ಮುಂಬೈ(ಜು.  20)  ಈ ಆನ್ ಲೈನ್ ಜೂಮ್ ಆಪ್ ನಲ್ಲಿ ಎಡವಟ್ಟುಗಳನ್ನು ನೋಡಿದ್ದೇವೆ. ಬ್ರೆಜಿಲ್ ಅಧ್ಯಕ್ಷರ ಮೀಟಿಂಗ್ ನಡೆಯುತ್ತಿದ್ದಾಗಲೆ ವ್ಯಕ್ತಿಯೊಬ್ಬ ಬೆತ್ತಲೆ ಓಡಾಡುತ್ತಿದ್ದ. ಆದರೆ ಇದೀಗ ಲೈವ್ ಟಿವಿ ಶೋ ಒಂದರಲ್ಲಿ ಎಡವಟ್ಟಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. 

ಪ್ರಖ್ಯಾತ ನಿರೂಪಕ ಅರ್ನಾಬ್ ಗೋಸ್ವಾಮಿ ನಡೆಸಿಕೊಡುವ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ನಟಿ ಕಸ್ತೂರಿ ಶಂಕರ್ ತಿಂಡಿ ತಿನ್ನುತ್ತಿದ್ದರು!

ಸನ್ನಿ ಹೆಸರು ಬಳಸಿದ್ದ ಅರ್ನಾಬ್ ಬೆನ್ನು ಬಿದ್ದ ಕಾಂಡೋಮ್ ಕಂಪನಿ!

ಈ ವಿಡಿಯೋ ಕ್ಲಿಪ್ಪಿಂಗ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡಿದೆ. ಇದಾದ ಮೇಲೆ ಸ್ಪಷ್ಟನೆ ಕೊಟ್ಟ ನಟಿ ಸುಮಾರು ಒಂದು ಗಂಟೆ ಕಾಲ ನಾನು ಲೈವ್ ನಲ್ಲಿ ಕುಳಿತಿದ್ದರೂ ಅರ್ನಾಬ್ ಮಾತನಾಡುವ ಅವಕಾಶ ಕೊಡಲಿಲ್ಲ. ಹಾಗಾಗಿ ತಿಂಡಿ ತಿಂದೆ ಎಂದಿದ್ದಾರೆ. ಆದರೆ ವಿಡಿಯೋ ಸ್ವಿಷ್ ಆಫ್ ಮಾಡುವುದನ್ನು ಮರೆತಿದ್ದೆ ಎಂದು ತಿಳಿಸಿದ್ದಾರೆ.

ಇಲ್ಲಿ ಕ್ಷಮೆ ಯಾಚಿಸುವ ಪ್ರಶ್ನೆ ಬರುವುದೇ ಇಲ್ಲ. ಯಾಕೆಂದರೆ ಅಂಥ ದೊಡ್ಡ ಅಪರಾಧ ಏನೂ ನಡೆದಿಲ್ಲ ಎಂದು ನಟಿ ಸ್ಪಷ್ಟನೆ ಸಹ ನೀಡಿದ್ದಾರೆ. ಒಟ್ಟಿನಲ್ಲಿ ಟಿವಿ ಶೋ ನೋಡುತ್ತಿದ್ದ ಮಂದಿ ಅರೇ ಇದೇನಾಗುತ್ತಿದೆ ಎಂದು ಒಂದು ಕ್ಷಣ ಅಚ್ಚರಿಯಿಂದ ನೋಡುವ ಪ್ರಸಂಗ ನಡೆದು ಹೋಗಿದೆ.