ಜನನ ಮತ್ತು ಮರಣ ನೋಂದಾವಣೆಗೆ ಆಧಾರ್ ಕಡ್ಡಾಯವಲ್ಲ; RGIಸ್ಪಷ್ಟನೆ!

ಬರ್ತ್ ಸರ್ಟಿಫಿಕೇಟ್ ಹಾಗೂ ಡೆತ್ ಸರ್ಟಿಫಿಕೇಟ್ ಮಾಡಿಸುವಾಗ ಕೆಲ ದಾಖಲೆ ಪತ್ರಗಳನ್ನು ನೀಡಬೇಕು. ಇಲ್ಲಿ ಸಾಕಷ್ಟು ಗೊಂದಲಗಳು ಕೂಡ ಇವೆ. ಹಲವು ಕೇಂದ್ರಗಳಲ್ಲಿ ಆಧಾರ್ ಕಡ್ಡಾಯ ಎಂದರೆ ಇನ್ನು ಕೆಲ ಕೇಂದ್ರಗಳಲ್ಲಿ ಆಧಾರ್ ಅಗತ್ಯವಿಲ್ಲ ಅನ್ನೋ ಉತ್ತರ ಕೇಳಿರುತ್ತೀರಿ. ಇದೀಗ ಈ ಗೊಂದಲಕ್ಕೆ ಭಾರತೀಯ ನೋಂದಾವಣಿ ಕಚೇರಿ ಸ್ಪಷ್ಟಪಡಿಸಿದೆ.

Aadhaar is not mandatory for the registration of births and deaths, the Registration says RGI ckm

ನವದೆಹಲಿ(ಅ.13):  ಸರ್ಕಾರಿ ದಾಖಲೆ ಪತ್ರಗಳು ಅತ್ಯಂತ ಅವಶ್ಯಕ. ಹಾಗಂತ ದಾಖಲೆ ಪತ್ರ ಮಾಡಿಸುವ ಕೆಲಸ ಮಾತ್ರ ಯಾರಿಗೂ ಬೇಡ ಅನ್ನೋ ಅನುಭವ ಹಲವರಿಗೆ ಆಗಿರುತ್ತದೆ. ಇದಕ್ಕೆ ಕಾರಣ ಒಂದೊಂದು ಕೇಂದ್ರದಲ್ಲಿ ಒಂದೊಂದು ದಾಖಲೆ ಕೇಳುತ್ತಾರೆ. ಇದರಲ್ಲಿ ಜನನ ಪ್ರಮಾಣ ಪತ್ರ ಹಾಗೂ ಮರಣ ಪ್ರಮಾಣ ಪತ್ರ ದಾಖಲೆಗೆ ಹಲವು ಕೇಂದ್ರಗಳಲ್ಲಿ ಆಧಾರ್ ಪ್ರತಿ ನೀಡುವುದು ಕಡ್ಡಾಯವಾಗಿದೆ. ಆದರೆ ಈ ಕುರಿತು ಭಾರತದ ರಿಜಿಸ್ಟ್ರಾರ್ ಜನರಲ್( RGI) ಸ್ಪಷ್ಟನೆ ನೀಡಿದೆ.

ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್-ಶೀಘ್ರದಲ್ಲೇ ಹೊಸ ನಿಯಮ!

ಜನನ ಮತ್ತು ಮರಣಗಳ ನೋಂದಣಿಗೆ ಆಧಾರ್ ಒದಗಿಸುವುದು ಕಡ್ಡಾಯವಲ್ಲ ಎಂದು  RGI ಹೇಳಿದೆ.  ಆಧಾರ್ ಸ್ವಯಂಪ್ರೇರಣೆಯಿಂದ ಒದಗಿಸಿದರೆ, ಅದನ್ನು ಯಾವುದೇ ದಾಖಲೆಯಲ್ಲಿ ಮುದ್ರಿಸಬಾರದು ಅಥವಾ ಜನನ ಮತ್ತು ಮರಣಗಳ ಯಾವುದೇ ಡೇಟಾಬೇಸ್‌ನಲ್ಲಿ ಸಂಗ್ರಹಿಸುವ ಅಗತ್ಯವಿಲ್ಲ ಎಂದು  RGI ಹೇಳಿದೆ..

ಜನನ ಮತ್ತು ಮರಣ ಪ್ರಮಾಣ ಪತ್ರದಲ್ಲಿರುವ ಗೊಂದಲ ಕುರಿತು ವಕೀಲ ಎಂ.ವಿ.ಎಸ್ ಅನಿಲ್ ಕುಮಾರ್ ರಾಜಗಿರಿ  ಮಾಹಿತಿ ಹಕ್ಕು ಕಾಯ್ದೆ ಅಡಿ ವಿವರಣೆ ಕೇಳಿದ್ದರು. ಈ ಕುರಿತ ಪ್ರತಿಕ್ರಿಯೆ ನೀಡಿದ  RGI, 2019ರಲ್ಲಿ ಹೊರಡಿಸಲಾದ ಪ್ರಕಟಣೆಯನ್ನು ಉಲ್ಲೇಖಿಸಿದೆ. 

ಜಿಯೋ, ಪೇಟಿಎಂಗೆ ಆಧಾರ್ ಜೋಡಿಸಿದ ಗ್ರಾಹಕರ ಮುಂದಿರುವ ಆಯ್ಕೆಗಳೇನು?

ಜನನ ಮತ್ತು ಮರಣ ಪ್ರಮಾಣ ಪತ್ರಗಳ ನೊಂದಣಿಯನ್ನು 1969ರ ಬರ್ತ್ ಹಾಗೂ ಡೆತ್ ಕಾಯ್ದೆ(RBD) ಅಡಿಯಲ್ಲಿ ಮಾಡಲಾಗುತ್ತದೆ.  ಮರಣ ಪ್ರಮಾಣ ನೊಂದಣಿ ವೇಳೆ ಸತ್ತವರ ಗುರುತು ಖಾತ್ರಿ ಪಡಿಸಲು ಆಧಾರ್ ಪ್ರತಿ ಅಗತ್ಯ ಎಂದು  2017ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಆದರೆ 2018ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಮರುಪರಿಶೀಲಿಸಿ, ಆಧಾರ್ ಪ್ರತಿ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು  RGI ಹೇಳಿದೆ.
 

Latest Videos
Follow Us:
Download App:
  • android
  • ios