ದೆಹಲಿ(ಮೇ.16): ಆಧಾರ್ ಸಂಖ್ಯೆ ಇಲ್ಲ ಎಂದು ಯಾವುದೇ ವ್ಯಕ್ತಿಗೆ ಕೊರೋನಾ ಚಿಕಿತ್ಸೆ, ಆಸ್ಪತ್ರೆಗೆ ದಾಖಲಿಸದಿರುವುದು, ಲಸಿಕೆ, ಔಷಧ ಇಲ್ಲ ಎನ್ನುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಯಾವುದೇ ಅಗತ್ಯ ಸೇವೆಯನ್ನು ನಿರಾಕರಿಸಲು ನೆಪವಾಗಿ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಬಾರದು. ಆಧಾರ್ ಇಲ್ಲದಿದ್ದಾಗ ಸೇವೆಗಳು ಜನರಿಗೆ ಲಭ್ಯವಾಗಲು ಎಕ್ಸೆಪ್ಶನ್ ಹ್ಯಾಂಡ್ಲಿಂಗ್ ಮೆಕಾನಿಸಂ ಅನುಸರಿಸಬೇಕು. ವ್ಯಕ್ತಿಯೊಬ್ಬರು ಆಧಾರ್ ಹೊಂದಿರದಿದ್ದರೆ, ಆಧಾರ್ ಕಾಯ್ದೆಯ ಪ್ರಕಾರ ಅವಳು / ಅವನಿಗೆ ಅಗತ್ಯ ಸೇವೆಗಳನ್ನು ನಿರಾಕರಿಸಬಾರದು ಎಂದು ಪ್ರಾಧಿಕಾರ ಹೇಳಿಕೆಯಲ್ಲಿ ತಿಳಿಸಿದೆ.

ಅಚ್ಚರಿ ಎನಿಸಿದರೂ ಸತ್ಯ: ನಕಲಿ ಆದರೂ ಶೇ 90 ರಷ್ಟು ಜೀವ ಉಳಿಸಿದ ರೆಮ್‌ಡಿಸಿವಿರ್!

ಆಧಾರ್ ನೆಪದಲ್ಲಿ ಜನರಿಗೆ ವ್ಯಾಕ್ಸಿನೇಷನ್ ಮತ್ತು ಆಸ್ಪತ್ರೆಗೆ ದಾಖಲು ಮಾಡುವಂತಹ ಕೆಲವು ಅಗತ್ಯ ಸೇವೆಗಳನ್ನು ನಿರಾಕರಿಸಲಾಗುತ್ತಿದೆ ಎಂದು ಮಾಧ್ಯಮಗಳ ಒಂದು ಭಾಗ ವರದಿ ಮಾಡಿದ ನಂತರ ಯುಐಡಿಎಐ ಹೇಳಿಕೆ ನೀಡಿದೆ.

ಆದಾರೂ ಕೋವಿಡ್ -19 ಲಸಿಕೆ ಪಡೆಯಲು ಗುರುತಿನ ಚೀಟಿ (ಐಡಿ) ದಾಖಲೆ ಅಗತ್ಯವಿದೆ. "ಆರೋಗ್ಯ ಸೇತು" ಆ್ಯಪ್ ಪ್ರಕಾರ, ಜನರು ಆಧಾರ್ ಸಂಖ್ಯೆ, ಚಾಲನಾ ಪರವಾನಗಿ, ಪ್ಯಾನ್, ಪಾಸ್ಪೋರ್ಟ್, ಪಿಂಚಣಿ ಪಾಸ್ಬುಕ್, ಎನ್ಪಿಆರ್ ಸ್ಮಾರ್ಟ್ ಕಾರ್ಡ್ ಮತ್ತು ಮತದಾರರ ಐಡಿಗಳಲ್ಲಿ ಒಂದನ್ನು ಬಳಸಿಕೊಂಡು ಲಸಿಕೆಗಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಹುದು.