Asianet Suvarna News Asianet Suvarna News

Punjab Elections: ನಟ ಸೋನು ಸೂದ್‌ ಸಹೋದರಿ ಮಾಳವಿಕಾ ರಾಜಕೀಯ ಪ್ರವೇಶ!

*ಸೋನು ಸೂದ್‌ ಸಹೋದರಿ ರಾಜಕೀಯಕ್ಕೆ ಎಂಟ್ರಿ
*ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ!
*ಪಕ್ಷದ ಆಯ್ಕೆಯ ಬಗ್ಗೆ ಸ್ಪಷ್ಟನೆ ನೀಡದ ಸೋನು ಸೂದ್

Actor Sonu Sood Sister Malavika Sood To Contest Punjab Assembly Elections Suspense On Party mnj
Author
Bengaluru, First Published Nov 14, 2021, 7:02 PM IST
  • Facebook
  • Twitter
  • Whatsapp

ಚಂಡೀಗಢ(ನ.14): ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ (Punjab Elections) ತಮ್ಮ ಸಹೋದರಿ ಮಾಳವಿಕಾ ಸೂದ್ (Malavika Sood) ಸ್ಪರ್ಧಿಸಲಿದ್ದಾರೆ ಎಂದು ನಟ ಸೋನು ಸೂದ್ (Sonu Sood) ರವಿವಾರ ಘೋಷಿಸಿದರು. ಆದರೆ ಪಕ್ಷದ ಆಯ್ಕೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಕೋವಿಡ್ ಬಿಕ್ಕಟ್ಟಿನ ಸಮಯದಲ್ಲಿ ಲಕ್ಷಾಂತರ ಜನರಿಗೆ ಸಹಾಯ ಮಾಡುವ ಮೂಲಕ ಸೋನು ಸೂದ್‌ ಅಪಾರ ಪ್ರಶಂಸೆ ಗಳಿಸಿದ್ದರು. ರಾಜಧಾನಿ ಚಂಡೀಗಢದಿಂದ (Chabdigarh) ಸುಮಾರು 170 ಕಿಮೀ ದೂರದಲ್ಲಿರುವ ಮೊಗಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸೋನು ಅವರ ತಂಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಘೋಷಣೆ ಮಾಡಿದರು.

ಸೂದ್ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ (Charanjit singh Channi) ಅವರನ್ನು ಭೇಟಿ ಮಾಡಿದ್ದರು. ಈ ಹಿಂದೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Aravind Kejrival) ಅವರನ್ನು ಕೂಡ ಸೋನು ಸೂದ್ ಭೇಟಿ ಮಾಡಿದ್ದರು. ಈ ವೇಳೆ ಸೂದ್‌ರನ್ನು  ಶಾಲಾ ವಿದ್ಯಾರ್ಥಿಗಳಿಗೆ "ದೇಶ್ ಕಾ ಮೆಂಟರ್ಸ್- Desh ka Mentors" ಕಾರ್ಯಕ್ರಮಕ್ಕೆ ಬ್ರಾಂಡ್ ಅಂಬಾಸಿಡರ್ ಎಂದು ಕೇಜ್ರಿವಾಲ್ ಘೋಷಿಸಿದ್ದರು. "ರಾಜಕೀಯ  ಬಗ್ಗೆ  ಈಗ ಚರ್ಚಿಸಲಾಗಿಲ್ಲ. ಸದ್ಯಕ್ಕೆ ನಾವು ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ" ಎಂದು ಸೋನು ಸೂದ್ ಸುದ್ದಿಗಾರರಿಗೆ ತಿಳಿಸಿದರು.

ಚಾರಿಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ!

ಸೋನು ಸೂದ್ ಅವರನ್ನು‌ ಹಲವಾರು ರಾಜಕಾರಣಿಗಳು ಮತ್ತು ಪಕ್ಷಗಳು ಗೌರವಿಸಿದ್ದರೂ, ಸೋನು ಸೂದ್ ಯಾವಾಗಲೂ ತಮ್ಮ ಚಾರಿಟಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದರು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರೊಂದಿಗಿನ ಭೇಟಿಯು ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (Aam Aadmi Party) ಅಭ್ಯರ್ಥಿಯಾಗಿ ರಾಜಕೀಯ ಪದಾರ್ಪಣೆಯ ವದಂತಿಗಳನ್ನು ಹುಟ್ಟುಹಾಕಿತ್ತು.

IT ದಾಳಿಗೆ ಹೆದರಬೇಡಿ, ನಿಮ್ಮ ಕಾರ್ಯ ಮುಂದುವರೆಸಿ : ಕೆಟಿ ರಾಮರಾವ್!

ಕೋವಿಡ್ ಬಿಕ್ಕಟ್ಟಿನ (Covid) ಸಂದರ್ಭದಲ್ಲಿ ಬಾಲಿವುಡ್‌ (Bollywood) ನಟನ ಲೋಕೋಪಕಾರವು ಅವರಿಗೆ "ವಲಸಿಗರ ಮೆಸ್ಸಿಹ್ - messiah of migrants" ಎಂಬ  ಮನ್ನಣೆ ಗಳಿಸಿತ್ತು. ಲಾಕ್‌ಡೌನ್‌ನಲ್ಲಿ ಸಿಲುಕಿರುವ ಮತ್ತು ಅಸಹಾಯಕರಾಗಿದ್ದ ನೂರಾರು ವಲಸಿಗರನ್ನು (Migrant) ಅವರ ಸ್ವಂತ ರಾಜ್ಯಕ್ಕೆ ತಲುಪಿಸಲು, ಸೋನು ಸೂದ್ ಬಸ್‌ಗಳು, ರೈಲುಗಳು ಮತ್ತು ವಿಮಾನಗಳ ವ್ಯವಸ್ಥೆ ಸಹ ಮಾಡಿದ್ದರು. ಈ ವರ್ಷದ ಆರಂಭದಲ್ಲಿ ಕೊರೊನಾ ಎರಡನೇ ಅಲೆಯ ಸಮಯದಲ್ಲಿ ಕೂಡ ಅವರು ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ವ್ಯವಸ್ಥೆ ಮಾಡಿದ್ದರು. ಸೋನು ಸೂದ್‌ ಈ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು.

ಮತ್ತೆ ಕಾಂಗ್ರೆಸ್‌ ರಣನೀತಿ ರೂಪಿಸ್ತಾರಾ ಪಿಕೆ? ಸಿಧು ಕೊಟ್ಟ ಉತ್ತರವಿದು!

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Poll strategist Prashant Kishor) 2017 ರ ವಿಧಾನಸಭಾ ಚುನಾವಣೆಯಲ್ಲಿ ಅಮರಿಂದರ್ ಸಿಂಗ್ (Amarinder Singh) ಅವರ ಪ್ರಚಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಪಂಜಾಬ್‌ನಲ್ಲಿ 2017ರ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು. 

Kartarpur Sahib Corridor ತೆರೆಯಲು ಮೋದಿ ಭೇಟಿಯಾದ ಬಿಜೆಪಿ ನಿಯೋಗ!

ಇದಾದ ಬಳಿಕ ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ (Punjab Chief Minister Charanjit Singh Channi) ಅವರು ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಪ್ರಚಾರದ ರಣತಂತ್ರ ಸಿದ್ಧಪಡಿಸಲು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಸೂಚಿಸಿದ್ದರು. ಹೀಗಿರುವಾಗ ರಾಜ್ಯದಲ್ಲಿ ಪ್ರಶಾಂತ್ ಕಿಶೋರ್ ಅವರ ಸಹಾಯ ಕಾಂಗ್ರೆಸ್ ತೆಗೆದುಕೊಳ್ಳುತ್ತದೆಯೇ ಎಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪ್ರಶ್ನಿಸಿದಾಗ ಅವರು ಈ ಬಗ್ಗೆ ಉತ್ತರ ಕೊಟ್ಟಿದ್ದಾರೆ.

ಹೌದು ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ (Prashant Kishor) ಅವರ ಬೆಂಬಲವನ್ನು ತೆಗೆದುಕೊಳ್ಳುತ್ತದೆಯೇ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ, ಹೀಗೆಂದು ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ನವಜೋತ್ ಸಿಂಗ್ ಸಿಧು (Navjot Singh Sidhu) ತಿಳಿಸಿದ್ದಾರೆ

Follow Us:
Download App:
  • android
  • ios