ಚೆನ್ನೈ(ಏ.06): ಪಂಚರಾಜ್ಯ ಚುನಾವಣೆ ಸದ್ಯ ಭಾರೀ ಕುತೂಹಲ ಮೂಡಿಸಿದೆ. ಇಂದು ಏಪ್ರಿಲ್ 6 ರಂದು ಐದೂ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಮತದಾರರು ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. ಇನ್ನು ಈ ಐದು ರಾಜ್ಯಗಳ ಪೈಕಿ ತಮಿಳುನಾಡಿನ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ಹೀಗಿರುವಾಗ ಇಲ್ಲಿ ನಡೆಯಲಿರುವ ಏಕ ಹಂತದ ಮತದಾನ ಪ್ರಕ್ರಿಯೆ ಮುಂದುವರೆದಿದೆ. ಈ ಮಧ್ಯೆ ತಮಿಳು ನಟ 'ದಳಪತಿ' ವಿಜಯ್ ಕೂಡಾ ಮತ ಚಲಾಯಿಸಿದ್ದು, ಇವರು ಪೋಲಿಂಗ್‌ ಬೂತ್‌ಗೆ ಸೈಕಲ್‌ನಲ್ಲಿ ಆಗಮಿಸಿರುವುದು ಭಾರೀ ಸದ್ದು ಮಾಡಿದೆ.

ವಿಜಯ್‌ನ ದಳಪತಿ 65 ಲಾಂಚ್ ಕಾರ್ಯಕ್ರಮದಲ್ಲಿ ಹಿರೋಯಿನ್ ಮಿಸ್

ಹೌದು ಚೆನ್ನೈನ ನೀಲಾಂಕರೈನಲ್ಲಿರುವ ವೆಲ್ಸ್​ ಇಂಟರ್​ನ್ಯಾಷನಲ್​ ಪ್ರೀ ಸ್ಕೂಲ್​ನ ಮತಗಟ್ಟೆಗೆ ನಟ ವಿಜಯ್‌ ಸೈಕಲ್ ಸವಾರಿ ಮಾಡಿ ಬಂದಿದ್ದಾರೆ. ಸ್ಟಾರ್‌ ನಟ ಕಾರು, ಬೈಕ್‌ ಬಿಟ್ಟು ಸೈಕಲ್‌ನಲ್ಲಿ ಬರುತ್ತಿರುವುದನ್ನು ಕಂಡ ಅವರ ಅಭಿಮಾನಿಗಳು ಸೆಲ್ಫೀ ತೆಗೆಸಿಕೊಳ್ಳಲು ಮುಂದಾಗಿದ್ದಾರೆ. ಆದರೀಗ ಸದ್ಯ ನಟ ವಿಜಯ್ ಮತ ಚಲಾಯಿಸಲು ಸೈಕಲ್‌ನಲ್ಲಿ ಬಂದಿದ್ದೇಕೆ? ಇದು ಸರಳತೆಯೇ ಅಥವಾ ಅವರ ಈ ನಡೆ ಹಿಂದೆ ಬೇರಾವುದಾದರೂ ಉದ್ದೇಶವಿದೆಯೇ ಎಂಬುವುದು ಚರ್ಚೆ ಸೃಷ್ಟಿಸಿದೆ. 

ಮಾಸ್ಟರ್ ಹಿಂದಿ ರಿಮೇಕ್‌..! ವಿಜಯ್ ರೋಲ್ ಮಾಡ್ತಾರಾ ಸಲ್ಮಾನ್ ?

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಖಂಡನೆ?

ನಟ ವಿಜಯ್‌ ಕೇಂದ್ರ ಸರ್ಕಾರದ ವಿರುದ್ಧ ಸೈಲೆಂಟ್‌ ಆಗಿ ಪ್ರತಿಭಟನೆ ನಡೆಸಿದ್ದಾರೆ ಎಂಬ ಮಾತುಗಳು ಜೋರಾಗಿವೆ. ಇಂಧನ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದ್ದು, ಇದು ಜನ ಸಾಮಾಣಗ್ಯರ ನಿದ್ದೆಗೆಡಿಸಿದೆ. ಸರ್ಕಾರ ಈ ಕ್ರಮವನ್ನು ಖಂಡಿಸುವ ಸಲುವಾಗಿ ವಿಜಯ್ ಮತ ಚಲಾಯಿಸಲು ಹೀಗೆ ಬಂದಿದ್ದರೆನ್ನಲಾಗಿದೆ. ಅದೇನಿದ್ದರೂ ತಮ್ಮ ನೆಚ್ಚಿನ ನಟ ಬಿಸಿಲಿನಲ್ಲೂ, ಫೇಸ್​ ಮಾಸ್ಕ್​ ಧರಿಸಿ ಸೈಕಲ್ ತುಳಿದುಕೊಂಡು ಬಂದಿದ್ದಾರೆ, ಅದು ಸುಲಭವಲ್ಲ ಎಂಬುವುದು ಅಭಿಮಾನಿಗಳ ಮಾತಾಗಿದೆ.