೆ ಸಾಧ್ಯತೆ ಊಹಿಸಿರುವ ಸರ್ಕಾರ ಹೆಚ್ಚುವರಿ ಸಂಗ್ರಹಕ್ಕೆ ಮುಂದಾಗಿದೆ.

2023-24ನೇ ಸಾಲಿನಲ್ಲಿ 3 ಲಕ್ಷ ಟನ್‌ ಸಂಗ್ರಹ ಮಾಡಲು ನಿರ್ಧರಿಸಿದ್ದ ಕೇಂದ್ರ ಸರ್ಕಾರ ಅದನ್ನು ಇದೀಗ 5 ಲಕ್ಷ ಟನ್‌ಗೆ ಏರಿಸಿದೆ. ಹೀಗಾಗಿ ಹಾಲಿ ಇರುವ ಅಂದಾಜು 3 ಲಕ್ಷ ಟನ್‌ ಜೊತೆಗೆ ಹೊಸದಾಗಿ 2 ಲಕ್ಷ ಟನ್‌ ಈರುಳ್ಳಿಯನ್ನು ನ್ಯಾಫೆಡ್‌ ಹಾಗೂ ಎನ್‌ಸಿಸಿಎಫ್‌ಗಳ ಮೂಲಕ ಸಂಗ್ರಹಕ್ಕೆ ಮುಂದಾಗಿದೆ.

ಸಮಯಕ್ಕೆ ಸರಿಯಾಗಿ ಬಾರದ ಮಳೆ‌, ಈರುಳ್ಳಿ ಬಿತ್ತನೆ ಮಾಡದ ರೈತ, ಬೆಲೆ ಗಗನಕ್ಕೇರುವ ಸಾಧ್ಯತೆ!

ಹೆಚ್ಚುವರಿಯಾಗಿ ಸಂಗ್ರಹಿಸಿರುವ ಈರುಳ್ಳಿಯನ್ನು ದೇಶದಲ್ಲಿ ಯಾವ ಪ್ರದೇಶದಲ್ಲಿ ಬೆಲೆ ಹೆಚ್ಚಿದೆಯೋ ಅಲ್ಲಿ ನ್ಯಾಫೆಡ್‌ ಕೇಂದ್ರಗಳಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ಈಗಾಗಲೇ 1400 ಟನ್‌ ಈರುಳ್ಳಿ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದ ಚಿಲ್ಲರೆ ಮಾರುಕಟ್ಟೆಗೂ ಕೇಜಿಗೆ 25 ರು.ನಂತೆ ರಿಯಾಯ್ತಿ ದರದಲ್ಲಿ ಮಾರಾಟ ಮಾಡಲಾಗುವುದು.