Asianet Suvarna News Asianet Suvarna News

ದೆಹಲಿ ಚುನಾವಣೆ ಗೆದ್ದ 24 ಗಂಟೆಯೊಳಗೆ ಆಮ್ ಆದ್ಮಿಗೆ ಮತ್ತೊಂದು ಜಾಕ್‌ಪಾಟ್!

ದೆಹಲಿ ಗೆದ್ದ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಬಂಪರ್| ರಾಷ್ಟ್ರ ರಾಜಧಾನಿಯಲ್ಲಿ ಗೆದ್ದು ಬೀಗಿದ 48 ಗಂಟೆಯೊಳಗೇ ಮತ್ತೊಂದು ಸಿಹಿ ಸುದ್ದಿ| ಆಪ್‌ಗೆ ಸಿಕ್ಕ ಮತ್ತೊಂದು ಯಶಸ್ಸೇನು೮? ಇಲ್ಲಿದೆ ವಿವರ

AAP says 1 million people have joined party in 24 hours since Delhi victory
Author
Bangalore, First Published Feb 13, 2020, 3:47 PM IST | Last Updated Feb 13, 2020, 5:26 PM IST

ನವದೆಹಲಿ[ಫೆ.13]: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ ಆದ್ಮಿ ದಾಖಲೆಯ ಗೆಲುವು ಸಾಧಿಸಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿರುವ ಆಪ್ ಸತತ ಮೂರನೇ ಬಾರಿ ದೆಹಲಿಯಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ. ಐಐಟಿ ಪದವೀಧರ ಕೇಜ್ರೀವಾಲ್, ಭಾನುವಾರ ಮೂರನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಎಲ್ಲಾ ಸಂಭ್ರಮದ ನಡುವೆ ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಸಿಕ್ಕಿದೆ.

ಹೌದು ದೆಹಲಿ ಚುನಾವಣೆಯಲ್ಲಿ 62 ಕ್ಷೇತ್ರಗಳಲ್ಲಿ ಗೆದ್ದ ಖುಷಿಯಲ್ಲಿರುವ ಆಪ್ ಗೆ, ಜಯ ಸಾಧಿಸಿದ ಕೇವಲ 24 ಗಂಟೆಯೊಳಗೆ ಮತ್ತೊಂದು ಸಿಹಿ ಸಿಕ್ಕಿದೆ. ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಕ್ಕೇರಲು ಸಜ್ಜಾಗುತ್ತಿರುವ ಆಮ್ ಆದ್ಮಿ ಪಕ್ಷಕ್ಕೆ ದೇಶದಾದ್ಯಂತ 10 ಲಕ್ಷಕ್ಕೂ ಅಧಿಕ ಮಂದಿ ಕಾರ್ಯಕರ್ತರಾಗಿ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಸಂಬಂಧ ಟ್ವೀಟ್ ಮಾಡಲಾಗಿದ್ದು, 'ಭರ್ಜರಿ ಜಯ ಸಾಧಿಸಿದ 24 ಗಂಟೆಯೊಳಗೆ 1 ಮಿಲಿಯನ್ ಗೂ ಅಧಿಕ ಮಂದಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ' ಎಂದು ಟ್ವೀಟ್ ಮಾಡಿದೆ.

ಆಮ್ ಆದ್ಮಿ ಪಕ್ಷ ರಾಷ್ಟ್ರ ನಿರ್ಮಾಣಕ್ಕಾಗಿ ಅಭಿಯಾನವೊಂದನ್ನು ಆರಂಭಿಸಿದೆ. 'ರಾಷ್ಟ್ರ ನಿರ್ಮಾಣ್’ ಎಂಬ ಈ ಅಭಿಯಾನಕ್ಕೆ ಕೈ ಜೋಡಿಸಲು ಪಕ್ಷವು ಭಾರತೀಯರಿಗೆ ಕರೆ ನೀಡಿದೆ. ಇದೀಗ ಈ ಅಭಿಯಾನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಫೆಬ್ರವರಿ 13ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Latest Videos
Follow Us:
Download App:
  • android
  • ios